ಸೇತುವೆ ಕಂಬಿಗೆ ಸಿಲುಕಿದ್ದ ಕಸ- ಕಡ್ಡಿ ತೆರವು ಕಾರ್ಯ| ಸೇತುವೆ ಮೇಲೆ ನೀರು ಬಂದಿದ್ದರಿಂದ ಕಳೆದ ಎರಡು ದಿನಗಳಿಂದ ವಾಹನ ಸಂಚಾರ ಸ್ಥಗಿತ|ಗುರುವಾರ ಸೇತುವೆ ಮೇಲಿನ ನೀರು ಇಳಿಮುಖವಾಗಿದ್ದರಿಂದ ಪಾದಚಾರಿಗಳ ಸಂಚಾರ ಆರಂಭ|
ಕಂಪ್ಲಿ[ಅ.25]: ತುಂಗಭದ್ರಾ ಜಲಾಶಯದಿಂದ ಇಲ್ಲಿನ ತುಂಗಭದ್ರಾ ನದಿಗೆ ಹರಿಬಿಡಲಾಗಿದ್ದ ಭಾರಿ ಪ್ರಮಾಣದ ನೀರು ಕಡಿಮೆಯಾಗಿದ್ದು,ಕಳೆದ 2 ದಿನಗಳ ಮುಳುಗಡೆಯಾಗಿದ್ದ ಕಂಪ್ಲಿ- ಕೋಟೆಯ ಕಂಪ್ಲಿ- ಗಂಗಾವತಿ ಸೇತುವೆ ಮೇಲಿನ ಜಲಪ್ರವಾಹ ಗುರುವಾರ ಇಳಿಮುಖವಾಗಿದೆ.
ಪುರಸಭೆಯ 1 ಜೆಸಿಬಿ, 6 ಪೌರಕಾರ್ಮಿಕರು ಕಂಪ್ಲಿ- ಗಂಗಾವತಿ ಸೇತುವೆ ಮೇಲಿನ ರಕ್ಷಣಾ ಕಂಬಿಗಳಿಗೆ ನದಿ ಪ್ರವಾಹದೊಂದಿಗೆ ಬಂದು ಸಿಲುಕಿದ್ದ ಗಿಡ, ಮರ, ಬಳ್ಳಿಗಳನ್ನು ತೆರವುಗೊಳಿಸಿದರು. ನದಿ ಪ್ರವಾಹಕ್ಕೆ ಭಯಭೀತರಾಗಿದ್ದ ಕಂಪ್ಲಿ,ಕೋಟೆ, ನಂ. 5 ಬೆಳಗೋಡುಹಾಳ್, ನಂ.3 ಸಣಾಪುರ, ಇಟಿಗಿ, ನಂ. 2 ಮುದ್ದಾಪುರ ಜನತೆ ಹಾಗೂ ರೈತರು ನಿರಾಳರಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸೇತುವೆ ಮೇಲೆ ನೀರು ಬಂದಿದ್ದರಿಂದ ಕಳೆದ ಎರಡು ದಿನಗಳಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುರುವಾರ ಸೇತುವೆ ಮೇಲಿನ ನೀರು ಇಳಿಮುಖವಾಗಿದ್ದರಿಂದ ಪಾದಚಾರಿಗಳ ಸಂಚಾರ ಮಾತ್ರ ನಡೆದಿದೆ. ತಹಸೀಲ್ದಾರ್ ಗೌಸಿಯಾ ಬೇಗಂ ಮಾತನಾಡಿ, ಸೇತುವೆ ಮೇಲಿನ ರಕ್ಷಣಾ ಕಂಬಿಗಳ ದುರಸ್ತಿ ಕಾರ್ಯ ನಡೆಯಬೇಕು. ಪಿಡಬ್ಲ್ಯುಡಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೇತುವೆ ಸಾಮರ್ಥ್ಯ ಪರಿಶೀಲಿಸಿ ವರದಿ ನೀಡಬೇಕು. ಆ ಬಳಿಕ ವಾಹನಗಳ ಸಂಚಾರಕ್ಕೆ ಒಪ್ಪಿಗೆ ಕೊಡಲಾಗುವುದು ಎಂದರು .ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್ ಸಿಬ್ಬಂದಿ ಇದ್ದರು.