ಹಿಂದುಗಳಿಗೆ ರಾಮ ಜನ್ಮಭೂಮಿ ಹಾಗೂ ಮುಸ್ಲಿಮರಿಗೆ ಮಸೀದಿ ಮುಖ್ಯವಾಗಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಾಯ ಮಾಡಬೇಕು. ಮಸೀದಿ ನಿರ್ಮಾಣಕ್ಕೆ ಹಿಂದುಗಳು ಸಹಾಯ ಮಾಡಿ ಸ್ನೇಹ ಸಂಬಂಧದಿಂದ ಇರಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿ(ನ.14): ಹಿಂದುಗಳಿಗೆ ರಾಮ ಜನ್ಮಭೂಮಿ ಹಾಗೂ ಮುಸ್ಲಿಮರಿಗೆ ಮಸೀದಿ ಮುಖ್ಯವಾಗಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಾಯ ಮಾಡಬೇಕು. ಮಸೀದಿ ನಿರ್ಮಾಣಕ್ಕೆ ಹಿಂದುಗಳು ಸಹಾಯ ಮಾಡಿ ಸ್ನೇಹ ಸಂಬಂಧದಿಂದ ಇರಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದು, ಮುಸ್ಲಿಂ ಸಂತರು ಸಭೆ ನಡೆಸಿದಾಗ ಹಿಂದುಗಳಿಗೆ ರಾಮ ಜನ್ಮಭೂಮಿ ಮತ್ತು ಮುಸ್ಲಿಮರಿಗೆ ಮಸೀದಿ ಮುಖ್ಯವಾಗಿತ್ತು. ಸುಪ್ರೀಂ ಕೋರ್ಟ್ ಯಾರಿಗೂ ಬೇಸರ ಆಗದ ರೀತಿಯಲ್ಲಿ ತೀರ್ಪು ನೀಡಿದೆ. ಹಿಂದುಗಳಿಗೆ ರಾಮಜನ್ಮಭೂಮಿ ಜಾಗವನ್ನು ನೀಡಿದರೆ ಮುಸ್ಲಿಮರಿಗೆ ಮಸೀದಿಯನ್ನು ನಿರ್ಮಿಸಲು ಜಾಗ ಕೊಟ್ಟಿದೆ ಎಂದಿದ್ದಾರೆ.
undefined
ಶಬರಿಮಲೆ ವಿವಾದ: ಮಹಿಳೆಯರ ಪ್ರವೇಶಕ್ಕಿಲ್ಲ ತಡೆ, ಆದರೆ ಇದೇ ತೀರ್ಪು ಅಂತಿಮವಲ್ಲ
ಈ ತೀರ್ಪನ್ನು ಅನೇಕ ಮುಸ್ಲಿಮರು ಒಪ್ಪಿಕೊಂಡಿದ್ದಾರೆ. ಹಲವು ದಶಕಗಳ ಪ್ರಕರಣ ಸೌಹಾರ್ದಯುತವಾಗಿ ಮುಕ್ತಾಯಗೊಂಡಿದ್ದು ಇನ್ನು ಮುಂದೆ ಸೌಹಾರ್ದವನ್ನು ಕೆಡಿಸುವ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಮುನ್ನಡೆಯಬೇಕಾಗಿದೆ. ದೇಶದ ಏಕತೆ ಮತ್ತು ಪ್ರಗತಿಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಮುಸ್ಲಿಮರು ರಾಮಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು. ಅದರಂತೆ ಹಿಂದುಗಳು ಮಸೀದಿಯನ್ನು ನಿರ್ಮಿಸಲು ಸಹಕರಿಸಿ ಸೌಹಾರ್ದತೆಯನ್ನು ಮೆರೆಯಬೇಕು ಎಂದು ತಿಳಿಸಿದ್ದಾರೆ.
ಕೆಲಸ ಕಾಯಂ ಆಮಿಷ: ಅತಿಥಿ ಉಪನ್ಯಾಸಕಿ ಮೇಲೆ ಅತ್ಯಾಚಾರ
ಬಾಬ್ರಿ ಮಸೀದಿಯಂತೆ ಮಥುರಾ ಮತ್ತು ಕಾಶಿಗಳಲ್ಲೂ ಇಂತಹ ಪ್ರಕರಣಗಳು ಮರುಕಳಿಸಬಹುದು ಎನ್ನುವ ವಾದವನ್ನು ಅವರು ಒಪ್ಪಲಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ಆರಂಭಿಸಿದ್ದು ಯಾವುದೇ ಸಂಘರ್ಷಕ್ಕೆ ಅವಕಾಶವಿಲ್ಲ. ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 3 ತಿಂಗಳಲ್ಲಿ ಟ್ರಸ್ಟ್ ರಚನೆ ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ಮಾಡಿದೆ. ಅದನ್ನು ಅವರೇ ತಿರ್ಮಾನ ಕೈಗೊಳ್ಳಬೇಕು ಎಂದರು.
192ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಲ್.ಕೆ.ಆಡ್ವಾಣಿ ಸೇರಿದಂತೆ ಇತರೆ ಕರ ಸೇವಕರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎನ್ನುವ ಹಿಂದೂ ಸಂಘಟನೆಗಳ ಬೇಡಿಕೆಗೆ ತಮ್ಮ ಸಹಮತವಿದೆ. ರಾಮ ಜನ್ಮಭೂಮಿ ನಿರ್ಮಾಣ ಕುರಿತಂತೆ ನಡೆದದ್ದು ಒಂದು ಚಳವಳಿ. ಅದೊಂದು ಸ್ವಾತಂತ್ರ್ಯ ಆಂದೋಲನ. ಅದಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಿಸಿರುವುದೇ ತಪ್ಪು. ಹೀಗಾಗಿ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟಿದ್ದಾರೆ.