ಲಾಕ್‌ಡೌನ್ ವೇಳೆ ಅನವಶ್ಯಕವಾಗಿ ತಿರುಗಾಡಿದ ಹಲವರ ಮೇಲೆ ಕೇಸ್ ದಾಖಲಾಗಿದೆ. ಇಷ್ಟೇ ಅಲ್ಲ ವಾಹನ ಕೂಡ ಸೀಝ್ ಆಗಿದೆ. ಇನ್ನು ಹಲವರು ಪೊಲೀಸರ ಕಣ್ತಪ್ಪಿಸಿ ಸುತ್ತಾಡಿದ್ದಾರೆ. ಹೀಗೆ ಪೊಲೀಸರ ಕಣ್ತಪ್ಪಿಸಿ ಜಾಲಿ ಟ್ರಿಪ್ ಆರಂಭಿಸಿದ ಯುವಕ, ಓವರ್ ಬಿಲ್ಡಪ್ ನೀಡಿ ಇದೀಗ ಅರೆಸ್ಟ್ ಆಗಿದ್ದಾರೆ. ಇಷ್ಟೇ ಅಲ್ಲ ಈತನ BMW ಕಾರನ್ನು ಸೀಝ್ ಮಾಡಲಾಗಿದೆ.
ಚತ್ತೀಸಗಡ(ಮೇ.01): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮೇ.03ರ ವರೆಗೆ ಲಾಕ್‌ಡೌನ್ ವಿಸ್ತರಿಸಿದೆ. ರೆಡ್‌ಜೋನ್, ಹಾಟ್‌ಸ್ಪಾಟ್ ಕೇಂದ್ರಗಳಲ್ಲಿ ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗಲಿದೆ. ಈ ಮೂಲಕ ವೈರಸ್ ತಡೆಗಟ್ಟಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿದೆ. ತುರ್ತು ಸೇವೆ, ಅಗತ್ಯ ವಸ್ತು ಖರೀದಿ, ಆಸ್ಪತ್ರೆ ಸಿಬ್ಬಂದಿ, ಪೊಲೀಸ್, ಆಹಾರ ವಿತರಣೆ, ಸಾಗಾಟ ಸೇರಿದಂತೆ ಕೆಲ ಸೇವೆಗಳು ಹಾಗೂ ವಾಹನಗಳಿಗೆ ಸರ್ಕಾರ ಅನುಮತಿ ನೀಡಿದೆ. ಆದರೆ ಇಲ್ಲೋರ್ವ ಅನವಶ್ಯಕವಾಗಿ ಕಾರಿನಲ್ಲಿ ಸುತ್ತಾಡಿದ್ದು ಮಾತ್ರವಲ್ಲ, ಓವರ್ ಬಿಲ್ಡಪ್ ನೀಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಆ್ಯಂಬುಲೆನ್ಸ್ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!
undefined
ಚತ್ತೀಸಗಡದ ಯುವಕ ಅಭಿನಯ್ ಸೋನಿ ಲಾಕ್‌ಡೌನ್ ವೇಳೆ ಕಾರಿನಲ್ಲಿ ಜಾಲಿ ಡ್ರೈವ್ ಹೋಗಲು ಪ್ಲಾನ್ ಮಾಡಿದ್ದಾನೆ. ರಾತ್ರಿ ವೇಳೆ ತನ್ನ BMW ಕಾರು ತೆಗೆದು ಚತ್ತೀಸಗಡ ಸಿಟಿ ರೌಂಡ್‌ಗೆ ಮುಂದಾಗಿದ್ದಾನೆ. ಪೊಲೀಸ್ ಬ್ಯಾರಿಕೇಡ್ ಹಾಕಿದ್ದರೂ ಒಳ ರಸ್ತೆಗಳ ಮೂಲಕ ಸುತ್ತಿ ಬಳಸಿ ಸಿಟಿಯಲ್ಲಿ ಸುಮಾರು 20ಕಿ,ಮೀ ಕಾರು ಚಲಾಯಿಸುತ್ತಾ ಎಂಜಾಯ್ ಮಾಡಿದ್ದಾರೆ. ರಾತ್ರಿ ವೇಳೆ ಹೆಚ್ಚಿನ ಪೊಲೀಸರು ಇಲ್ಲದ ಕಾರಣ ಈತ ಯಾರ ಕಣ್ಣಿಗೂ ಬೀಳಲಿಲ್ಲ.
