National Test House: ಕೇಂದ್ರ ಸರ್ಕಾರದಿಂದ ಬೆಂಗಳೂರಿನಲ್ಲಿ ಇವಿ ಟೆಸ್ಟಿಂಗ್‌ ಕೇಂದ್ರ ಸ್ಥಾಪನೆ

By Santosh Naik  |  First Published Oct 9, 2023, 11:04 AM IST

ಈ ಕೇಂದ್ರಗಳಲ್ಲಿ ಬ್ಯಾಟರಿಗಳು ಮತ್ತು ಬ್ಯಾಟರಿ ವ್ಯವಸ್ಥೆಗಳು ಮಾತ್ರವಲ್ಲದೆ ಚಾರ್ಜಿಂಗ್‌ ಸ್ಟೇಷನ್‌ಗಳ ಸುರಕ್ಷತೆಯನ್ನೂ ಪರೀಕ್ಷೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
 


ನವದೆಹಲಿ (ಅ.9): ದೇಶಲ್ಲಿ ಎಲೆಕ್ಟ್ರಿಕ್‌ ವೆಹಿಕಲ್‌ಗಳಿಗೆ (ಇವಿ) ಇತ್ತೀಚಿನ ವರ್ಷಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗಿದೆ. ಅದರೊಂದಿಗೆ ಕೇಂದ್ರ ಸರ್ಕಾರ ಕೂಡ ದೇಶದ ಜನರು ಎಲೆಕ್ಟ್ರಿಕ್‌ ವಾಹನಗಳತ್ತ ಹೆಚ್ಚಿನ ಗಮನ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ಪ್ರಕಟಿಸಿದೆ. ಇಂಥ ಸಮಯದಲ್ಲಿ ರಾಷ್ಟ್ರೀಯ ಟೆಸ್ಟ್ ಹೌಸ್ (ಎನ್‌ಟಿಎಚ್) ಲ್ಯಾಬ್‌ಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳ ಪರೀಕ್ಷಾ ಸೌಲಭ್ಯಗಳನ್ನು ಬಲಪಡಿಸಲು ಕೇಂದ್ರ ಸರ್ಕಾರವು ಎದುರು ನೋಡುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಮುಂಬೈ ಮತ್ತು ಕೋಲ್ಕತ್ತಾದ ಎನ್‌ಟಿಎಚ್‌ ಲ್ಯಾಬ್‌ಗಳಲ್ಲಿ ಹಾಗೂ ಬೆಂಗಳೂರಿನ ಜಕ್ಕೂರಿನಲ್ಲಿರುವ ಪ್ರಾದೇಶಿಕ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೊರೇಟರಿ (RRSL) ನಲ್ಲಿ ಇವಿ ವಾಹನಗಳ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲು ಯೋಚನೆ ಮಾಡಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS  ನಿಧಿಯ ಬೆಂಬಲದೊಂದಿಗೆ, ಸ್ಕ್ರೀನಿಂಗ್ ಸಮಿತಿಯು ಪ್ರಖ್ಯಾತಿಯನ್ನು ಪಡೆಯುತ್ತಿರುವ ಇವಿ ವಾಹನಗಳ ತಯಾರಕರಿಗೆ ಪರೀಕ್ಷಾ ಸೌಲಭ್ಯಗಳನ್ನು  ಸುಲಭಗೊಳಿಸಲು ಅತ್ಯಾಧುನಿಕ ಮೂಲಸೌಕರ್ಯವನ್ನು ಸ್ಥಾಪಿಸಲು ಎದುರು ನೋಡುತ್ತಿದೆ.

ಇವಿ ವಾಹನಗಳು ಮತ್ತು ಇವಿ ವಾಹನಗಳ ಬ್ಯಾಟರಿ ತಯಾರಿಸುವ ಕಂಪನಿಗಳ ಸಂಖ್ಯೆ ಏರಿಕೆ ಆಗುತ್ತಿವೆ. ಆದರೆ, ಮಾರುಕಟ್ಟೆಗೆ ಇವುಗಳು ಬರಲು ಪರೀಕ್ಷೆಗಳು ಆಗಬೇಕು. ಇದರಿಂದಾಗಿ ದೇಶಗಳಲ್ಲಿ ಇವಿ ವಾಹನಗಳಿಗೆ ಸಂಬಂಧಪಟ್ಟ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ. ಬ್ಯಾಟರಿಗಳು ಮತ್ತು ಬ್ಯಾಟರಿ ವ್ಯವಸ್ಥೆಗಳು ಮಾತ್ರವಲ್ಲದೆ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ಅವುಗಳ ಸುರಕ್ಷತೆಗಾಗಿ ಈ ಕೇಂದ್ರಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿವೆ. 

