ಜಮಖಂಡಿ: ಪಾರ್ಕ್‌ನಲ್ಲಿನ ದೇವಸ್ಥಾನ ನೆಲಸಮಕ್ಕೆ ಸಿಡಿದೆದ್ದ ಜನ

By Web Desk  |  First Published Nov 13, 2019, 11:08 AM IST

ದೇವಸ್ಥಾನ ನೆಲಸಮಗೊಳಿಸಿದ ನಗರಸಭೆ ಕ್ರಮ ಖಂಡಿಸಿದ ಹಿಂದೂ ಭಕ್ತರು|ಬಡಾವಣೆ ಸಾವಿರಾರು ಭಕ್ತರು ದಿನನಿತ್ಯ ಪೂಜೆ, ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ| ನಗರಸಭೆ ಏಕಾಎಕಿ ಜೆಸಿಬಿಯಿಂದ ನೆಲಸಮಗೊಳಿಸಿದ್ದು, ಇದರಿಂದ ಕೋಮುಸೌಹಾರ್ದತೆಗೆ ಧಕ್ಕೆ ತಂದಂತಾಗಿದೆ| ಕೂಡಲೇ ನಗರಸಭೆ ಮೊದಲಿದ್ದಂತೆ ದೇವಸ್ಥಾನವನ್ನು ನಿರ್ಮಿಸಿಕೊಡಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ| ಇಲ್ಲದಿದ್ದರೆ ಉಗ್ರ ಹೋರಟ ನಡೆಸುವುದಾಗಿ ಎಚ್ಚರಿಸಿದ್ದಾರೆ|


ಜಮಖಂಡಿ[ನ.13]: ಇಲ್ಲಿನ ನಗರಸಭೆ ಸಿಬ್ಬಂದಿ ಉದ್ಯಾನದಲ್ಲಿ ನಿರ್ಮಿಸಿದ ದೇವಸ್ಥಾನವನ್ನು ನೆಲಸಮಗೊಳಿಸಿದ ನಗರಸಭೆ ಕ್ರಮವನ್ನು ಹಿಂದೂ ಭಕ್ತರು ತೀವ್ರವಾಗಿ ಖಂಡಿಸಿದ್ದಾರೆ. ಇಲ್ಲಿನ ಟೀಚರ್ಸ್‌ ಕಾಲೋನಿಯಲ್ಲಿ 2013 ರಲ್ಲಿ ದಿ.ಸಿದ್ದು ನ್ಯಾಮಗೌಡ ಅವರು ಹನುಮಾನ ಮತ್ತು ಗಣೇಶ ದೇವಸ್ಥಾನಕ್ಕೆ ಶಂಕು ಸ್ಥಾಪನೆ ಮಾಡಿದ್ದು, ದೇವಸ್ಥಾನಕ್ಕೆ ಅನುದಾನ ನೀಡಿದ್ದರು. 

ಈ ಬಡಾವಣೆ ಸಾವಿರಾರು ಭಕ್ತರು ದಿನನಿತ್ಯ ಪೂಜೆ, ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಮಂಗಳವಾರ ನಗರಸಭೆ ಏಕಾಎಕಿ ಜೆಸಿಬಿಯಿಂದ ನೆಲಸಮಗೊಳಿಸಿದ್ದು, ಇದರಿಂದ ಕೋಮುಸೌಹಾರ್ದತೆಗೆ ಧಕ್ಕೆ ತಂದಂತಾಗಿದ್ದು, ಕೂಡಲೇ ನಗರಸಭೆ ಮೊದಲಿದ್ದಂತೆ ದೇವಸ್ಥಾನವನ್ನು ನಿರ್ಮಿಸಿಕೊಡಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಗ್ರ ಹೋರಟ ನಡೆಸುವುದಾಗಿ ಎಚ್ಚರಿಸಿದ್ದಾರೆ. 

