No Entry ಇದ್ರೂ ಲಾರಿ ನುಗ್ಗಿಸಿದ ಚಾಲಕ: ಐತಿಹಾಸಿಕ ಬನಶಂಕರಿ ದ್ವಾರ ಬಾಗಿಲಿಗೆ ಹಾನಿ

By Web Desk  |  First Published Oct 15, 2019, 8:00 PM IST

ಬಾದಾಮಿಯ ಬನಶಂಕರಿ ಐತಿಹಾಸಿಕ ದ್ವಾರ ಬಾಗಿಲು ಮೂಲಕ ಲಾರಿ ಪ್ರಯಾಣ| ಇಕ್ಕಟ್ಟಾದ ದ್ವಾರ ಬಾಗಿಲಿನಲ್ಲೇ ಸಿಲುಕಿಕೊಂಡ ಲಾರಿ| ದ್ವಾರ ಬಾಗಿಲೊಳಗೆ ಬೃಹತ್ ವಾಹನ ನಿಷೇಧವಿದ್ರೂ ಲಾರಿ ನುಗ್ಗಿಸಿದ ಚಾಲಕ| ಬಾಗಿಲೊಳಗೆ ಲಾರಿ ಸಿಲುಕಿಕೊಂಡು ದ್ವಾರಕ್ಕೆ ಹಾನಿ.


ಬಾಗಲಕೋಟೆ, [ಅ.15]: ಜಿಲ್ಲೆಯ ಬಾದಾಮಿಯ ಬನಶಂಕರಿ ದೇಗುಲದ ಮುಖ್ಯ ದ್ವಾರ ಬಾಗಿನಲ್ಲಿ ಲಾರಿಯೊಂದು ಸಿಲುಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಾಗಿಲು ಕಂಬಕ್ಕೆ ಹಾನಿಯಾಗಿದೆ. 

ಬೃಹತ್ ವಾಹನಗಳಿಗೆ ನಿಷೇಧವಿದ್ದರೂ ಚಾಲಕ ಲಾರಿಯನ್ನು ಬನಶಂಕರಿಯ ಹೊಂಡಾಕ್ಕೆ ಹೋಗುವ ಇಕ್ಕಟ್ಟಾದ ದ್ವಾರ ಬಾಗಿಲೊಳಗೆ ನುಗ್ಗಿಸಿದ್ದಾನೆ. ಬಳಿಕ ಬೃಹತ್‌ ಲಾರಿ ಮುಕ್ಕಾಲು ಭಾಗ ಬಾಗಿಲು ಮುನ್ನುಗ್ಗಿ ತೆರಳಿದರೆ, ಕೊನೆ ಭಾಗ ಮುಖ್ಯ ದ್ವಾರಕ್ಕೆ ಸಿಲುಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬನಶಂಕರಿಯ ಐತಿಹಾಸಿಕ ದ್ವಾರ ಈಗ ಬೀಳುವ ಸ್ಥಿತಿಗೆ ಬಂದಿದೆ.

Tap to resize

Latest Videos

ಬಾಗಲಕೋಟೆ: ಗದ್ದನಕೇರಿ ಕ್ರಾಸ್‌ನಲ್ಲಿ ಬಸ್‌ಬೇ ನಿರ್ಮಾಣ

ಬೃಹತ್ ವಾಹನಗಳು ಗದಗ -ಬಾದಾಮಿ ಬೈಪಾಸ್ ರಸ್ತೆ ಮಾರ್ಗವಾಗಿ ಸಂಚರಿಸಬೇಕೆಂದು ಆದೇಶವಿದೆ. ಆದ್ರೆ, ಮಹಾರಾಷ್ಟ್ರ ಮೂಲದ ಎಮ್ ಎಚ್ -43,ಯು-2341 ಲಾರಿ ಚಾಲಕ ಬನಶಂಕರಿ ದೇಗುಲದ ಹೊಂಡಕ್ಕೆ ಹೊಂದಿಕೊಂಡಿರೋ ದ್ವಾರ ಮೂಲಕ ಸಂಚರಿಸಿದ್ದಾನೆ.  

ಬಾಗಿಲೊಳಗೆ ಸಿಲುಕಿಕೊಂಡ ಲಾರಿಯನ್ನು ಎಷ್ಟೇ ಹರಸಾಹಸಪಟ್ಟರೂ ತೆಗೆಯಲು ಆಗಲಿಲ್ಲ. ಕೊನೆಗೆ ಕ್ರೇನ್ ಬಳಸಿಯೇ ಲಾರಿಯನ್ನು ಹೊರ ತೆಗೆಯಲಾಗಿದೆ. ಇದರಿಂದ ಮುಖ್ಯದ್ವಾರಕ್ಕೆ ಧಕ್ಕೆಯಾಗಿದ್ದು,  ಬಾಗಿಲು ಬೀಳುವ ಹಂತ ತಲುಪಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಲಾರಿ ಚಾಲಕ ಹಾಗೂ ಮಾಲೀಕನ ವಿರುದ್ಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!