ಮಾರುಕಟ್ಟೆ ಕುಸಿತದಲ್ಲೂ ಬೈಕ್ ಹಾಗೂ ಸ್ಕೂಟರ್ ಮಾರುಕಟ್ಟೆ ಮಾರಾಟ ಆಟೋಮೊಬೈಲ್ ಕಂಪನಿಗಳಿಗೆ ಸಮಾಧಾನ ತಂದಿದೆ. ಎಪ್ರಿಲ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ದ್ವಿಚಕ್ರ ವಾಹನ ವಿವರ ಇಲ್ಲಿದೆ.
ನವದೆಹಲಿ(ಮೇ.17): ಹೊಸ ಆರ್ಥಿಕ ವರ್ಷ ಭಾರತೀಯ ಆಟೋಮೊಬೈಲ್ ಕಂಪನಿಗಳಿಗೆ ನಿರೀಕ್ಷಿತ ಲಾಭ ತಂದುಕೊಟ್ಟಿಲ್ಲ. ವಾಹನ ಮಾರಾಟದಲ್ಲಿ ಶೇಕಡಾ 17 ರಷ್ಟು ಕುಸಿತ ಕಂಡಿದೆ. ಆದರೆ ಸ್ಕೂಟರ್ ಹಾಗೂ ಬೈಕ್ ಮಾರಾಟದಲ್ಲಿ ಹೀರೋ ಮೊದಲ ಸ್ಥಾನ ಉಳಿಸುವಲ್ಲಿ ಯಶಸ್ವಿಯಾಗಿದೆ. ಹೊಂಡಾ ಹಾಗೂ ಟಿವಿಎಸ್ 2ಮತ್ತು 3ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್- ಕಾರು ಪಾರ್ಕಿಂಗ್ ಮೇಲೆ ಡಿಸ್ಕೌಂಟ್!
undefined
ಎಪ್ರಿಲ್ ತಿಂಗಳಲ್ಲಿ ಹೀರೋ ಸ್ಕೂಟರ್ ಹಾಗೂ ಬೈಕ್ 5,67,932 ಬೈಕ್ ಮಾರಾಟವಾಗಿದೆ. ಇನ್ನು 2ನೇ ಸ್ಥಾನದಲ್ಲಿರುವ ಹೊಂಡಾ 4,32,767 ವಾಹನ ಮಾರಾಟವಾಗಿದೆ. ಕಳೆದ ವರ್ಷದ ಎಪ್ರಿಲ್ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಹೊಂಡಾ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಶೇಕಡಾ 31 ರಷ್ಟು ಮಾರಾಟದಲ್ಲಿ ಕುಸಿತ ಕಂಡಿದೆ. ಇನ್ನು ಹೀರೋ ಮೊದಲ ಸ್ಥಾನದಲ್ಲಿದ್ದರೂ ಶೇಕಡಾ 16 ರಷ್ಟು ಇಳಿಕೆ ಕಂಡಿದೆ.
ಎಪ್ರಿಲ್ ತಿಂಗಳ ದ್ವಿಚಕ್ರ ವಾಹನ ಮಾರಾಟ:
ಬೈಕ್ ಎಪ್ರಿಲ್ 2019
ಹೀರೋ 5,67,932
ಹೊಂಡಾ 4,32,767
ಟಿವಿಎಸ್ 2,48,456
ಬಜಾಜ್ 2,05,875
ಯಮಹಾ 60,781
ರಾಯಲ್ ಎನ್‌ಫೀಲ್ಡ್ 59,137
ಸುಜುಕಿ 57,053