ಹೊಸ ಅವತಾರದಲ್ಲಿ ದಾಟ್ಸನ್ ರೆಡಿ ಗೋ ಕಾರು-ಕೇವಲ 2.75 ಲಕ್ಷ ರೂ!

By Web Desk  |  First Published Mar 21, 2019, 3:13 PM IST

ದಾಟ್ಸನ್ ರೆಡಿ ಗೋ ಕಾರು ಇದೀಗ ಹೊಸ ಸೇಫ್ಟಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಕಡಿಮೆ ಬೆಲೆ ಗರಿಷ್ಠ ಸುರಕ್ಷತೆ ನೀಡಲಿದೆ. ಹೊಸ ಕಾರಿನ ವಿಶೇಷತೆ ಏನು? ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದೆಹಲಿ(ಮಾ.21): ಕಡಿಮೆ ಬೆಲೆಯ ಕಾರು ಎಂದೇ ಖ್ಯಾತಿಗಳಿಸಿರುವ ದಾಟ್ಸನ್ ಇದೀಗ ರೆಡಿ ಗೋ ಸಣ್ಣ ಕಾರನ್ನು ಹೊಸ ಅವತಾರದಲ್ಲಿ ಹೊರ ತಂದಿದೆ. ನೂತನ ದಾಟ್ಸನ್ ರೆಡಿ ಗೋ ಕಾರಿನಲ್ಲಿ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಏರ್‌ಬ್ಯಾಗ್ ಸೇರಿದಂತೆ ಹಲವು ಫೀಚರ್ಸ್ ಸೇರಿಸಲಾಗಿದೆ.

Tap to resize

Latest Videos

undefined

ಇದನ್ನೂ ಓದಿ: ವ್ಯಾಗನ್ಆರ್ to ಸಿವಿಕ್: 2019ರಲ್ಲಿ ಬಿಡುಗಡೆಯಾದ ಅತ್ಯುತ್ತಮ ಕಾರು ಇಲ್ಲಿದೆ!

ದಾಟ್ಸನ್ ರೆಡಿ ಗೋ ಕಾರಿನ ಎಂಜಿನ್ ಹಾಗೂ ಮೆಕಾನಿಸಂಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಕೇಂದ್ರ ಸರ್ಕಾರದ ನೂತನ ಸುರಕ್ಷತಾ ನಿಯಮದಿಂದ ಎಲ್ಲಾ ಕಾರುಗಳು ABS, ಹಾಗೂ ಏರ್‌ಬ್ಯಾಗ್ ಅಳವಡಿಸಿಕೊಳ್ಳುವುದು ಕಡ್ಡಾಯ. ಇದು ಬೇಸ್ ಕಾರಿಗೂ ಅನ್ವಯವಾಗಲಿದೆ. ಹೀಗಾಗಿ ಇದೀಗ ದಾಟ್ಸನ್ ಸೇಫ್ಟಿ ಫೀಚರ್ಸ್ ಅಳವಡಿಸಿಕೊಂಡಿದೆ.

ಇದನ್ನೂ ಓದಿ: ಇನೋವಾ ಕಾರಿಗೆ ಪೈಪೋಟಿ- ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ RBC ಕಾರು!

ದಾಟ್ಸನ್ ರೆಡಿ ಗೋ ಕಾರಿನ ಬೆಲೆ 2.68 ಲಕ್ಷ ರೂಪಾಯಿ. ಇದೀಗ ಹೊರತಲಾಗಿರುವ ABS, ಏರ್‌ಬ್ಯಾಗ್ ಸೇರಿದಂತೆ ಸೇಫ್ಟಿ ಫೀಚರ್ ಕಾರಿಗೆ ಹಳೇ ಕಾರಿಗಿಂತ 7,000 ರೂಪಾಯಿ ಹೆಚ್ಚು ನೀಡಬೇಕು. ಹೀಗಾಗಿ ನೂತನ ಕಾರಿನ ಬೆಲೆ 2.75 ಸಾವಿರ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರು 2 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ಟಾಟಾ ನ್ಯಾನೋ ಬದಲು ಬರುತ್ತಿದೆ ಹೊಸ ಸಬ್-ಟಿಯಾಗೋ ಕಾರು!

0.8 ಲೀಟರ್ ಪೆಟ್ರೋಲ್ ಕಾರು  53 bhp ಪವರ್ ಹಾಗೂ  72 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 1.0 ಲೀಟರ್ ಕಾರು  67 bhp ಪವರ್ ಹಾಗೂ 91 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 1.0 ಲೀಟರ್ ವೇರಿಯೆಂಟ್‌ನಲ್ಲಿ 5 ಸ್ಪೀಡ್ ಮಾನ್ಯುಯೆಲ್ ಹಾಗೂ AMT ಆಯ್ಕೆಗಳಿವೆ.

click me!