ತೆಪ್ಪಗಿರುವುದು ಬಿಟ್ಟು ಲಾಕ್‌ಡೌನ್ ವೇಳೆ ಓವರ್ ಸ್ವೀಡ್; 4.5 ಲಕ್ಷ ವಾಹನ ಮೇಲೆ ಫೈನ್!

By Suvarna News  |  First Published Apr 30, 2020, 3:50 PM IST

ಲಾಕ್‌ಡೌನ್ ವೇಳೆ ಅಗತ್ಯ ಸೇವೆ ಹಾಗೂ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಕೆಲ ವಾಹನಗಳು ಓಡಾಟ ನಡೆಸುತಿತ್ತು. ಆದರೆ ಕೆಲವರು ಅನಗತ್ಯವಾಗಿ ಲಾಕ್‌ಡೌನ್ ಸಮಯವನ್ನು ಬಳಸಿಕೊಂಡಿದ್ದಾರೆ. ಪೊಲೀಸರ ಕಣ್ತಪ್ಪಿ ವಾಹನ ಚಾಲನೆ ಮಾತ್ರವಲ್ಲ, ಓವರ್ ಸ್ಪೀಡ್ ಬೇರೆ. ಹೀಗೆ ಲಾಕ್‌ಡೌನ್ ವೇಳೆ ಓವರ್ ಸ್ಪೀಡ್ ಗೆರೆ ದಾಟಿದ 4.5 ಲಕ್ಷ ವಾಹನಕ್ಕೆ ದಂಡ ಹಾಕಲಾಗಿದೆ.


ನವದೆಹಲಿ(ಏ.30): ಲಾಕ್‌ಡೌನ್ ಸಮಯದಲ್ಲಿ ರಸ್ತೆಗಳು ಖಾಲಿ ಖಾಲಿ, ಇದು ಹಲವರಿಗೆ ರೇಸ್ ಟ್ರ್ಯಾಕ್ ರೀತಿ ಕಂಡಿದ್ದು ಇದೆ. ಹೀಗಾಗಿ ಪೊಲೀಸರ ಕಣ್ತಪ್ಪಿಸಿ ಹಲವರು ವಾಹನಗಳನ್ನು ರಸ್ತೆಗಳಿಸಿದ್ದಾರೆ. ಇನ್ನು ಕೆಲವರು ಅಗತ್ಯ ವಸ್ತು ಖರೀದಿ ನೆಪದಲ್ಲಿ ರಸ್ತೆ ಮೇಲೆ ವಾಹನ ಚಾಲನೆ ಮಾಡಿದ್ದಾರೆ. ಅನವಶ್ಯಕವಾಗಿ ತಿರುಗಾಡಿದ್ದಾರೆ. ಇಷ್ಟಾಗಿದ್ದರೆ ಪರವಾಗಿಲ್ಲ. ಆದರೆ ಖಾಲಿ ರಸ್ತೆ ಮೇಲೆ ಓವರ್ ಸ್ಪೀಡ್‌ನಲ್ಲಿ ವಾಹನ ಓಡಿಸಿದ್ದಾರೆ. ಇದೇ ಇದೀಗ ಸಂಕಷ್ಟಕ್ಕೆ ಕಾರಣವಾಗಿದೆ.

 ಆ್ಯಂಬುಲೆನ್ಸ್‌ ತುರ್ತು ಸೇವೆಗೆ 17 ವರ್ಷದ ಅಪ್ರಾಪ್ತನಿಂದ ಅಡ್ಡಿ; ದುಬಾರಿ ದಂಡ ಜೊತೆ ಜೈಲು ಶಿಕ್ಷೆ!.

