ಮಾರುತಿ ಬ್ರೆಜಾ ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೊಯೋಟಾ ಅರ್ಬನ್ ಕ್ರೂಸರ್ ಆಗಿ ಬದಲಾಗಿದೆ. ನೂತನ ಅರ್ಬನ್ ಕ್ರೂಸರ್ SUV ಇದೆ ಸೆಪ್ಟೆಂಬರ್ 23ರಂದು ಬಿಡುಗಡೆಯಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು(ಸೆ.15): ಟೊಯೋಟಾ ಮೋಟಾರ್ಸ್ ತನ್ನ ನೂತನ ಅರ್ಬನ್ ಕ್ರೂಸರ್ SUV ಕಾರು ಬಿಡುಗಡೆ ದಿನಾಂಕ ಖಚಿತಪಡಿಸಿದೆ. ಸೆಪ್ಟೆಂಬರ್ 23ರಂದು ನೂತನ ಕಾರು ಬಿಡುಗಡೆಯಾಗಲಿದೆ. ಇದು ಮಾರುತಿ ಬ್ರೆಜಾ ಕಾರನ್ನು ಕ್ರಾಸ್ ಬ್ಯಾಡ್ಜ್ ಮೂಲಕ ಅರ್ಬನ್ ಕ್ರೂಸರ್ ಬಿಡುಗಡೆ ಮಾಡುತ್ತಿದೆ. ಈಗಾಗಲೇ ಮಾರುತಿ ಬಲೆನೋ ಕಾರನ್ನು ಟೊಯೋಟಾ ಗ್ಲಾಂಝಾ ಕಾರಾಗಿ ಬಿಡುಗಡೆ ಮಾಡಿದೆ. ಇದೇ ರೀತಿ ಇದೀಗ ಅರ್ಬನ್ ಕ್ರೂಸರ್ ಬಿಡುಗಡೆಯಾಗುತ್ತಿದೆ.
ಅರ್ಬನ್ ಕ್ರೂಸರ್ SUV ಕಾರು ಬುಕ್ ಮಾಡಿದ ಗ್ರಾಹಕರಿಗೆ ಸ್ಪೆಷಲ್ ಪ್ಯಾಕೇಜ್!
undefined
ಟೊಯೋಟಾ ಅರ್ಬನ್ ಕ್ರೂಸರ್ ಕಾರು ಈಗಾಗಲೇ ಬುಕಿಂಗ್ ಆರಂಭಿಸಿದೆ. 11,000 ರೂಪಾಯಿ ನೀಡಿ ನೂತನ ಕಾರು ಬುಕ್ ಮಾಡಿಕೊಳ್ಳಬಹುದು. ಕಾರಿನ ಬೆಲೆ ಇನ್ನು ಬಹಿರಂಗವಾಗಿಲ್ಲ. ಆದರೆ ಡೀಲರ್ ಪ್ರಕಾರ, ನೂತನ ಕಾರು ಬ್ರೆಜಾ ಕಾರಿನ ಬೆಲೆಗಿಂತ ಕೊಂಚ ಹೆಚ್ಚಿರಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಅರ್ಬನ್ ಕ್ರೂಸರ್ ಕಾರಿನ ವಿನ್ಯಾಸ ಹೆಚ್ಚು ಕಡಿಮೆ ಮಾರುತಿ ಬ್ರಿಜಾ ಕಾರಿನಂತೆ ಇರಲಿದೆ. ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಇನ್ನು ಎಂಜಿನ್ ಹಾಗೂ ಇತರ ಫೀಚರ್ಸ್ ಬಹುತೇಕ ಸಾಮಾನ್ಯವಾಗಿರಲಿದೆ. ಆದರೆ ಇಂಟಿರಿಯರ್ ಡ್ಯುಯೆಲ್ ಟೋನ್ ಡಿಸೈನ್, ಕ್ಯಾಬಿನ್ ಲೇಔಟ್ ಸೇರಿದಂತೆ ಕೆಲ ಬದಲಾಲಣೆಗಳು ಕಾಣಬಹುದು.
ಇನ್ನು ಪುಶ್ ಸ್ಟಾರ್ಟ್ ಬಟನ್ ಹಾಗೂ ಆಟೋಮ್ಯಾಟಿಕ್ ಎಸಿ ಎಲ್ಲಾ ವಾಹನಕ್ಕೆ ಸ್ಟಾಂಡರ್ಡ್ ಮಾಡಲಾಗಿದೆ. ಕ್ರೂಸ್ ಕಂಟ್ರೋಲ್, ಟಚ್‌ಸ್ಕ್ರೀನ್ ಇನ್ಫೋಟ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಕೆ.1.5 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.