IBPS Prelims Result 2021: ಬ್ಯಾಂಕಿಗ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ, ಈಗಲೇ ಚೆಕ್ ಮಾಡಿ

By Suvarna News  |  First Published Jan 2, 2022, 4:46 PM IST

ಬ್ಯಾಂಕುಗಳ ಸಿಬ್ಬಂದಿ ನೇಮಕ ಪ್ರಕ್ರಿಯೆಯನ್ನು ನಡೆಸುವ ಐಬಿಪಿಎಸ್,  ಪ್ರೊಬೆಷನರಿ ಅಧಿಕಾರಿಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಕ್ಲರ್ಕ್,   ಪ್ರಿಲಿಮ್ಸ್‌ 2021 ಪರೀಕ್ಷೆಯ ಫಲಿತಾಂಶ ಬಿಡುಗಡೆಗೊಂಡಿದೆ.


ಬೆಂಗಳೂರು(ಜ.2): ಬ್ಯಾಂಕುಗಳ ಸಿಬ್ಬಂದಿ ನೇಮಕ (Bank Staff Recrutiment) ಪ್ರಕ್ರಿಯೆಯನ್ನು ನಡೆಸುವ ಐಬಿಪಿಎಸ್ (IBPS) ಪ್ರೊಬೆಷನರಿ ಅಧಿಕಾರಿಗಳು (Probationary Officer -PO ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (RRB) ಕ್ಲರ್ಕ್, ಪೂರ್ವಭಾವಿ (Prelims)  2021 ಪರೀಕ್ಷೆಯ ಫಲಿತಾಂಶವನ್ನು ಜನವರಿ1 ರಂದು ಬಿಡುಗಡೆ ಮಾಡಲಾಗಿದೆ. ಇಲಾಖೆಯ ಅಧಿಕೃತ ವೆಬ್‌ತಾಣ https://ibps.in/ ನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶವನ್ನು  ವೀಕ್ಷಿಸಬಹುದು. ಜನವರಿ 31ರವರೆಗೆ ಫಲಿತಾಂಶಗಳು IBPSನ (Institute Of Banking Personal Selection) ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆನ್‌ಲೈನ್ ಮುಖ್ಯ ಪರೀಕ್ಷೆ ಮತ್ತು ಸಂದರ್ಶನಕ್ಕಾಗಿ IBPS RRB ಕ್ಲರ್ಕ್  ಆನ್‌ಲೈನ್ ಪರೀಕ್ಷೆ ಮತ್ತು IBPS RRB ಆಫೀಸರ್ ಸ್ಕೇಲ್ I, II ಮತ್ತು III ತಾತ್ಕಾಲಿಕ ಫಲಿತಾಂಶವನ್ನು ನೀಡಿದ್ದು, ಈ ಪಟ್ಟಿಯು ಸದ್ಯಕ್ಕೆ ತಾತ್ಕಾಲಿಕವಾಗಿದೆ ಮತ್ತು ಅರ್ಹತಾ ಮಾನದಂಡಗಳ ನೆರವೇರಿಕೆಗೆ ಒಳಪಟ್ಟು ಮುಂದಿನ ಪಟ್ಟಿ ಅಂತಿಮಗೊಳಿಸಲಾಗುವುದು ಎಂಬುದನ್ನು ಅಭ್ಯರ್ಥಿಗಳು ಗಮನಿಸಬೇಕು ಎಂದು ಐಬಿಪಿಎಸ್ ಸ್ಪಷ್ಟಪಡಿಸಿದೆ. ಜನವರಿ/ ಫೆಬ್ರವರಿ 2022 ರೊಳಗೆ ಆನ್‌ಲೈನ್ ಮೂಲಕ ಮುಖ್ಯ ಪರೀಕ್ಷೆಯ ಫಲಿತಾಂಶ ಬರುವ ಸಾಧ್ಯತೆಯಿದೆ. 

Tap to resize

Latest Videos

undefined

ಮುಖ್ಯ ಪರೀಕ್ಷೆ (Main Exam) ನಲ್ಲಿ ಪಾಸ್ ಆದವರನ್ನು  ಶಾರ್ಟ್‌ಲಿಸ್ಟ್ (Short List) ಮಾಡಲಾಗುತ್ತದೆ. ಆಯ್ದ  ಅಭ್ಯರ್ಥಿಗಳನ್ನು ಫೆಬ್ರವರಿ/ ಮಾರ್ಚ್ 2022 ರೊಳಗೆ ಸಂದರ್ಶನ (Interview)ಕ್ಕೆ ಕರೆಯಲಾಗುವುದು. ನಂತರ ಏಪ್ರಿಲ್ 2022ಕ್ಕೆ ಅಭ್ಯರ್ಥಿಗಳಿಗೆ ತಾತ್ಕಾಲಿಕವಾಗಿ ಸೇವೆಗೆ ನಿಯೋಜಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಐಬಿಪಿಎಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

