ಸರ್ಕಾರಿ ಭೂಮಿ ಒತ್ತುವರಿ ಮಾಡಿ ಪ್ಲಾಂಟೇಶನ್ ಬೆಳೆ ಬೆಳೆಯುತ್ತಿರುವ ರೈತ ಕುಟುಂಬಕ್ಕೆ ಒತ್ತುವರಿ ಜಾಗವನ್ನು ಗುತ್ತಿಗೆ ನೀಡುವ ‘ಕರ್ನಾಟಕ ಭೂ ಕಂದಾಯ(ಮೂರನೇ ತಿದ್ದುಪಡಿ) ವಿಧೇಯಕ-2022’ಕ್ಕೆ ವಿಧಾನ ಪರಿಷತ್‌ನಲ್ಲಿ ಅನುಮೋದನೆ ನೀಡಿತು.
ವಿಧಾನ ಪರಿಷತ್ (ಡಿ.29) : ಸರ್ಕಾರಿ ಭೂಮಿ ಒತ್ತುವರಿ ಮಾಡಿ ಪ್ಲಾಂಟೇಶನ್ ಬೆಳೆ ಬೆಳೆಯುತ್ತಿರುವ ರೈತ ಕುಟುಂಬಕ್ಕೆ ಒತ್ತುವರಿ ಜಾಗವನ್ನು ಗುತ್ತಿಗೆ ನೀಡುವ ‘ಕರ್ನಾಟಕ ಭೂ ಕಂದಾಯ(ಮೂರನೇ ತಿದ್ದುಪಡಿ) ವಿಧೇಯಕ-2022’ಕ್ಕೆ ವಿಧಾನ ಪರಿಷತ್‌ನಲ್ಲಿ ಅನುಮೋದನೆ ನೀಡಿತು.
ಕಂದಾಯ ಸಚಿವ ಆರ್.ಅಶೋಕ ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿ, ರಾಜ್ಯದ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಭಾಗಗಳಲ್ಲಿ ಕಾಫಿ, ಏಲಕ್ಕಿ ವೆಣಸು, ಟೀ ಬೆಳೆಯಲಾಗುತ್ತಿದೆ. ಈ ಪ್ಲಾಂಟೇಶನ್ ಬೆಳೆಗಾರರು ಐದಾರು ದಶಕಗಳಿಂದ ತಮ್ಮ ಜಮೀನಿನ ಮಧ್ಯೆ ಸರ್ಕಾರಿ ಜಮೀನು ಒತ್ತುವರಿ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಈ ಜಮೀನನ್ನು ತೆರವುಗೊಳಿಸುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ಆ ಒತ್ತುವರಿ ಜಮೀನನನ್ನು ಷರತ್ತಿನ ಮೇಲೆ ಒಂದು ಕುಟುಂಬಕ್ಕೆ 30 ವರ್ಷಕ್ಕೆ ಗುತ್ತಿಗೆ ನೀಡಲಾಗುವುದು. ಈ 30 ವರ್ಷದ ಗುತ್ತಿಗೆಗೆ ಒಂದೇ ಬಾರಿ ನಿಗದಿತ ಹಣವನ್ನು ಸರ್ಕಾರಕ್ಕೆ ಪಡೆದುಕೊಳ್ಳಲಾಗುವುದು. ಇದರಿಂದ ಸರ್ಕಾರಕ್ಕೆ ಆದಾಯವೂ ಬರಲಿದೆ ಎಂದರು.
Belagavi: ವರ್ಷಕ್ಕೆ 4 ಸಾವಿರ ಯುವಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ: ಸಚಿವ ಅಶ್ವತ್ಥ್
ಸುವರ್ಣಸೌಧ ಆವರಣದಲ್ಲಿ 4 ಪ್ರತಿಮೆ ಸ್ಥಾಪನೆಗೆ ಇಂದು ಶಂಕು: ಅಶ್ವತ್ಥ್ ನಾರಾಯಣ :
ಸುವರ್ಣಸೌಧದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸುವ ಸಂಬಂಧ ಗುರುವಾರ ಶಂಕು ಸ್ಥಾಪನೆ ನೆರವೇರಲಿದೆ. ಬೆಳಿಗ್ಗೆ 10.15ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಭಯ ಸದನಗಳ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಸಚಿವ ಸಂಪುಟ ಸದಸ್ಯರು, ಶಾಸಕರು, ಸರ್ಕಾರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಳೆದ ವರ್ಷ ಅಧಿವೇಶನದಲ್ಲಿ ಈ ಕುರಿತು ಸರ್ಕಾರ ಘೋಷಣೆ ಮಾಡಿತ್ತು. ಅದರಂತೆ ಇದೀಗ ಗುದ್ದಲಿ ಪೂಜೆ ನೆರವೇರಲಿದೆ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಒಂದು ಕುಟುಂಬಕ್ಕೆ ಗರಿಷ್ಠ 25 ಎಕರೆ ವರೆಗೆ ಸರ್ಕಾರಿ ಒತ್ತುವರಿ ಭೂಮಿಯನ್ನು ಗುತ್ತಿಗೆಗೆ ನೀಡಲಾಗುವುದು. ಈ ಭೂಮಿಯಲ್ಲಿನ ಅರಣ್ಯ ಸಂಪತ್ತಿನ ರಕ್ಷಣೆ ಮಾಡಬೇಕು. ವಾಣಿಜ್ಯ ಉದ್ದೇಶಕ್ಕೆ ಈ ಭೂಮಿ ಬಳಕೆ ಮಾಡುವಂತಿಲ್ಲ ಎಂಬುದು ಸೇರಿದಂತೆ ಹಲವು ಷರತ್ತು ವಿಧಿಸಲಾಗುವುದು ಎಂದು ವಿವರಿಸಿದರು. ಐದು ಜಿಲ್ಲೆಗಳಲ್ಲಿ 10 ಎಕರೆ ಒಳಗೆ ತೋಟ ಹೊಂದಿರುವ 80,500 ರೈತರಿದ್ದಾರೆ. 20-25 ಎಕರೆ ಒಳಗೆ 950, 10-15 ಎಕರೆ ಒಳಗೆ 846 ಮಂದಿ ಹಾಗೂ 10-15 ಎಕರೆ ಒಳಗೆ 554 ಮಂದಿ ಇದ್ದಾರೆ. ಅಂದರೆ, ಶೇ.80ರಷ್ಟುಸಣ್ಣ ಹಿಡುವಳಿದಾರರೇ ಇದ್ದಾರೆ. ಅಂಥವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.