ಜಮೀನು ವಿವಾದ ಇತ್ಯರ್ಥಕ್ಕಾಗಿ ಸ್ಮಶಾನದ ದಾರಿ ಮುಚ್ಚಿದ ಕುಟುಂಬ

By Sathish Kumar KH  |  First Published Nov 21, 2022, 6:38 PM IST

ನಡು ರಸ್ತೆಯಲ್ಲಿ ಶವವಿಟ್ಟು ಭಜನೆ ಮತ್ತು ಪ್ರತಿಭಟನೆ ಮಾಡುತ್ತಿರುವ ಗ್ರಾಮಸ್ಥರು
ಎಲ್ಲೆಡೆ ಸ್ಮಾಶಾನಕ್ಕೆ ದಾರಿ ಬೇಕೇ ಬೇಕು ಎನ್ನುವ ಕೂಗು.
ಸ್ಮಶಾನದ ದಾರಿಗೆ ಅಡ್ಡಗಟ್ಟಿರುವ ಕುಟುಂಬಸ್ಥರ ಮನವೊಲಿಸಲು ಓಡೊಡಿ ಬಂದ ತಹಶೀಲ್ದಾರ್


ವರದಿ: ಮುಸ್ತಾಕ್‌ ಪೀರ್ಜಾದೆ, ಏಷ್ಯಾನೆಟ್‌ ಸುವರ್ಣ ನ್ಯೂಸ್

ಬೆಳಗಾವಿ (ನ.21): ಸ್ಮಶಾನಕ್ಕೆ ದಾರಿ ಯಾವುದಯ್ಯ!!  ಇಷ್ಟು ದಿನ ಅಲ್ಲಿ ಯಾವುದು ತಂಟೆ ತಕರಾರು ಇಲ್ಲದೆ ಯಾರಾದ್ರೂ ತೀರಿ ಹೋದ್ರೆ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಕುಟುಂಬವೊಂದು ಇಡೀ ಊರಿಗೆ ಅಲ್ಲಿ ಸಂಸ್ಕಾರ ಮಾಡೋಕೆ ಬಿಡುರಲಿಲ್ಲ. ಇಷ್ಟು ದಿನ ಇಲ್ಲದ ಸಮಸ್ಯೆ ಈಗ ಏಕಾಏಕಿ ಆಗಿದ್ಧರಿಂದ ಜನ ಮಾಡಿದ್ದೇನು ಗೊತ್ತಾ ಈ ಸ್ಟೋರಿ ನೋಡಿ.

Latest Videos

undefined

ಸ್ಮಶಾನಕ್ಕೆ ಹೋಗುವ ದಾರಿಗೆ ಮುಳ್ಳಿನ ಬೇಲಿ (Thorn fence) ಹಾಕಿ ಮುಚ್ಚಿರುವ ರಸ್ತೆಯನ್ನ ತೆರವು ಮಾಡುತ್ತಿರುವ ಜನರು, ಅಡ್ಡಲಾಗಿ ನಿಲ್ಲಿಸಿರುವ ಎತ್ತಿನ ಬಂಡಿಯನ್ನ (Bullock cart) ಪಲ್ಟಿ ಹೊಡೆಸುತ್ತಿರುವ ಮತ್ತೊಂದು ಗುಂಪು, ಇತ್ತ ರಸ್ತೆಯ ಮೇಲೆ ಭಜನೆ ಮಾಡುತ್ತಾ ಪ್ರತಿಭಟನೆಗೆ (Protest) ಇಳಿದಿರೋ ಜನರನ್ನು ನಿಯಂತ್ರಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಣದಿವಾಡಿ (Nanadivadi) ಗ್ರಾಮದಲ್ಲಿ. ಬೆಳಗ್ಗೆ ಇದೇ ಗ್ರಾಮದ ಸುಧಾಕರ್ ನಾಯಕ್ (Sudhakar Nayak) ಎನ್ನುವವರು ಅನಾರೋಗ್ಯದಿಂದ ನಿಧನ ಹೊಂದಿದ್ದರು. ಅವರ ಅಂತ್ಯ ಸಂಸ್ಕಾರ (funeral) ಮಾಡಬೇಕು ಅಂತ ಊರಿನ ಜನ ಸಕಲ ಸಿದ್ದತೆ ನಡೆಸಿಕೊಂಡದ್ದರು. 