Tap to resize

Latest Videos

ಘೇರಾವು: 

ಟೀಚರ್ಸ್‌ ಕಾಲೋನಿಯ ಯಾವುದೇ ನಿವಾಸಿಗಳಿಗೆ ಮುನ್ನಚ್ಚರಿಕೆಯಾಗಿ ಯಾವುದೇ ನೋಟೀಸ್ ನೀಡದೆ ದೇವಸ್ಥಾನ ಕೆಡವಲು ಮುಂದಾದ ನಗರಸಭೆ ಅಧಿಕಾರಿಗಳನ್ನು ಅಲ್ಲಿನ ನಿವಾಸಿಗಳು ಆಕ್ರೋಶಗೊಂಡು ಘೇರಾವು ಹಾಕಿದ್ದರು. ನಗರಸಭೆ ಅಧಿಕಾರಿಗಳು ದೇವಸ್ಥಾನ ತೆರವುಗೊಳಸಿಲು ಮುಂದಾಗಿದ್ದು, ಪೋಲೀಸ್ ಇಲಾಖೆಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ.ಪರಿಸ್ಥಿತಿ ಕೈಮೀರಿ ಹೋಗುವ ಹಂತದಲ್ಲಿದ್ದನ್ನು ಅರಿತ ಪೋಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿತ್ತು. ನಗರಸಭೆ ಕೆಲವು ಕೋಮಿನ ಜನರ ಮಾತು ಕೇಳಿ ಹಿಂದೂ ಧರ್ಮದ ದೃವಸ್ಥಾನವನ್ನು ತೆರವುಗೊಳಿಸಿದ್ದು, ನಗರಸಭೆ ಅಧಿಕಾರಿಗಳು ಕೆಲವೇ ಕೆಲವು ಕೋಮಿನ ಜನರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ದೇವಸ್ಥಾನವನ್ನು ಮತ್ತೇ ಕಟ್ಟಿಸಿ ಕೊಡದಿದ್ದರೆ ನಗರಸಭೆ ಎದುರು ಅಮರಣ ಉಪವಾಸ ನಡೆಸುವುದಾಗಿ ಪ್ರದೀಪ ಹಂಚನಾಳ ಒತ್ತಾಯಿಸಿದರು. ಸುನಿತಾ ವಾಗ್ಮೋರೆ, ಯಶೋದಾ ಹಂಚನಾಳ, ಶಶಿಕಲಾ ಘಾಟಗೆ,ಮಲ್ಲಮ್ಮ ವಾಯಿಟೆ, ಶಶಿಕಾಂತ ಪರಲಂಕ, ರವಿ ಬಬಲೇಶ್ವರ, ರವಿ ಜಂಬಗಿ, ಪ್ರದೀಪ ಹಂಚನಾಳ ಸೇರಿದಂತೆ ನೂರಾರು ನಾಗರೀಕರು ಪಾಲ್ಗೊಂಡಿದ್ದರು.

ನಗರಸಭೆ ಆಧೀನದಲ್ಲಿನ ಉದ್ಯಾನದಲ್ಲಿ ಅನಧಿಕೃತವಾಗಿ ದೇವಸ್ಥಾನ ನಿರ್ಮಿಸಿದ್ದನ್ನು ಪ್ರಶ್ನಿಸಿ ಇಲ್ಲಿನ ಬೇರೆಕೋಮಿನ ನಾಗರಿಕರೊಬ್ಬರು ಬೆಂಗಳೂರು ಹೈಕೋರ್ಟ್‌ಗೆ ಮೆಟ್ಟಿಲೆರಿದ್ದರಿಂದ ಹೈಕೋರ್ಟ್ ಇನ್ನೇನು ತೆರವುಗೊಳಿಸುವಂತೆ ಆದೇಶ ಮಾಡುವ ಸಂಭವ ಇರುವುದರಿಂದ ಪೌರಾಯುಕ್ತರು ನೆಲಸಮಕ್ಕೆ ಆದೇಶ ನೀಡಿದ್ದರಿಂದ ದೇವಸ್ಥಾನ ತೆರವು ಮಾಡಲಾಗಿದೆ ಎಂದು ಜಮಖಂಡಿ ನಗರಸಭೆಯ ಸಹಾಯಕ ಅಭಿಯಂತರರಾದ ಆರ್.ಆರ್.ಕುಲಕರ್ಣಿ ಅವರು ಹೇಳಿದ್ದಾರೆ. 

click me!