ಭಾರತದ ಬಿಡುಗಡೆಯಾಗುತ್ತಿದೆ ಅತ್ಯಂತ ದುಬಾರಿ ಟ್ರಿಯಂಪ್ ರಾಕೆಟ್ 3 GT ಬೈಕ್!

By Suvarna News  |  First Published Sep 5, 2020, 6:44 PM IST

ಟ್ರಿಯಂಪ್ ಮೋಟರ್‌ಸೈಕಲ್ ಭಾರತದಲ್ಲಿ ಅತ್ಯಂದ ದುಬಾರಿ ಹಾಗೂ ಅತ್ಯಂತ ಪವರ್‌ಫುಲ್ ಎಂಜಿನ್ ಬೈಕ್ ಬಿಡುಗಡೆ ಮಾಡುತ್ತಿದೆ. ಸೆ.10 ರಂದು ನೂತನ ಟ್ರಿಯಂಪ್ ರಾಕೆಟ್  3 GT ಬೈಕ್ ಬಿಡುಗಡೆಯಾಗಲಿದೆ. ಬೈಕ್ ಬೆಲೆ ಹಾಗೂ ಎಂಜಿನ್ ವಿಶೇಷತೆ ಇಲ್ಲಿದೆ.


ನವದೆಹಲಿ(ಸೆ.05):'ಟ್ರಿಯಂಪ್ ಮೋಟಾರ್‌ಸೈಕಲ್ ಇದೀಗ ಭಾರತದಲ್ಲಿ ಹೊಸ ವರ್ಶನ್ ರಾಕೆಟ್ 3GT ಬೈಕ್ ಬಿಡುಗಡೆ ಮಾಡುತ್ತಿದೆ. ಈ ಬೈಕ್ ಭಾರತದಲ್ಲಿ ಲಭ್ಯವಿರುವ ಅತ್ಯಂದ ದುಬಾರಿ ಹಾಗೂ ಮೋಸ್ಟ್ ಪವರ್‌ಫುಲ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಟ್ರಿಯಂಪ್ ರಾಕೆಟ್ 3GT ಬೈಕ್ 2,458 ಸಿಸಿ ಎಂಜಿನ್ ಹೊಂದಿದೆ. ಇದು ಸಾಮಾನ್ಯ ಕಾರಿನ ಎಂಜಿನ್‌ಗಿಂತಲೂ ಮೋಸ್ಟ್ ಪವರ್‌ಪುಲ್ ಆಗಿದೆ.

ವಿಶ್ವದ ಸ್ಟೈಲೀಶ್ ಬೈಕ್ - ಟ್ರಿಯಂಪ್ ರಾಕೆಟ್ III TFC ಅನಾವರಣ!

Latest Videos

undefined

2,458 ಸಿಸಿ ಎಂಜಿನ್ ಹೊಂದಿರುವ ನೂತನ ಟ್ರಿಯಂಪ್ ರಾಕೆಟ್ 3GT ಬೈಕ್ 167PS ಪವರ್ ಹಾಗೂ  221Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ.  ಎಂಜಿನ್ ಹಾಗೂ ದಕ್ಷತೆಯಲ್ಲಿ ಇದು ಭಾರತ ಮಾತ್ರವಲ್ಲ ವಿಶ್ವದಲ್ಲೇ ಪವರ್‌ಪುಲ್ ಅನ್ನೋ ಹೆಗ್ಗಳಿಕೆ ಹೊಂದಿದೆ.

ಬೈಕ್ ಡಿಸೈನ್‌ನಲ್ಲಿ ರಾಕೆಟ್ 3R ಬೈಕ್ ಹಾಗೂ ನೂತನ ರಾಕೆಟ್ 3 GT ಬೈಕ್ ಹೆಚ್ಚಿನ ವ್ಯತ್ಯಾಸಗಳಿಲ್ಲ. ಇನ್ನು ಸುರಕ್ಷತೆಗಾಗಿ ABS ಬ್ರೇಕಿಂಗ್, ಟ್ರಾಕ್ಷನ್ ಕಂಟ್ರೋಲ್ ಫೀಚರ್ಸ್ ಸೇರಿಸಲಾಗಿದೆ. ನೂತನ ಬೈಕ್‌ನಲ್ಲಿ 4 ರೈಡಿಂಗ್ ಮೊಡ್‌ಗಳಿವೆ. ಜೊತೆಗೆ ಕ್ರೂಸ್ ಕಂಟ್ರೋಲ್ ಆಯ್ಕೆಯೂ ಇದೆ. 

ರಾಕೆಟ್ 3R ಬೈಕ್ ತೂಕಕ್ಕಿಂತ ನೂತನ ರಾಕೆಟ್ 3 GT ತೂಕವನ್ನು 40 ಕೆಜಿ ಕಡಿಮೆ ಮಾಡಲಾಗಿದೆ. ಸದ್ಯ ಬೈಕ್‌ನ ಒಟ್ಟು ತೂಕ 300 ಕೆಜಿ.  ನೂತನ ಟ್ರಿಯಂಪ್ ರಾಕೆಟ್ 3 GT ಬೆಲೆ 20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟ್ರಿಯಂಪ್ ರಾಕೆಟ್  3R ಬೈಕ್ ಬೆಲೆ 18 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ).

click me!