ಖಾಲಿ ಹುದ್ದೆಗಳ ನೇಮಕಾತಿಗೆ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಅರ್ಜಿ ಆಹ್ವಾನ

By Suvarna News  |  First Published Jan 30, 2021, 5:43 PM IST

ಬ್ಯಾಂಕ್ ಉದ್ಯೋಗ ಹೊಂದಬೇಕೆಂಬ ಕನಸು ಕಾಣುತ್ತಿರುವ ಯುವಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ಅವಕಾಶ ನೀಡುತ್ತಿದೆ.  ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.


ನವದೆಹಲಿ, (ಜ.30): ಪಂಜಾಬ್ ನ್ಯಾಷನಲ್ ಬ್ಯಾಂಕ್ ಪಿಎನ್‍ಬಿ 100 ಭದ್ರತಾ ಅಧಿಕಾರಿ (ಮ್ಯಾನೇಜರ್- ಸೆಕ್ಯುರಿಟಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಪಿಎನ್‍ಬಿ ನೇಮಕ ಮಾಡುವ ಅಭ್ಯರ್ಥಿಗಳನ್ನು ದೇಶದಲ್ಲಿರುವ ಇತರ ಯಾವುದೇ ಶಾಖೆಗೆ ಬೇಕಾದರೂ ನೇಮಕ ಮಾಡಬಹುದು.  ಈ ಹುದ್ದೆಗಳು ಅಂಗವಿಕಲರಿಗೆ ಸೂಕ್ತವಲ್ಲದ ಕಾರಣ ಅಂತಹವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

Latest Videos

undefined

ಸಾಮಾನ್ಯವರ್ಗದ ಅಭ್ಯರ್ಥಿಗೆ 40 ಸ್ಥಾನ, ಎಸ್ಸಿಗೆ 15, ಎಸ್ಟಿಗೆ 8, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 27, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 10 ಸ್ಥಾನಗಳನ್ನು ಮೀಸಲಿರಿಸಲಾಗಿದೆ. 

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಯಾವುದೇ ಪದವಿ ಪೂರ್ಣಗೊಳಿಸಿರಬೇಕು..

 ಇತರ ಅರ್ಹತೆ: ಸೇನೆ, ನೌಕಾಪಡೆ ಅಥವಾ ವಾಯುದಳದಲ್ಲಿ ಕನಿಷ್ಠ ಐದು ವರ್ಷ ಸೇವೆ ಸಲ್ಲಿಸಿದವರು, 6ನೇ ವೇತನ ಶ್ರೇಣಿಯಲ್ಲಿ ಗ್ರೇಡ್ ಪೇ 5400 ರೂ. / 7ನೇ ವೇತನ ಶ್ರೇಣಿಯ ಹುದ್ದೆ ಹೊಂದಿದವರು ಅಥವಾ ಪೊಲೀಸ್ ಇಲಾಖೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಕಡಿಮೆಯಿಲ್ಲದ ಸ್ಥಾನ ನಿಭಾಯಿಸಿರಬೇಕು. ಪ್ಯಾರಾ ಮಿಲಿಟರಿಯಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಕನಿಷ್ಠ 21 ವರ್ಷ. ಗರಿಷ್ಠ 35 ವರ್ಷ. SC, ST, ಜಮ್ಮು-ಕಾಶ್ಮೀರದ ಅಭ್ಯರ್ಥಿಗೆ 5 ವರ್ಷ, 1984ರ ಗಲಭೆಯಲ್ಲಿ ಮೃತಪಟ್ಟವರ ಮಕ್ಕಳು/ ಕುಟುಂಬ ಸದಸ್ಯರಿಗೆ, ಮಾಜಿ ಸೈನಿಕರಿಗೆ, ಇತರ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ. 

ವೇತನ ಶ್ರೇಣಿ: ಮಾಸಿಕ 48,170 ರೂ. ನಿಂದ 69,810 ರೂ. ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಅಭ್ಯರ್ಥಿಗಳ ಬರವಣಿಗೆ ಕೌಶಲ ಪರೀಕ್ಷಿಸುವುದಕ್ಕಾಗಿ ಸಂದರ್ಶನದಲ್ಲಿ ಪ್ರಬಂಧ/ ಪತ್ರ ಬರವಣಿಗೆಯ ಪರೀಕ್ಷೆ ನಡೆಸಲಾಗುವುದು.

ಅರ್ಜಿ ಶುಲ್ಕ: ಎಸ್‍ಸಿ, ಎಸ್‍ಟಿ, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ, ಆದರೆ ಅಂಚೆ ಶುಲ್ಕ 50 ರೂ. ಪಾವತಿಸಬೇಕು. ಉಳಿದ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಯಾಗಿದೆ.

ಅರ್ಜಿ ಡೌನ್‍ಲೋಡ್ ಮಾಡಿಕೊಳ್ಳಲು ಕೊನೇ ದಿನ: 13.2.2021

ಅರ್ಜಿ ಸಲ್ಲಿಸಲು ಕೊನೆಯ ದಿನ: 15.2.2021

ಅರ್ಜಿ ಸಲ್ಲಿಕೆ ವಿಳಾಸ: Chief Manager (Recruitment Section), HRM Division, Punjab National Bank,
ಅಧಿಸೂಚನೆಗೆ: https://bit.ly/3cj2M0c
ಹೆಚ್ಚಿನ ಮಾಹಿತಿಗೆ: http://www.pnbindia.in

click me!