ಸಂಪೂರ್ಣ ಎಥೆನಾಲ್‌ನಿಂದ ಓಡುವ ಜಗತ್ತಿನ ಮೊದಲ ಕಾರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಟೊಯೋಟಾ ಕಂಪನಿಯ ಇನ್ನೋವಾ ಹೈಕ್ರಾಸ್ ಕಾರು ಇದಾಗಿದ್ದು, 100% ಎಥೆನಾಲ್ ಬಳಸಿ ಓಡುತ್ತದೆ.
ನವದೆಹಲಿ: ಸಂಪೂರ್ಣ ಎಥೆನಾಲ್‌ನಿಂದ ಓಡುವ ಜಗತ್ತಿನ ಮೊದಲ ಕಾರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಟೊಯೋಟಾ ಕಂಪನಿಯ ಇನ್ನೋವಾ ಹೈಕ್ರಾಸ್ ಕಾರು ಇದಾಗಿದ್ದು, 100% ಎಥೆನಾಲ್ ಬಳಸಿ ಓಡುತ್ತದೆ.
ಜೈವಿಕ ಇಂಧನವಾಗಿರುವ ಎಥೆನಾಲ್ ಸಂಪೂರ್ಣ ಸ್ವಚ್ಛ ಇಂಧನವೆಂದು ಪರಿಗಣಿತವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್‌ನಂತೆ ಇದು ಇಂಗಾಲದ ಡೈಆಕ್ಸೈಡ್ ಹಾಗೂ ಇತರ ವಿಷಾನಿಲಗಳನ್ನು ಹೊರಸೂಸುವುದಿಲ್ಲ. ಭಾರತದಲ್ಲಿ ಈಗಾಗಲೇ ಪೆಟ್ರೋಲ್‌ನಲ್ಲಿ ಸೀಮಿತ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಿ ಬಳಸುವ ವಾಹನಗಳು ಮಾರುಕಟ್ಟೆಯಲ್ಲಿವೆ. ಇದೇ ಮೊದಲ ಬಾರಿ ಈಗ ಸಂಪೂರ್ಣ ಎಥೆನಾಲ್ ಬಳಸಿ ಓಡುವ ಕಾರು ಮಾರುಕಟ್ಟೆಗೆ ಬಂದಿದೆ.
ಎಲೆಕ್ಟ್ರಿಕ್ ಫ್ಲೆಕ್ಸ್-ಫä್ಯಯೆಲ್ ಟೊಯೋಟಾ ಇನ್ನೋವಾ ಎಂಪಿವಿ ಕಾರನ್ನು ಗಡ್ಕರಿ ದೆಹಲಿಯಲ್ಲಿ ಅನಾವರಣಗೊಳಿಸಿದರು. ಫಾಸಿಲ್ ಇಂಧನದ ಬಳಕೆಯನ್ನು ಕಡಿತಗೊಳಿಸುವ ಕೇಂದ್ರ ಸರ್ಕಾರದ ಯೋಜನೆಗೆ ಪೂರಕವಾದ ಕಾರು ಇದಾಗಿದೆ.
ಈ ಕಾರಿನ ಬೆಲೆ 211 ಕೋಟಿ ರೂಪಾಯಿ, ಮೊದಲು ಬುಕ್ ಮಾಡಿದವರಿಗೆ ಮಾತ್ರ ಲಾ ರೋಸ್ ನೊಯಿರ್ ಭಾಗ್ಯ!
ಟೊಯೋಟಾ ಕಂಪನಿಯ ಪ್ರಕಾರ, ಸಂಪೂರ್ಣ ಎಥೆನಾಲ್ ಬಳಸಿ ಓಡುವ ಈ ಕಾರು ಜಗತ್ತಿನ ಮೊದಲ ಬಿಎಸ್-6 ಎಲೆಕ್ಟ್ರಿಫೈಡ್ ಫ್ಲೆಕ್ಸ್ ಫä್ಯಯೆಲ್ ಕಾರಾಗಿದೆ. ಜೋಳ, ಕಬ್ಬು ಮುಂತಾದವುಗಳ ಹೊಟ್ಟಿನ ಬಯೋಮಾಸ್‌ನಿಂದ ಎಥೆನಾಲ್ ತಯಾರಿಸಲಾಗುತ್ತದೆ. ಇದು ಸಂಪೂರ್ಣ ನವೀಕರಿಸಬಹುದಾದ ಇಂಧನವಾಗಿದೆ.
ಜಗತ್ತಿನಾದ್ಯಂತ ಕಾರ್ಬನ್ ಬಿಡುಗಡೆ ಕಡಿಮೆ ಮಾಡಲು ಎಲೆಕ್ಟ್ರಿಕ್ ಕಾರುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಎಥೆನಾಲ್‌ನಂತಹ ಜೈವಿಕ ಇಂಧನ ಬಳಸುವ ವಾಹನಗಳಿಗೂ ಉತ್ತೇಜನ ನೀಡಲಾಗುತ್ತಿದೆ. ಕಳೆದ ವರ್ಷವಷ್ಟೇ ಗಡ್ಕರಿ ಸಂಪೂರ್ಣ ಹೈಡ್ರೋಜನ್ ಬಳಸಿ ಓಡುವ ಕಾರು ಬಿಡುಗಡೆ ಮಾಡಿದ್ದರು.