South Indian Bank Recruitment 2022: ಸ್ಪೆಷಲಿಸ್ಟ್​ ಆಫೀಸರ್ ಸೇರಿ ಹಲವು ಹುದ್ದೆ

ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಲು ಲಿಂಕ್ ಓಪನ್ ಆಗದಿದ್ದಲ್ಲಿ ಚಿಂತಿಸುವ ಅಗತ್ಯವಿಲ್ಲ. ಸರ್ವರ್ ಬ್ಯುಸಿಯ ಕಾರಣ ಈ ರೀತಿಯ ತೊಂದರೆಯಾಗಬಹುದು.  ಸ್ವಲ್ಪ ಸಮಯ ಕಾದು ಮರಳಿ ಪ್ರಯತ್ನಿಸಿ ಎಂದು  ಐಬಿಪಿಎಸ್  ಮನವಿ ಮಾಡಿಕೊಂಡಿದೆ.

ಪ್ರೊಬೇಷನರಿ ಆಫೀಸರ್ಸ್ (probationary Officers), ಮ್ಯಾನೇಜ್‌ಮೆಂಟ್ ಟ್ರೈನೀ (Management Trainee)ಸೇರಿ ಹಲವು ನೇಮಕಾತಿ ಪ್ರಕ್ರಿಯೆಯನ್ನು IBPS  ಕಳೆದ ಅಕ್ಟೋಬರ್ - ನವೆಂಬರ್ ನಲ್ಲಿ ಹಮ್ಮಿಕೊಂಡಿತ್ತು. ಇದಕ್ಕೆ  2021ರ ಡಿಸೆಂಬರ್ 4 ಮತ್ತು 11 ರಂದು ಆನ್‌ಲೈನ್ ಪೂರ್ವಭಾವಿ ಪರೀಕ್ಷೆ (Preliminary Exam) ನಡೆದಿತ್ತು.

SBI Recruitment 2022: ಮ್ಯಾನೇಜರ್ ಸೇರಿ ಹಲವು ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಡಿಸೆಂಬರ್ 04 ಮತ್ತು 11 ರಂದು ಐಬಿಪಿಎಸ್ ಪಿಒ ಪೂರ್ವಭಾವಿ ಪರೀಕ್ಷೆಯನ್ನು  ದೇಶದಾದ್ಯಂತ ನಡೆಸಲಾಗಿತ್ತು. ಸುಮಾರು 5 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ  ಹಾಜರಾಗಿದ್ದರು. ಪ್ರೊಬೇಷನರಿ ಆಫೀಸರ್ ಹುದ್ದೆಗಳ ಫಲಿತಾಂಶದ ವರ್ಗಾವಾರು ನಿರೀಕ್ಷಿತ ಕಟ್‌ ಆಫ್‌ ಅಂಕಗಳನ್ನು ಇಂತಿದೆ.
ಸಾಮಾನ್ಯ ಅಭ್ಯರ್ಥಿಗಳು - 58 ರಿಂದ 61 ಕಟ್‌ ಆಫ್‌ ಅಂಕ
ಒಬಿಸಿ - 57 ರಿಂದ 60 ಕಟ್‌ ಆಫ್‌ ಅಂಕ
ಎಸ್‌ಸಿ - 50 ರಿಂದ 53 ಕಟ್‌ ಆಫ್‌ ಅಂಕ
ಎಸ್‌ಟಿ - 43 ರಿಂದ 45 ಕಟ್‌ ಆಫ್‌ ಅಂಕ
ಆರ್ಥಿಕವಾಗಿ ಹಿಂದುಳಿದ ವರ್ಗ -  58 ರಿಂದ 60 ಕಟ್‌ ಆಫ್‌ ಅಂಕ

ಈ ಬಾರಿಯ ಪ್ರೊಬೇಷನರಿ ಆಫೀಸರ್ ಪ್ರಿಲಿಮ್ಸ್‌ ಪರೀಕ್ಷೆಯು  ಕಳೆದ ಬಾರಿದೆ ಹೋಲಿಸಿದರೆ ಅಷ್ಟೊಂದು ಕಠಿಣವಾಗಿರದೆ ಸಾಧಾರಣವಾಗಿತ್ತು ಎಂದು ವರದಿಯಾಗಿತ್ತು.

ಐಬಿಪಿಎಸ್‌ ಪಿಒ ಪ್ರಿಲಿಮ್ಸ್‌ ಪರೀಕ್ಷೆಯನ್ನು 100 ಅಂಕಗಳಿಗೆ ರೀಸನಿಂಗ್ ಎಬಿಲಿಟಿ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಮತ್ತು ಇಂಗ್ಲಿಷ್‌ ವಿಷಯಗಳ ಪ್ರಶ್ನೆಗಳಿಗೆ ನಡೆಸಲಾಗುತ್ತದೆ. 60 ನಿಮಿಷಗಳ ಪರೀಕ್ಷೆ ಇರುತ್ತದೆ. ಪಾಸ್ ಆಗಿರುವ ಎಲ್ಲಾ ಅಭ್ಯರ್ಥಿಗಳಿಗೆ ನಮ್ಮ ಕಡೆಯಿಂದ ಅಭಿನಂದನೆಗಳು.

click me!