ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆ| ಮುಧೋಳ ನಗರಸಭೆಯ ಆವರಣಕ್ಕೆ ನುಗ್ಗಿದ ಚರಂಡಿ ನೀರು| ನಿರಂತರವಾಗಿ ಮಳೆಯಾಗಿದ್ದರಿಂದ ನಗರದ ಎಲ್ಲ ಚರಂಡಿಗಳು ತುಂಬಿ ಹರಿದಿವೆ| ಚರಂಡಿ ತುಂಬಿ ಹರಿದ ಪರಿಣಾಮ ನಗರಸಭೆಯ ಆವರಣಕ್ಕೆ ನೀರು ನುಗ್ಗಿದೆ| ನಗರಸಭೆಗೆ ಸೇರಿದ ವಾಹನಗಳು ನೀರಿನಲ್ಲಿ ನಿಂತಿವೆ| ನಗರಸಭೆಗೆ ತರಳೋದಕ್ಕೂ ಜನರು ಪರದಾಡುವಂತಹ ಪರಿಸ್ಥಿತಿ|
ಬಾಗಲಕೋಟೆ[ಅ.21]: ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಮುಧೋಳ ನಗರಸಭೆಯ ಆವರಣಕ್ಕೆ ಚರಂಡಿ ನೀರು ನುಗ್ಗಿದೆ. ನಿರಂತರವಾಗಿ ಮಳೆಯಾಗಿದ್ದರಿಂದ ನಗರದ ಎಲ್ಲ ಚರಂಡಿಗಳು ತುಂಬಿ ಹರಿದಿವೆ. ಹೀಗಾಗಿ ನಗರಸಭೆಯ ಪಕ್ಕದಲ್ಲಿರುವ ಚರಂಡಿ ಸಹ ತುಂಬಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚರಂಡಿ ತುಂಬಿ ಹರಿದ ಪರಿಣಾಮ ನಗರಸಭೆಯ ಆವರಣಕ್ಕೆ ನೀರು ನುಗ್ಗಿದೆ. ಇದರ ಪರಿಣಾಮ ನಗರಸಭೆಗೆ ಸೇರಿದ ವಾಹನಗಳು ನೀರಿನಲ್ಲಿ ನಿಂತಿವೆ. ಹೀಗಾಗಿ ನಗರಸಭೆಗೆ ತರಳೋದಕ್ಕೂ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಬಂದಿದ್ದ ಪ್ರವಾಹದಿಂದ ಮುಧೋಳ ನಗರದ ಕೆಲವು ಬಡಾವಣೆಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ಇದೀಗ ಮತ್ತೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.