ಕೊರೋನಾ ವೈರಸ್ ಕಾರಣ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಹೇರಿದೆ. ಹೀಗಾಗಿ ಎಲ್ಲಾ ವ್ಯವವಾಹರ ಬಂದ್ ಆಗಿದೆ. ಆರ್ಥಿಕ ಪರಿಸ್ಥಿತಿ ಬಿಗಡಾಯಿಸಿದೆ. ಆಟೋಮೊಬೈಲ್ ಕ್ಷೇತ್ರ ತೀವ್ರ ನಷ್ಟ ಅನುಭವಿಸುತ್ತಿದೆ. ಇದರ ನಡುವೆ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ವೋಲ್ವೋ ಕಾರು ಕಂಪನಿ ಉದ್ಯೋಗ ಕಡಿತ ಮಾಡಿದೆ.
ಸ್ವೀಡನ್(ಏ.29): ಕೊರೋನಾ ವೈರಸ್ ಆರಂಭಿಕ ದಿನಗಳಲ್ಲಿ ಯಾರೂ ಕೂಡ ಲಾಕ್‌ಡೌನ್ ಈ ರೀತಿಯ ವಿಸ್ತರಣೆ, ಸೋಂಕು ಈ ಮಟ್ಟಿಗೆ ಅಭದ್ರತೆ ಹುಟ್ಟಿಸುತ್ತೆ ಅನ್ನೋ ಅರಿವು ಯಾರಿಗೂ ಇರಲಿಲ್ಲ. ಹೀಗಾಗಿ ವೈರಸ್ ಹರಡುತ್ತಿದ್ದಂತೆ ಉದ್ಯೋಗ ಕಡಿತ ಮಾಡುವುದಿಲ್ಲ ಎಂದಿತ್ತು. ಆದರೆ ಇದೀಗ ಕೊರೋನಾ ನಿಯಂತ್ರಣಕ್ಕೆ ಬಾರದ ಕಾರಣ ಲಾಕ್‌ಡೌನ್ ವಿಸ್ತರಣೆಯಾಗುತ್ತಿದೆ. ಇತ್ತ ಕಂಪನಿಗಳು ನಷ್ಟ ತಾಳಲಾರದೇ ಉದ್ಯೋಗ ಕಡಿಕ್ಕೆ ಮುಂದಾಗಿದೆ. ಇದೀಗ ವೋಲ್ವೋ ಕಂಪನಿ 1,300 ಉದ್ಯೋಗ ಕಡಿತ ಮಾಡಿದೆ.
ನೆಚ್ಚಿನ ಕಾರು ಬಳಸುವ ಮೊದಲೇ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್!
ಚೀನಾ ಮಾಲೀಕತ್ವದ ಸ್ವೀಡನ್ ಆಟೋಮೇಕರ್ ವೋಲ್ವೋ ಉದ್ಯೋಗ ಕಡಿತ ಮಾಡಿದೆ. ಹಿರಿಯ ಆಧಿಕಾರಿಗಳು ಸೇರಿದಂತೆ ಉನ್ನತ ಹುದ್ದೆಯಲ್ಲಿದ್ದ 1,300 ಮಂದಿಯ ಉದ್ಯೋಗಕ್ಕೆ ಕತ್ತರಿ ಹಾಕಿದೆ. ಸ್ವೀಡನ್‌ನ ಸ್ಕಾಕ್‌ಹೊಮ್ ನಗರದಲ್ಲಿನ ವೊಲ್ವೋ ಕಂಪನಿಯಿಂದ 1,300 ಉದ್ಯೋಗಿಗಳನ್ನು ತೆಗೆದುಹಾಕಿದೆ. ನಷ್ಟ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉದ್ಯೋಗ ಕಡಿತ ಹೊರತುಪಡಿಸಿ ಇನ್ಯಾವ ಮಾರ್ಗವೂ ಕಾಣುತ್ತಿಲ್ಲ ಎಂದು ವೋಲ್ವೋ ಹೇಳಿದೆ.
ಇತಿಹಾಸದಲ್ಲಿ ಇದೇ ಮೊದಲು; ಏಪ್ರಿಲ್ ತಿಂಗಳಲ್ಲಿ ಆಟೋಮೊಬೈಲ್ ಡಕೌಟ್!.
ಸ್ವೀಡನ್‌ನಲ್ಲಿ ವೋಲ್ವೋ ಕಂಪನಿ 25,000 ಉದ್ಯೋಗಿಗಳನ್ನು ಹೊಂದಿದೆ. ಇದೀಗ ಅತೀ ಕಡಿಮೆ ಉದ್ಯೋಗಿಗಳನ್ನು ಕಂಪನಿ ಕೆಲಸ ನಿರ್ವಹಣೆ ಕುರಿತು ಹೊಸ ಮಾಡೆಲ್ ಸಿದ್ದಪಡಿಸುತ್ತಿದೆ. ಸ್ವೀಡನ್ ಕಂಪನಿಯಾಗಿದ್ದ ವೊಲ್ವೋ ಫೋರ್ಡ್ ಕಂಪನಿಯ ಮಾಲೀಕತ್ವದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ 2010ರಲ್ಲಿ ಚೀನಾದ ಗೀಲೆ ಮೋಟಾರ್ ವೋಲ್ವೋ ಕಂಪನಿ ಖರೀದಿಸಿತ್ತು.
2017ರಲ್ಲಿ ವೋಲ್ಪೋ ಕಾರು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ 2018 ಹಾಗೂ 19ರಲ್ಲಿ ಮಾರಾಟ ಕುಸಿತ ಕಂಡಿತ್ತು. ಇಷ್ಟಾದರೂ ಭಾರತದಲ್ಲಿ ವೋಲ್ಪೋ ಕಾರು ಮಾರಾಟ ಗಣನೀಯವಾಗಿ ಏರಿಕೆಯಾಗಿತ್ತು. ಇದೀಗ ಕೊರೋನಾ ವೈರಸ್ ಹೊಡೆತದಿಂದಾಗಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ.