ಬೆಳಗಾವಿಯಲ್ಲಿ ಗ್ಯಾಸ್ ಪೈಪ್ ಲೀಕ್: ಹೊತ್ತಿ ಉರಿದ ಮನೆ

Published : Nov 04, 2019, 02:39 PM IST
ಬೆಳಗಾವಿಯಲ್ಲಿ ಗ್ಯಾಸ್ ಪೈಪ್ ಲೀಕ್: ಹೊತ್ತಿ ಉರಿದ ಮನೆ

ಸಾರಾಂಶ

ಗ್ಯಾಸ್ ಪೈಪ್ ಲೀಕ್ ಆಗಿ ಮನೆಗೆ ಬೆಂಕಿ| ಕಿತ್ತೂರು ತಾಲೂಕಿನ  ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ನಡೆದ ಘಟನೆ| ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ| ಪಟ್ಟಣದ ಜೋಳದ ಓಣಿಯ ಅಡವಯ್ಯ ಪತ್ರಿ ಮನೆಯಲ್ಲಿ ಘಟನೆ ನಡೆದಿದೆ| ಮನೆಯ ಮಂದಿಯಲ್ಲ ಹೊಲಕ್ಕೆ ಹೋದಾಗ ಹೊತ್ತಿಕೊಂಡ ಬೆಂಕಿ|   

ಬೆಳಗಾವಿ[ನ.4]: ಗ್ಯಾಸ್ ಪೈಪ್ ಲೀಕ್ ಆಗಿ ಮನೆಯೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ  ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಎಂ.ಕೆ.ಹುಬ್ಬಳ್ಳಿ ಪಟ್ಟಣದ ಜೋಳದ ಓಣಿಯ ಅಡವಯ್ಯ ಪತ್ರಿ ಮನೆಯಲ್ಲಿ ಘಟನೆ ನಡೆದಿದೆ. ಪಕ್ಕದಲ್ಲೇ ದೇವರ ಮುಂದೆ ಉರಿಯುತ್ತಿದ್ದ ದೀಪಕ್ಕೆ ಪೈಪ್ ಲೀಕ್ ಆಗಿ ಗ್ಯಾಸ್ ಆವರಿಸಿಕೊಂಡು ಬೆಂಕಿ ಹೊತ್ತಿಕೊಂಡಿದೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಂಕಿ ಹೊತ್ತಿದ್ದನ್ನು ಕಂಡ ಸ್ಥಳೀಯ ನಿವಾಸಿಗಳು ಮನೆಯ ಮಾಳಿಗೆ ಹೆಂಚು ತೆಗೆದು ಮೇಲಿಂದ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಮನೆಯ ಮಂದಿಯಲ್ಲ ಹೊಲಕ್ಕೆ ಹೋದಾಗ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಕಾರಣ, ಭಾರಿ ಅನಾಹುತ ತಪ್ಪಿದೆ. ಘಟನೆಯಲ್ಲಿ ಗೃಹಬಳಕೆಯ ಕೆಲ ವಸ್ತುಗಳು, ದಾಖಲೆಗಳು ಬೆಂಕಿಗಾಹುತಿಯಾಗಿವೆ. ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. 
 

PREV
click me!

Recommended Stories

Breaking News: ಬೆಳಗಾವಿಯಲ್ಲಿ ಬಿಜೆಪಿ ಹೈವೋಲ್ಟೇಜ್ ಸಭೆ; ಬಿಎಲ್ ಸಂತೋಷ್, ವಿಜಯೇಂದ್ರ ನೇತೃತ್ವದಲ್ಲಿ ಚುನಾವಣಾ ತಂತ್ರ!
ಸಿಎಂ ಸಿದ್ದರಾಮಯ್ಯ ಅವರೇ, ಕೇರಳ ವಲಸಿಗರ ಮೇಲೆ ತೋರಿಸೋ ಪ್ರೀತಿ; ಬೆಳಗಾವಿ ಸಂತ್ರಸ್ತರ ಮೇಲೆ ಏಕಿಲ್ಲ?