ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ

By Kannadaprabha NewsFirst Published Jan 14, 2020, 8:52 AM IST
Highlights

ಆರ್ಥಿಕ ಹಿಂಜರಿತದಿಂದ ದೇಶದಲ್ಲಿ 16 ಲಕ್ಷ ಉದ್ಯೋಗ ನಷ್ಟ: ಎಸ್‌ಬಿಐ| ಅಸ್ಸಾಂ, ಬಿಹಾರದಂತಹ ರಾಜ್ಯಗಳಿಗೆ ಹಣದ ಹರಿವೂ ಕಡಿತ

ಮುಂಬೈ[ಜ.14]: ದೇಶದಲ್ಲಿ ಉದ್ಭವವಾಗಿರುವ ಆರ್ಥಿಕ ಹಿಂಜರಿತ ಪರಿಸ್ಥಿತಿ ಉದ್ಯೋಗ ಸೃಷ್ಟಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಲು ಆರಂಭಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಹೇಳಿದೆ. 2018-19ನೇ ಸಾಲಿಗೆ ಹೋಲಿಸಿದರೆ 2019-20ನೇ ಸಾಲಿನಲ್ಲಿ ಒಟ್ಟಾರೆ ಉದ್ಯೋಗಗಳ ಸಂಖ್ಯೆ 16 ಲಕ್ಷದಷ್ಟುಕಡಿತಗೊಳ್ಳುವ ಸಾಧ್ಯತೆ ಇದೆ ಎಂದೂ ಅಂದಾಜಿಸಿದೆ.

ಹಿಂಜರಿತದ ಕಾರಣ ವಿವಿಧ ಕಂಪನಿಗಳು ಗುತ್ತಿಗೆ ನೌಕರರ ಸಂಖ್ಯೆಯನ್ನು ಇಳಿಕೆ ಮಾಡುತ್ತಿರುವುದರಿಂದ ವಲಸೆ ಹೆಚ್ಚಿರುವ ರಾಜಸ್ಥಾನ, ಬಿಹಾರ, ಉತ್ತರಪ್ರದೇಶ ಹಾಗೂ ಅಸ್ಸಾಂನಂತಹ ರಾಜ್ಯಗಳಿಗೆ ಉದ್ಯೋಗಿಗಳು ಕಳುಹಿಸುವ ಹಣದ ಪ್ರಮಾಣವೂ ಇಳಿಮುಖವಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

ಬಜೆಟ್ 2020 : ಜನತೆಯಿಂದ ಸಲಹೆ ಆಹ್ವಾನಿಸಿದ ಪ್ರಧಾನಿ ಮೋದಿ

ಭವಿಷ್ಯ ನಿಧಿ ಸಂಸ್ಥೆ ಅಂಕಿ-ಅಂಶಗಳ ಪ್ರಕಾರ 2018-19ನೇ ಸಾಲಿನಲ್ಲಿ 89.7 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು. 2019-20ನೇ ಸಾಲಿನ ಏಪ್ರಿಲ್‌- ಅಕ್ಟೋಬರ್‌ ಅವಧಿಯಲ್ಲಿ 43.1 ಲಕ್ಷ ಉದ್ಯೋಗಗಳಷ್ಟೇ ಸೃಷ್ಟಿಯಾಗಿವೆ. ಇಡೀ ವರ್ಷವನ್ನು ಅಂದಾಜು ಮಾಡಿದರೆ 73.9 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

click me!