Latest Videos

undefined

ರಾಜಧಾನಿ ನವದೆಹಲಿಯಲ್ಲಿ ಕಳೆದೊಂದು ತಿಂಗಳ ಲಾಕ್‌ಡೌನ್‌ನಲ್ಲಿ ಹಲವು ವಾಹನಗಳು ಓಡಾಡಿದೆ. ಇದರಲ್ಲಿ ಆ್ಯಂಬುಲೆನ್ಸ್ ಹೊರತು ಪಡಿಸಿ ಇನ್ನುಳಿದ 4.5 ಲಕ್ಷ ವಾಹನಗಳು ಓವರ್ ಸ್ಪೀಡ್ ನಿಯಮ ಉಲ್ಲಂಘಿಸಿದೆ. ಸಿಗ್ನಲ್ ಹಾಗೂ ಇತರೆಡೆ ಪೊಲೀಸರು ಅಳವಡಿಸಿದ್ದ ಸಿಸಿಟಿವಿ ದೃಶ್ಯ ಹಾಗೂ ಸ್ಪೀಡ್ ಮೀಟರ್ ಮೂಲಕ ದೆಹಲಿ ಪೊಲೀಸರು 4.5 ಲಕ್ಷ ವಾಹನಕ್ಕೆ ಇ ಚಲನ್ ಕಳುಹಿಸಿದ್ದಾರೆ.

ಸಾರ್ವಜನಿಕ ರಸ್ತೆಯಲ್ಲಿ ರೇಸ್, ಲ್ಯಾಂಬೋರ್ಗಿನಿ, ಆಡಿ ಕಾರು ಸೀಝ್!

ಲಾಕ್‌ಡೌನ್ ವೇಳೆ ದೆಹಲಿಯಲ್ಲಿ ಬರೋಬ್ಬರಿ 4,54,438 ವಾಹನಗಳಿಗೆ ಇ ಚಲನ್ ಕಳುಹಿಸಲಾಗಿದೆ. ಇದರ ಒಟ್ಟು ಮೊತ್ತ 90 ಕೋಟಿ ರೂಪಾಯಿ. ಈ ಕುರಿತು ಹಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಮನೆಯೊಳಗೆ ಇದ್ದೇವೆ, ವಾಹನ ರಸ್ತೆಗಿಳಿಸಿಲ್ಲ.  ನಮಗೆ ಇ ಚಲನ್ ಕಳುಹಿಸಲಾಗಿದೆ ಎಂದಿದ್ದಾರೆ. ಇದಕ್ಕೆ ದೆಹಲಿ ಪೊಲೀಸರು ಪ್ರತಿಕ್ರಿಯೆಸಿದ್ದಾರೆ. ಎಲ್ಲಾ ವಾಹನಗಳ ನಂಬರ್, ಪುನರ್ ಪರಿಶೀಲಿಸಲಾಗಿದೆ. ಇಷ್ಟೇ ಅಲ್ಲ ಖಾಲಿ ರಸ್ತೆಯಲ್ಲಿ ವಾಹನ ಗುರುತಿಸುವಿಕೆ ಪೊಲೀಸರಿಗೆ ಕಷ್ಟವಲ್ಲ ಎಂದಿದೆ.

ದೆಹಲಿಯ ಎಲ್ಲಾ ರಸ್ತೆಗಳಲ್ಲಿ ಸ್ಪೀಡ್ ಲಿಮಿಟ್ ಬೋರ್ಡ್ ಹಾಕಲಾಗಿದೆ. ವಾಹನ ಓಡಿಸುವಾಗ ಗಮನ ಸೂಚನ ಫಲದ ಮೇಲೆ ಇರಲಿ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಒಂದು ವಾಹನ 125 ಬಾರಿ ನಿಯಮ ಉಲ್ಲಂಘಿಸಿದೆ. ಹೀಗಾಗಿ ಒಟ್ಟು ಮೊತ್ತ 3.5 ಲಕ್ಷ ರೂಪಾಯಿ ಇ ಚಲನ್ ಕಳುಹಿಸಲಾಗಿದೆ. ಡ್ರೈವ್ ಮಾಡುವಾಗ ನಿಯಮ ಪಾಲನೆ ಅವಶ್ಯಕ. ಲಾಕ್‌ಡೌನ್ ಇದೆ ಎಂದರೆ ಟ್ರಾಫಿಕ್ ನಿಯಮ ಇಲ್ಲ ಎಂದರ್ಥವಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

click me!