ಬಾಗಲಕೋಟೆ: ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ

By Web Desk  |  First Published Nov 14, 2019, 2:56 PM IST

ಬಾಗಲಕೋಟೆಯಲ್ಲಿ ಎಸಿಬಿ ದಾಳಿ| ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಜಿಲ್ಲಾಸ್ಪತ್ರೆ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಮುಂಡೋಡಗಿ | ಅರ್ಹತಾ ಪ್ರಮಾಣ ಪತ್ರ ನೀಡಲು 10 ಸಾವಿರ ರು. ಬೇಡಿಕೆ ಇಟ್ಟಿದ್ದ ಸುರೇಶ್ ಮುಂಡೋಡಗಿ| ಎಸಿಬಿ ಡಿವೈಎಸ್ಪಿ ವಿಜಯಕುಮಾರ್ ನೇತೃತ್ವದಲ್ಲಿ ದಾಳಿ|


ಬಾಗಲಕೋಟೆ(ನ.14): ಲಂಚ ಪಡೆಯುವ ವೇಳೆ ಅಧಿಕಾರಿಯೊಬ್ಬ ಎಸಿಬಿ ಬಲೆಗೆ ಬಿದ್ದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ನಡೆದಿದೆ. ಜಿಲ್ಲಾಸ್ಪತ್ರೆ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಮುಂಡೋಡಗಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. 

ಸಂಜಯ್ ಜಿಂಗಾಡಿ ಎಂಬುವರಿಂದ ವೈದ್ಯಕೀಯ ವೆಚ್ಚಕ್ಕಾಗಿ ಅರ್ಹತಾ ಪ್ರಮಾಣ ಪತ್ರಕ್ಕೆ ಸುರೇಶ್ ಮುಂಡೋಡಗಿ  10 ಸಾವಿರ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಂಜಯ್ ಜಿಂಗಾಡಿ ಅವರು ಅರ್ಹತಾ ಪ್ರಮಾಣ ಪತ್ರ ಪಡದುಕೊಳ್ಳಲು ಸುರೇಶ್ ಮುಂಡೋಡಗಿ ಅವರಿಗೆ 10 ಸಾವಿರ ರು. ನೀಡುತ್ತಿದ್ದರು. ಈ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಲಂಚ ಸಮೇತ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಮುಂಡೋಡಗಿ ಅವರನ್ನ ಹಿಡಿದಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಸಿಬಿ ಡಿವೈಎಸ್ಪಿ ವಿಜಯಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
 

click me!