ರಸ್ತೆ ನಿಯಮ ಪಾಲನೆ ಅತೀ ಮುಖ್ಯ.ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡುವುದು ಎಷ್ಟು ಅಪಾಯಕಾರಿ ಅನ್ನೋ ವೀಡಿಯೋ ಇದೀಗ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಏನಿದೆ? ಇಲ್ಲಿದೆ ನೋಡಿ.
ಬೆಂಗಳೂರು(ಮಾ.21): ರಸ್ತೆ ನಿಯಮ ಪಾಲಿಸುವುದು ಅತೀ ಮುಖ್ಯ. ಪೊಲೀಸರಿದ್ದಾರೆ, ದಂಡ ಹಾಕ್ತಾರೆ ಅನ್ನೋ ಕಾರಣಕ್ಕಿಂತಲೂ ಸುರಕ್ಷತೆ ದೃಷ್ಟಿಯಿಂದ ಅತೀ ಮುಖ್ಯ. ಇದಕ್ಕಾಗಿ ಪೊಲೀಸರು ಕೂಡ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ರಸ್ತೆ ನಿಯಮ ಪಾಲನೆಯಲ್ಲಿ ಭಾರತೀಯರು ಸ್ವಲ್ಪ ಹಿಂದೆ. ಅದರಲ್ಲೂ ಡ್ರೈವಿಂಗ್ ವೇಳೆ ಮೊಬೈಲ್ ಫೋನ್ ಬಳಕೆ ಅಪಾಯಕ್ಕೆ ದಾರಿ ಅನ್ನೋದು ಸ್ಪಷ್ಟ.
ಇದನ್ನೂ ಓದಿ: ಮನೆ ಮುಂದೆ ವಾಹನ ನಿಲ್ಲಿಸಿದ್ರೆ ಹುಷಾರ್: ಬೀಳುತ್ತೆ ಭಾರೀ ದಂಡ
undefined
ಡ್ರೈವಿಂಗ್ ಮಾಡುವಾಗ ಬೇರೆಡೆ ಗಮನ ನೀಡುವುದು ಉತ್ತಮವಲ್ಲ. ಮೊಬೈಲ್ ರಿಂಗ್ ಆಗ್ತಿದೆ, ಮೆಸೇಜ್ ಬಂದಿದೆ ಎಂದು ಫೋನ್ ಸ್ಕ್ರೀನ್ ನೋಡುವುದು, ಕಾಲ್ ರಿಸೀವ್ ಮಾಡುವುದು, ಮೆಸೇಜ್‌ಗೆ ಪ್ರತಿಕ್ರಿಯೆ ನೀಡುವುದು ಅತ್ಯಂತ ಅಪಾಯಕಾರಿ. ಇದೀಗ ಡ್ರೈವಿಂಗ್ ವೇಳೆ ಮೊಬೈಲ್ ಯಾಕೆ ಬಳಸಬಾರದು ಅನ್ನೋ ವೀಡಿಯೋವೊಂದು ವೈರಲ್ ಆಗಿದೆ.
ಒಂದು ಸೆಕೆಂಡ್ ಗಮನ ಬೇರೆಡೆ ಹೋದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚು. ಇದು ವೀಡಿಯೋದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಡ್ರೈವಿಂಗ್ ವೇಳೆ ಮೊಬೈಲ್ ಬಳಕೆ ಮಾಡಲೇಬೇಡಿ. ತುರ್ತು ಕರೆ ಬಂದರೆ, ವಾಹನ ನಿಲ್ಲಿಸಿ ಕರೆ ಸ್ವೀಕರಿಸುವುದು ಸೂಕ್ತ.
ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!
ಕೇವಲ ಮೊಬೈಲ್ ಬಳಕೆ ಮಾತ್ರವಲ್ಲ, ಸಿಗ್ನಲ್ ಜಂಪ್, ರಾಂಗ್ ಸೈಡ್, ಸೀಟ್ ಬೆಲ್ಟ್, ಹೆಲ್ಮೆಟ್ ಸೇರಿದಂತೆ ಎಲ್ಲಾ ರಸ್ತೆ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಹಾಗೂ ಸುರಕ್ಷತಾ ದೃಷ್ಟಿಯಂದ ಉತ್ತಮ. ಇದರಿಂದ ಪ್ರಯಾಣ ಸುರಕ್ಷಿತ ಹಾಗೂ ಸುಖಕರವಾಗಿರಲಿದೆ.