EXIM Bank Recruitment 2022: ಒಟ್ಟು 19 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

By Suvarna News  |  First Published Jul 23, 2022, 5:06 PM IST

ಭಾರತೀಯ ಎಕ್ಸಿಮ್ ಬ್ಯಾಂಕ್  ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು  ಆಗಸ್ಟ್ 6 ಕೊನೆಯ ದಿನವಾಗಿದೆ.


ಬೆಂಗಳೂರು(ಜು.23): ಭಾರತೀಯ ಎಕ್ಸಿಮ್ ಬ್ಯಾಂಕ್ (ರಫ್ತು ಮತ್ತು ಆಮದು ಬ್ಯಾಂಕ್) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.  ಈ ನೇಮಕಾತಿ ಚಾಲನೆಯ ಮೂಲಕ, 19 ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಬ್ಯಾಂಕ್ ಹೊಂದಿದೆ.    ಪ್ರಸ್ತಾವಿತ ಫ್ಯಾಕ್ಟರಿಂಗ್ ಕಾರ್ಯಾಚರಣೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅನ್‌ಲೈನ್ ಮೂಲಕ  ಅರ್ಜಿ ಸಲ್ಲಿಸಲು  ಆಗಸ್ಟ್ 6 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು  ಎಕ್ಸಿಮ್ ಬ್ಯಾಂಕ್ ನ ಅಧಿಕೃತ ವೆಬ್‌ತಾಣ https://www.eximbankindia.in/ ಗೆ ಭೇಟಿ ನೀಡಿ. ಅಭ್ಯರ್ಥಿಗಳನ್ನು OC- ಬಿಸಿನೆಸ್ ಡೆವಲಪ್‌ಮೆಂಟ್ ಹೆಡ್, OC- ಬಿಸಿನೆಸ್ ಡೆವಲಪ್‌ಮೆಂಟ್, OC- ಕ್ರೆಡಿಟ್ ಹೆಡ್, OC- ಕ್ರೆಡಿಟ್, OC- ಕ್ರೆಡಿಟ್ ಅಡ್ಮಿನಿಸ್ಟ್ರೇಷನ್, OC- ಆಪರೇಷನ್ ಹೆಡ್, OC- ಕಾರ್ಯಾಚರಣೆಗಳು ಮತ್ತು OC- ಕ್ರೆಡಿಟ್ ಕಂಟ್ರೋಲ್ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
OC –ಬಿಸಿನೆಸ್ ಡೆವಲಪ್‌ಮೆಂಟ್ ಹೆಡ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು   ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ಹಣಕಾಸು/ಮಾರ್ಕೆಟಿಂಗ್‌ನಲ್ಲಿ MBA/PGDBA ಅಥವಾ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ (ICAI) ಚಾರ್ಟರ್ಡ್ ಅಕೌಂಟೆಂಟ್‌ಗಳು (CA). ಕನಿಷ್ಠ 15 ವರ್ಷಗಳ ನಂತರದ ಅರ್ಹತೆಯ ಅನುಭವದೊಂದಿಗೆ BFSI ವಲಯದಲ್ಲಿ ಅನುಭವ ಹೊಂದಿರಬೇಕು.

Tap to resize

Latest Videos

undefined

OC – ವ್ಯಾಪಾರ ಅಭಿವೃದ್ಧಿ  ಹುದ್ದೆಗೆ  ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ  ಹಣಕಾಸು/ಮಾರ್ಕೆಟಿಂಗ್‌ನಲ್ಲಿ MBA/PGDBA ಕನಿಷ್ಠ 5 ವರ್ಷಗಳ ನಂತರದ ಅರ್ಹತಾ ಅನುಭವದೊಂದಿಗೆ BFSI ವಲಯದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

OC - ​​ಕ್ರೆಡಿಟ್ ಹೆಡ್  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು   ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ    ಹಣಕಾಸು/ಅಕೌಂಟಿಂಗ್‌ನಲ್ಲಿ MBA/PGDBA, ಅಥವಾ  ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಚಾರ್ಟರ್ಡ್ ಅಕೌಂಟೆಂಟ್‌ (CA) ಮಾಡಿರಬೇಕು. ಅಭ್ಯರ್ಥಿಗಳು BFSI ವಲಯದಲ್ಲಿ ಕನಿಷ್ಠ 15 ವರ್ಷಗಳ ನಂತರದ ಅರ್ಹತೆಯ ಅನುಭವವನ್ನು ಹೊಂದಿರುತ್ತಾರೆ.

OC - ​​ಕ್ರೆಡಿಟ್  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು   ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ / ಸಂಸ್ಥೆಯಿಂದ    ಹಣಕಾಸು/ಅಕೌಂಟಿಂಗ್‌ನಲ್ಲಿ MBA/PGDBA, ಅಥವಾ  ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಚಾರ್ಟರ್ಡ್ ಅಕೌಂಟೆಂಟ್‌ (CA) ಮಾಡಿರಬೇಕು. ಅಭ್ಯರ್ಥಿಗಳು BFSI ವಲಯದಲ್ಲಿ ಕನಿಷ್ಠ  5 ವರ್ಷಗಳ ನಂತರದ ಅರ್ಹತೆಯ ಅನುಭವವನ್ನು ಹೊಂದಿರುತ್ತಾರೆ.

OC – ಕ್ರೆಡಿಟ್ ಅಡ್ಮಿನಿಸ್ಟ್ರೇಷನ್  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ  MBA/PGDBA  ನಲ್ಲಿ  ಹಣಕಾಸು/ಅಕೌಂಟಿಂಗ್‌ನಲ್ಲಿ ವಿಶೇಷತೆಯೊಂದಿಗೆ ಪದವಿ ಮಾಡಿರಬೇಕು. BFSI ವಲಯದಲ್ಲಿ  ಕನಿಷ್ಠ 5 ವರ್ಷಗಳ ನಂತರದ ಅರ್ಹತಾ ಅನುಭವ ಹೊಂದಿರಬೇಕು. 

OC – ಆಪರೇಷನ್ ಹೆಡ್  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ  MBA/PGDBA ನಲ್ಲಿ   ಹಣಕಾಸು ವಿಷಯದಲ್ಲಿ  ಪದವಿ ಪಡೆದಿರಬೇಕು.   BFSI ವಲಯದಲ್ಲಿ ಕನಿಷ್ಠ 15 ವರ್ಷಗಳ ನಂತರದ ಅರ್ಹತಾ  ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

OC – ಕಾರ್ಯಾಚರಣೆಗಳು  ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು   ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ  MBA/PGDBA/ ನಲ್ಲಿ  ಹಣಕಾಸು/ಅಕೌಂಟಿಂಗ್‌ನಲ್ಲಿ  ಪದವಿ. BFSI ವಲಯದಲ್ಲಿ ಕನಿಷ್ಠ 5 ವರ್ಷಗಳ  ಅರ್ಹತಾ ಅನುಭವ ಹೊಂದಿರಬೇಕು.

OC – ಕ್ರೆಡಿಟ್ ಕಂಟ್ರೋಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು  ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ MBA/PGDBA/ ಹಣಕಾಸು/ಅಕೌಂಟಿಂಗ್‌ನಲ್ಲಿ  ಪದವಿ ಮಾಡಿರಬೇಕು. BFSI ವಲಯದಲ್ಲಿ  ಕನಿಷ್ಠ 5 ವರ್ಷಗಳ  ಅರ್ಹತಾ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

click me!