ಶೀಘ್ರದಲ್ಲೇ ಭಾರತದಲ್ಲಿ ಎಲೆಕ್ಟ್ರಿಕ್ ಕಾರಿನ ಯುಗ ಆರಂಭಗೊಳ್ಳಲಿದೆ. ಇದರ ಮೊದಲ ಅಂಗವಾಗಿ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ಕಾರಿ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ.
ನವದೆಹಲಿ(ಏ.26): ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಹಲವು ಕಾರು ಕಂಪನಿಗಳು ತಯಾರಿ ನಡೆಸುತ್ತಿದೆ. ಇದೀಗ ಮಾರುತಿ ಸುಜುಕಿ ತಯಾರಿ ಅಂತಿಮಗೊಂಡಿದ್ದು ಬಿಡುಗಡೆ ಮಾಡಲು ರೆಡಿಯಾಗಿದೆ. 2019 ಅಂತ್ಯ ಅಥವಾ 2020ರ ಆರಂಭದಲ್ಲಿ ನೂತನ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ಇದೀಗ ಮಾರುತಿ ವ್ಯಾಗನ್ಆರ್ ಕಾರಿನ ಎಲೆಕ್ಟ್ರಿಕ್ ಕಾರಿನ ಬೆಲೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ!
undefined
ಕೇಂದ್ರ ಸರ್ಕಾರದ ನೂತನ ಎಲೆಕ್ಟ್ರಿಕ್ ಕಾರು ನಿಯಮ(FAME)ಜಾರಿಯಾದ ಬಳಿಕ ಎಲೆಕ್ಟ್ರಿಕ್ ಕಾರು ಬೆಲೆ ಹೆಚ್ಚಳವಾಗಿದೆ. ಅದರಲ್ಲೂ ಸಣ್ಣ ಎಲೆಕ್ಟ್ರಿಕ್ ಕಾರಿನ ಉತ್ಪಾದನಾ ವೆಚ್ಚಾ ಹೆಚ್ಚಾಗುತ್ತಿದೆ. ಸಣ್ಣ ಕಾರಿನ ಬೆಲೆ ಸರಿಸುಮಾರು 12 ಲಕ್ಷ ರೂಪಾಯಿ ಇರಲಿದೆ ಎಂದು ಮಾರುತಿ ಸುಜುಕಿ ಹೇಳಿದೆ. ಈ ಮೂಲಕ ನೂತನ ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಬೆಲೆ ಸೂಚನೆ ನೀಡಿದೆ.
ಇದನ್ನೂ ಓದಿ: ರೋಲ್ಸ್ ರಾಯ್ಸ್ to ಪೊರ್ಶೆ: ಹರಾಜಾಯ್ತು ನೀರವ್ ಮೋದಿ 12 ಕಾರು !
ಈ ಹಿಂದೆ ಮಾರುತಿ ಸುಜುಕಿ 10 ಲಕ್ಷ ರೂಪಾಯಿಗೆ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಇದೀಗ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಾರುತಿ ವ್ಯಾಗನ್ಆರ್ ಪೆಟ್ರೋಲ್ ಕಾರಿಗೆ 5 ಲಕ್ಷ ರೂಪಾಯಿ. ಅದೇ ಎಲೆಕ್ಟ್ರಿಕ್ ಕಾರಿಗೆ 10 ರಿಂದ 12 ಲಕ್ಷ ರೂಪಾಯಿ ಎಂದರೆ ಯಾರು ಖರೀದಿಸುತ್ತಾರೆ ಅನ್ನೋದೇ ಸದ್ಯಕ್ಕಿರುವ ಪ್ರಶ್ನೆ.