ಎನ್‌ಟಿಎಚ್‌ ಮುಂಬೈನಲ್ಲಿ ಸ್ವಿಚ್ ಗೇರ್‌ಗಳಿಗೆ ಪರೀಕ್ಷಾ ಮೂಲಸೌಕರ್ಯವನ್ನು ಸಹ ಸ್ಥಾಪಿಸಲಾಗುತ್ತಿದೆ. ವಿದ್ಯುತ್ ಸರ್ಕ್ಯೂಟ್‌ಗಳನ್ನು ಬದಲಾಯಿಸಲು, ನಿಯಂತ್ರಿಸಲು ಮತ್ತು ರಕ್ಷಿಸಲು ಬಳಸಲಾಗುತ್ತದೆ, ಸ್ವಿಚ್ ಗೇರ್‌ಗಳನ್ನು ವಿದ್ಯುತ್ ಉದ್ಯಮದಲ್ಲಿ ಸರ್ಕ್ಯೂಟ್ ಬ್ರೇಕರ್‌ಗಳು ಮತ್ತು ಸ್ವಿಚ್ ಫ್ಯೂಸ್ ಘಟಕಗಳಂತಹ ಸ್ವಿಚಿಂಗ್ ಸಾಧನಗಳಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದಕ್ಕೂ ಮುನ್ನ ಗ್ರಾಹಕ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಇವಿ ಬ್ಯಾಟರಿ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದೆ ಎಂದು ತಿಳಿಸಿದ್ದರು.

ಪೋಷಕರ ಮನೆಗೆ ತೆರಳಲು ಇ ತ್ಯಾಜ್ಯ ಬಳಸಿ ಎಲೆಕ್ಟ್ರಿಕ್ ಸೈಕಲ್ ನಿರ್ಮಿಸಿದ 84ರ ಹರೆಯ ಅಜ್ಜ!

ಪ್ರಸ್ತುತ ದೇಶದಲ್ಲಿ ಇವಿ ವಾಹನಗಳ ಉಪಕರಣಗಳ ಪರೀಕ್ಷಾ ಸಮಯವು 30 ದಿನಗಳಾಗಿದ್ದು, ಇದನ್ನು ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ಲ್ಯಾನ್‌ ಮಾಡಿದೆ. ಕಳೆದ ವರ್ಷ, ಹೆಚ್ಚುವರಿ ಸುರಕ್ಷತೆ ಅಗತ್ಯಗಳಿಗಾಗಿ ಸರ್ಕಾರವು ಇವಿ ಬ್ಯಾಟರಿಗಳ ಪರೀಕ್ಷಾ ಮಾನದಂಡಗಳನ್ನು ತಿದ್ದುಪಡಿ ಮಾಡಿದೆ ಮತ್ತು ನಿಯಮಗಳಿಗೆ ಕರಡು ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ಇವಿಗಳಿಗೆ ನಡು ರಸ್ತೆಯಲ್ಲಿಯೇ ಬೆಂಕಿಹೊತ್ತಿಕೊಂಡ ವ್ಯಾಪಕ ಪ್ರಕರಣಗಳು ವರದಿಯಾದ ಬಳಿಕ ಸರ್ಕಾರ ಈ ನಿರ್ಧಾರ ಮಾಡಿತ್ತು.ಈ ನಡುವೆ ಆಟೋ ಮೇಜರ್ ಮಹೀಂದ್ರಾ & ಮಹೀಂದ್ರಾ (ಎಂ & ಎಂ) ಲಿಮಿಟೆಡ್ ಜುಲೈನಲ್ಲಿ ಕಂಪನಿಯು ತಮಿಳುನಾಡಿನ ಚೆಂಗಲ್ಪಟ್ಟುವಿನ ಮಹೀಂದ್ರಾ ರಿಸರ್ಚ್ ವ್ಯಾಲಿ (ಎಂಆರ್‌ವಿ) ನಲ್ಲಿ ಇವಿ ಬ್ಯಾಟರಿ ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸುತ್ತಿದೆ ಎಂದು ತಿಳಿಸಿದೆ.

Tap to resize

Latest Videos

ಸಾಲು ಸಾಲು ಹಬ್ಬಕ್ಕೆ ಬಂಪರ್ ಕೊಡುಗೆ, ಸ್ಕೋಡಾದಿಂದ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರು!

click me!