ತೆಪ್ಪಗಿರುವುದು ಬಿಟ್ಟು ಲಾಕ್‌ಡೌನ್ ವೇಳೆ ಓವರ್ ಸ್ವೀಡ್; 4.5 ಲಕ್ಷ ವಾಹನ ಮೇಲೆ ಫೈನ್!.
ಇಷ್ಟೇ ಆಗಿದ್ದರೆ ಅಭಿನಯ್ ಸೋನಿ ಜಾಲಿ ರೈಡ್ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಈತ 10 ಕಿ.ಮೀ ತೆರಳಿದಾಗ ಹೊಸ ಪ್ಲಾನ್ ತಲೆಗೆ ಹೊಳೆದಿದೆ. ತನ್ನ ಫೇಸ್‌ಬುಕ್ ಮೂಲಕ ಜಾಲಿ ರೈಡ್ ಲೈವ್ ವಿಡಿಯೋ ಮಾಡಿದ್ದಾನೆ. ಬಳಿಕ ಎಲ್ಲರೂ ಲಾಕ್‌ಡೌನ್ ಕಾರಣ ಮನೆಯಲ್ಲಿದ್ದರೆ, ನಾನು ಜಾಲಿ ರೈಡ್ ಎಂಜಾಯ್ ಮಾಡುತ್ತಿದ್ದೇನೆ ಎಂದು ಲೈವ್ ವಿಡಿಯೋದಲ್ಲಿ ಹೇಳಿದ್ದಾನೆ.
ಇಷ್ಟೇ ಅಲ್ಲ, ಖಾಲಿ ರಸ್ತೆಯಲ್ಲಿ ನಿಲ್ಲಿಸಿ ತಾನು ತಂದಿದ್ದ ಆಹಾರ ಪೊಟ್ಟಣ ತೆಗೆದು ತಿಂದಿದ್ದಾನೆ. ಬಳಿಕ ನಗರ ಹೊಲವಲಯದಲ್ಲಿ ಕಾರು ಚಲಾಯಿಸಿ ಖಾಲಿ ರಸ್ತೆಯಲ್ಲಿ ಜಾಲಿ ರೈಡ್ ಮಜಾ ತೆಗೆದುಕೊಂಡಿದ್ದಾನೆ. ಈತನ ಜಾಲಿ ರೈಡ್ ಲೈವ್ ವಿಡಿಯೋಗೆ ಹಲವರು ಕಿಡಿ ಕಾರಿದ್ದಾರೆ. ಇನ್ನು ಕೆಲವರು ನಾವು ಬರುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ. ತಡ ರಾತ್ರಿ ಜಾಲಿ ಡ್ರೈವ್ ಮಾಡಿ ಅಭಿನಯ್ ಸೋನಿ ಮನೆಗೆ ಹಿಂತಿರುಗಿದ್ದಾನೆ.
ಲೈವ್ ವಿಡಿಯೋ ಸುಳಿವು ಚತ್ತೀಸಗಡ ಪೊಲೀಸರಿಗೆ ಸಿಕ್ಕಿದೆ. ಸಿಸಿಟಿವಿ, ಲೈವ್ ವಿಡಿಯೋ ಪರಿಶೀಲಿಸಿ ಬೆಳಂಬೆಳಗ್ಗೆ ಪೊಲೀಸರು ಅಭಿನಯ್ ಸೋನಿ ಮನೆಗೆ ಬಂದಿದ್ದಾರೆ. ಇಷ್ಟೇ ಅಲ್ಲ ಅಭಿನಯ್ ಸೋನಿಯನ್ನು ಬಂಧಿಸಿದ್ದಾರೆ. ಬಳಿಕ ಆತನ BMW ಕಾರನ್ನು ಸೀಝ್ ಮಾಡಿದ್ದಾರೆ.