ಭಿಕ್ಷುಕರ ವೇಷದಲ್ಲಿ ಪೊಲೀಸ್- ನಿಯಮ ಪಾಲಿಸದವರಿಗೆ ನಡು ರಸ್ತೆಯಲ್ಲೇ ಶಿಕ್ಷೆ!

By Web Desk  |  First Published Mar 22, 2019, 5:22 PM IST

ನಿಯಮ ಉಲ್ಲಂಘಿಸುವವರನ್ನ ಹಿಡಿಯಲು ಪೊಲೀಸರು ನಾನಾ ವೇಷದಲ್ಲಿ ರಂಗಕ್ಕಿಳಿಯುವುದು ಸಿನಿಮಾಗಳಲ್ಲಿ ನೋಡಿದ್ದೇವೆ. ಇದೀಗ ನಿಯಮ ಪಾಲಿಸದವರನ್ನು ಪೊಲೀಸರು ಮಾರುವೇಷದಲ್ಲಿ ಹೋಗಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
 


ಮಹಾರಾಷ್ಟ್ರ(ಮಾ.22): ರಸ್ತೆ ನಿಯಮ ಪಾಲನೆಗೆ ಪೊಲೀಸರು ಪ್ರತಿ ದಿನ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇಷ್ಟಾದರೂ ನಿಯಮ ಪಾಲನೆಯಲ್ಲಿ ಭಾರತೀಯರು ಹಿಂದೆ. ಇದೀಗ ಬೈಕ್ ಹಾಗೂ ಸ್ಕೂಟರ್ ಸೈಲೆನ್ಸರ್ ಶಬ್ದ ಹೆಚ್ಚಿಸಿ, ಶಬ್ದ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದವರ ವಿರುದ್ಧ ಪೊಲೀಸರು ವಿನೂತನ ಪ್ರಯೋಗ ಮಾಡಿದ್ದಾರೆ.

ಇದನ್ನೂ ಓದಿ: ಬಜಾಜ್ ಚೇತಕ್ ಸ್ಕೂಟರ್‌ಗೆ ಟ್ರಕ್ ಟಯರ್ - ಇದು ವಿಚಿತ್ರ ಸ್ಕೂಟರ್!

Latest Videos

undefined

ರಸ್ತೆಯಲ್ಲಿ ಪೊಲೀಸರು ನಿಂತಿದ್ದರೆ, ನಿಯಮ ಉಲ್ಲಂಘಿಸುವವರು ಅತೀ ವೇಗವಾಗಿ ವಾಹನ ಚಲಾಯಿಸಿ ಅಥವಾ ಬೇರೆ ರಸ್ತೆ ಆಯ್ಕೆ ಮಾಡಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾರೆ. ಇದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಭಿಕ್ಷುಕರ ವೇಷದಲ್ಲಿ ರಸ್ತೆಗಳಲ್ಲಿ ನಿಂತು ನಿಯಮ ಉಲ್ಲಂಘಿಸುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ನೀಡಿ ಹಾರ್ಲೆ ಡೇವಿಡ್ಸನ್ ಖರೀದಿಸಿ - ಭರ್ಜರಿ ಎಕ್ಸ್‌ಚೇಂಜ್ ಆಫರ್!

ಭಿಕ್ಷುಕರ ವೇಷದಲ್ಲಿ ರಸ್ತೆಯಲ್ಲಿ ನಿಂತ ಪೊಲೀಸರು ಹೆಚ್ಚು ಶಬ್ದ ಬರುವ ಸೈಲೆನ್ಸರ್ ಅಳವಡಿಸಿದ ಸ್ಕೂಟರ್ ಸವಾರರು ಬಂದಾಗ ಭಿಕ್ಷೆ ಬೇಡುವ ನೆಪದಲ್ಲಿ ಸ್ಕೂಟರ್ ಬಳಿ ಹೋಗಿದ್ದಾರೆ. ಬಳಿಕ ಸ್ಕೂಟರ್ ಕೀ ಕಿತ್ತುಕೊಂಡು ಸವಾರರನ್ನು ಹಿಡಿದಿದ್ದಾರೆ. ಬಳಿಕ  ಸೈಲೆನ್ಸರ್ ಕಿತ್ತು ಹಾಕಿ ದಂಡ  ವಿಧಿಸಿ ಕಳುಹಿಸಿದ್ದಾರೆ.

ಪೊಲೀಸರ ಮಾರುವೇಷ ಕಾರ್ಯಚರಣೆಗೆ ಎಲ್ಲಡೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಹೆಲ್ಮೆಟ್ ಹಾಕದವರ ವಿರುದ್ಧ, ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸುವವರ ವಿರುದ್ಧ ಪೊಲೀಸರ ಈ ಕಾರ್ಯಚರಣೆ ಅತ್ಯಂತ ಯಶಸ್ವಿಯಾಗಿದೆ.
 

click me!