ಆದರೆ ಸ್ಮಶಾನ ಭೂಮಿಯ ಪಕ್ಕದಲ್ಲಿಯೇ ವಾಸವಿರೋ ಯಕ್ಸಂಬಿ ಕುಟುಂಬಸ್ಥರು (Yaksambi Family) ಸ್ಮಶಾನದಲ್ಲಿ ಯಾವುದೇ ಶವ ಹೂಳಲು ಬಿಡುವುದಿಲ್ಲ ಎಂದು ಸ್ಮಶಾನದ ದಾರಿಗೆ ಅಡ್ಡಲಾಗಿ ಚಕ್ಕಡಿ, ಮುಳ್ಳು ಹಚ್ಚಿ ರಸ್ತೆಯನ್ನು ಬಂದ್ (Road close) ಮಾಡಿದ್ದರು. ಇದನ್ನ ಸಹಿಸದ ಊರಿನ ಜನ ನಡು ರಸ್ತೆಯಲ್ಲಿಯೇ ಶವವಿಟ್ಟು ಪ್ರತಿಭಟನೆ ಮಾಡಿದರು. ಪ್ರತಿಭಟನೆ ಕೈ ಮೀರಿದಾಗ ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ಚಿದಂಬರ್ ಕುಲಕರ್ಣಿ (Chidambar kulkarni) ಹಾಗೂ ಚಿಕ್ಕೋಡಿ ಇನ್ಪಪೆಕ್ಟರ್ ದಾವಿಸಿ ಪ್ರತಿಭಟನಾಕಾರರ ಮನವೊಲಿಸಿದ್ದಾರೆ.

ನಣದಿವಾಡಿ ಗ್ರಾಮದ ಯಕ್ಸಂಬಿ ಕುಂಟುಂಬಸ್ಥರು ಈ ಸ್ಮಶಾನಕ್ಕೆ ಹೋಗುವ ದಾರಿ ನಮ್ಮದು ಎಂದು ಅದನ್ನ ಬಂದ್ ಮಾಡಿಸಿದ್ದಾರೆ. ಗ್ರಾಮದ ಸರ್ವೆ ನಂಬರ್ 81 ಮತ್ತು 82 ರಲ್ಲಿ ಇರುವ 7 ಗುಂಟೆ ಜಾಗದಲ್ಲಿ ಇರುವ ದಾರಿ ತಮ್ಮ ಸ್ವಂತದ್ದು (Own land) ಅಂತ ಅದಕ್ಕೆ ಬೇಲಿ ಹಾಕಿದ್ದು ಊರ ಜನರನ್ನು ಕಂಗೆಡಿಸಿತ್ತು.‌ ಇಷ್ಟು ದಿನ ಇಲ್ಲದ ತಕಕಾರು ಇವಾಗ ಯಾಕೆ ಎಂದು ಜನರೂ ಸಹ ಯಕ್ಸಂಬಿ ಕುಟುಂಬದ ವಿರುದ್ದ ಹಾರಿಹಾಯ್ದರು. ಇತ್ತ ಸರ್ವೆ ನಂಬರ್ 81 ಮತ್ತು 82ರ ಪ್ರಕರಣ ಇತ್ಯರ್ಥವಾಗದೇ ಜಮೀನು ಬಳಸಿ ಸ್ಮಶಾನಕ್ಕೆ ಹೋಗಲು ದಾರಿ ಬಿಡಲ್ಲ ಎಂದು ಯಕ್ಸಂಬಿ ಕುಟುಂಬಸ್ಥರು ಹಠ ಹಿಡಿದಿದ್ದರು. ಕೊನೆಗೂ ತಹಶೀಲ್ದಾರ್ ಮತ್ತು ಪೊಲೀಸರ ನೇತೃತ್ವದಲ್ಲಿ  ಈ ಕುಟುಂಬದ ಮನವೊಲಿಸಿ (persuade) ಮೃತ ಸುಧಾಕರ್ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಒಟ್ಟಿನಲ್ಲಿ ಊರಿನಲ್ಲಿ ಯಾರಾದರೂ ತೀರಿ ಹೋದರೆ ಪದೇ ಪದ  ಇದೇ ರೀತಿಯ ಘಟನೆಗಳು ಮರುಕಳಿಸೋದು ಸಹಜವಾಗಿವೆ. ನಣದಿವಾಡಿ ಗ್ರಾಮಕ್ಕೆ ರುಧ್ರಭೂಮಿಯ ಸಲುವಾಗಿ ಬೇರೆ ಭೂಮಿ ಮಂಜೂರು ಮಾಡಬೇಕು ಎನ್ನುವುದು ಗ್ರಾಮಸ್ಥರ ಆಶಯ. ಆದರೆ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಾರೆ ಕಾದು ನೋಡಬೇಕು.
 

click me!