
ಬಾಗಲಕೋಟೆ (ಡಿ.28) ಮುಂದಿನ ಚುನಾವಣೆಯಲ್ಲಿ ಬಸನಗೌಡಪಾಟೀಲ್ ಯತ್ನಾಳ್ ಸೋಲಿಸಿ ಎಂದು ಮುಸ್ಲಿಮರಿಗೆ ಕರೆ ನೀಡಿದ ಶಿವಶರಣ ಅಲ್ಲಮಪ್ರಭು ಅಹಿಂದ ಗುರುಪೀಠದ ಪೀಠಾಧ್ಯಕ್ಷ ಪರಮೇಶ್ವರಾನಂದ ಸ್ವಾಮೀಜಿಗೆ ಹಿಂದೂ ಹುಲಿ ಎಂದೇ ಖ್ಯಾತಿಗೊಂಡಿರುವ ನಾಯಕ ತಿರುಗೇಟು ನೀಡಿದ್ದಾರೆ. ಆತ ಮಾಡೋದನ್ನು ನೋಡಿದರೆ ಮುಸ್ಲಿಂ ಮತಾಂಧನಿರಬೇಕು. ಆತನ ಬಟ್ಟೆ ಬಿಚ್ಚಿದರೆ ಗೊತ್ತಾಗುತ್ತೆ, ಆತ ಹಿಂದೂ ಅಲ್ವೋ ಅನ್ನೋದು. ಆತ ಸಾಬ ಅದಾನೋ ತಿಳ್ಕೋಳ್ಳಬೇಕು ಎಂದು ಯತ್ನಾಳ್ ಹೇಳಿದ್ದಾರೆ.
ಪರಮೇಶ್ವರಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿರುವ ಬಸನಗೌಡಪಾಟೀಲ್ ಯತ್ನಾಳ್, ತಮ್ಮ ಎಂದಿನ ಶೈಲಿಯಲ್ಲೇ ಮಾತನಾಡಿದ್ದಾರೆ. ಆ ಸ್ವಾಮೀಜಿ ಸಾಬರ ಪೈಕಿ ಅದಾನೊ ಸುನ್ನತಿ ಮಾಡಿಕೊಂಡಿದಾನೊ, ಏನು ಹಿಂದು ಆಗಿ ಅದಾನೊ ಚೆಕ್‌ಮಾಡಬೇಕು ಎಂದಿದ್ದಾರೆ. ಇಂತಹ ಕಳ್ಳ ನನ್ಮಕ್ಕಳು ಸ್ವಾಮಿಗಳು ಸನಾತನ ಧರ್ಮದ ಬಗ್ಗೆ ಅವರಿಗೆ ಮಾತಾಡುವ ನೈತಿಕತೆ ಇಲ್ಲ ಎಂದು ಪಾಟೀಲ್ ಹೇಳಿದ್ದಾರೆ.
ಪರಮೇಶ್ವರಾನಂದ ಸ್ವಾಮೀಜಿ ಹೇಳಿದ ಪ್ರತಿ ಮಾತಿಗೆ ಯತ್ನಾಳ್ ತಿರುಗೇಟು ನೀಡಿದ್ದಾರೆ. ಹಿಂದೂ ಧರ್ಮ, ಸನಾತನ ಕುರಿತು ಮಾತನಾಡಿದ್ದ ಈ ಸ್ವಾಮೀಜಿ ಭಾರಿ ವಿವಾದ ಸೃಷ್ಟಿಸಿದ್ದರು. ಸಾಣೆಹಳ್ಳಿ ಶ್ರೀ ಇರಬಹುದು,ಬಾಲ್ಕಿ ಇರಬಹುದು,ನಿಜಗುಣಾನಂದ ಶ್ರೀ ಇರಬಹುದು. ಅಥವಾ ಮೊನ್ನೆಯ ಲುಪುಟ ಇರಬಹುದು. ಇವರೆಲ್ಲಾ ಈ ಸ್ವಾಮೀಜಿ ಹೆಸರು ಇಟ್ಟುಕೊಳ್ಳಬಾರದು. ಆತ ಸ್ವಾಮಿ ಮಹೇಶ್ವರಾನಂದ ಅಂತ ಹೆಸರಿಟ್ಕೊಳ್ಳಬಾರದು. ಮೈಬೂಬ್ ಸಾಬ್ ,ಗಜಬುಸಾಬ ಚಂಡವಾಲೆ,ಬೋ....ಸ್ಡಿ ವಾಲೆ ಎಂಗು ಹೆಸರು ಇಟ್ಕೊಬೇಕು ಎಂದು ಯತ್ನಾಳ್ ಸಲಹೆ ನೀಡಿದ್ದಾರೆ. ಇಸ್ಲಾಂ ಹಾಗೂ ಲಿಂಗಾಯತ ಒಂದೇ ಎನ್ನುವವರು ಎಲ್ಲರೂ ಸಾಬರೆ. ಅವರು ಲಿಂಗಾಯತರಲ್ಲ ಎಂದು ಮಹೇಶ್ವರಾನಂದ ಸ್ವಾಮೀಜಿಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನನ್ನ ಸೋಲಿಸಲು ಬಹಳ ಜನ ಬಂದಿದ್ದರು. ಬಾಗಲಕೋಟೆ ಜಿಲ್ಲೆಯವರು ಒಬ್ರು ಬಂದಿದ್ದರು. ಆ ಸ್ವಾಮೀಜಿ ಸಾಬನೆ ಇದಾನೆ ನೀವು ಆತನನ್ನು ಮಹೇಶ್ವರಾನಂದ ಅನ್ನಬೇಡಿ. ಸ್ವಾಮಿಗಳ ಮರ್ಯಾದೆ ಕಳೆಯಬೇಡಿ ಹಾಗೆ ಕೇಳಿ. ಇವರು ತಾ....ಗಂಡ ಸ್ವಾಮಿಗಳು ಇವರು ಹರಾಮ್ ಕೋರ್ ಸ್ವಾಮಿಗಳು ಎಂದು ಯತ್ನಾಳ್ ಹೇಳಿದ್ದಾರೆ. ಇತ್ತೀಚೆಗೆ ಆಯೋಜನೆಗೊಂಡಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಮಾಡಿದ ಭಾಷಣ ಭಾರಿ ವಿವಾದಕ್ಕೆ ಕಾರಣವಾಗಿತ್ತು.