ಭಾರೀ ಮಳೆಯಿಂದ ಸುಮಾರು 50 ಮನೆಗಳಿಗೆ ನುಗ್ಗಿದ ನೀರು| ಜಿಲ್ಲೆಯ ಕಂಕನವಾಡಿ ಗ್ರಾಮದಲ್ಲಿ ನಡೆದ ಘಟನೆ| ಏಕಾಏಕಿ ಮೆನಗಳಿಗೆ ನೀರು ನುಗ್ಗಿದ ಪರಿಣಾಮ ಹೈರಾಣಾದ ಮಕ್ಕಳು, ದನಕರುಗಳು| ಮನೆಯಲ್ಲಿರುವ ವಸ್ತುಗಳೆಲ್ಲ ನೀರಿನಲ್ಲೆ ಇವೆ| ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ಬಂದಿದ್ದಾರೆ| ಕಳೆದ ಎರಡು ತಿಂಗಳ ಹಿಂದಷ್ಟೇ ಭೀಕರ ಜಪ ಪ್ರವಾಹವನ್ನು ಎದುರಿಸಿದ್ದ ಗ್ರಾಮದ ಜನತೆಗೆ ಮತ್ತೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನೆರೆ ಪೀಡಿತ ಜನರು ಕಂಗಾಲಾಗಿದ್ದಾರೆ|
ಬಾಗಲಕೋಟೆ[ಅ.21]: ತಡರಾತ್ರಿ ಸುರಿದ ಮಳೆಯಿಂದ ಸುಮಾರು 50 ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ಕಂಕನವಾಡಿ ಗ್ರಾಮದಲ್ಲಿ ನಡೆದಿದೆ. ಏಕಾಏಕಿ ಮೆನಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮದ ಮಕ್ಕಳು, ದನಕರುಗಳು ಹೈರಾಣಾಗಿದ್ದಾರೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮನೆಯಲ್ಲಿರುವ ವಸ್ತುಗಳೆಲ್ಲ ನೀರಿನಲ್ಲೆ ಇವೆ. ಜಾನುವಾರುಗಳು ಮಳೆ ನೀರಲ್ಲೆ ನಿಂತು ನಿಂತು ಹೈರಾಣಾಗಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೀಗೆ ಮನೆಗಳಿಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಸ್ಥಳಗಳಿಗೆ ಬಂದಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೇ ಭೀಕರ ಜಪ ಪ್ರವಾಹವನ್ನು ಎದುರಿಸಿದ್ದ ಗ್ರಾಮದ ಜನತೆಗೆ ಮತ್ತೆ ಮನೆಗಳಿಗೆ ನೀರು ನುಗ್ಗಿದ್ದರಿಂದ ನೆರೆ ಪೀಡಿತ ಜನರು ಕಂಗಾಲಾಗಿದ್ದಾರೆ. ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರಿಂದ ಅಧಿಕಾರಿಗಳು ನೆರವಿಗೆ ಬಂದಿಲ್ಲ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದಾರೆ.