ಬೈಕ್ ಕೊಳ್ಳುವ ಪ್ಲಾನ್ ಇದೆಯಾ? ಆಗಸ್ಟ್‌ನಲ್ಲಿ ಸೇಲ್ ಆದ ಟಾಪ್ 5 ಸ್ಕೂಟರ್‍‌ಗಳ ಲಿಸ್ಟ್

Published : Sep 09, 2026, 10:11 PM IST
Kinetic DX Plus electric scooter

ಸಾರಾಂಶ

ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಟಿವಿಎಸ್ ಜೂಪಿಟರ್ ಮತ್ತು ಸುಜುಕಿ ಆಕ್ಸೆಸ್ 125 ಮುಂಚೂಣಿಯಲ್ಲಿವೆ. ಇನ್ನುಳಿದಂತೆ ಟಿವಿಎಸ್ ಐ-ಕ್ಯೂಬ್ ಮತ್ತು ಬಜಾಜ್ ಚೇತಕ್ ಟಾಪ್-5 ಪಟ್ಟಿಗೆ ಲಗ್ಗೆಯಿಡುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಜನರ ಒಲವು ಹೆಚ್ಚುತ್ತಿರುವುದನ್ನು ಸಾಬೀತುಪಡಿಸಿವೆ.

ಭಾರತದಲ್ಲಿ ಸ್ಕೂಟರ್ ಕೇವಲ ಪ್ರಯಾಣದ ಸಾಧನವಾಗಿ ಉಳಿದಿಲ್ಲ, ಬದಲಿಗೆ ಪ್ರತಿಯೊಂದು ಕುಟುಂಬದ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಆಫೀಸ್‌ಗೆ ಹೋಗಲು, ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ತರಕಾರಿ-ಮನೆ ಸಾಮಾನು ತರಲು.. ಸಿಟಿ ಟ್ರಾಫಿಕ್‌ನಲ್ಲಿ ಬೈಕ್‌ಗಳಿಗಿಂತ ಸ್ಕೂಟರ್ ಓಡಿಸುವುದು ಮಹಿಳೆಯರಿಗೂ, ಹಿರಿಯರಿಗೂ ಬಹಳ ಸುಲಭ. ಇದೇ ಕಾರಣಕ್ಕೆ ದೇಶದಲ್ಲಿ ಪ್ರತಿ ತಿಂಗಳು ಲಕ್ಷಾಂತರ ಸ್ಕೂಟರ್‌ಗಳು ಮಾರಾಟವಾಗುತ್ತವೆ.

ನೀವೇನಾದರೂ ಸದ್ಯದಲ್ಲೇ ಹೊಸ ಸ್ಕೂಟರ್ ಖರೀದಿಸುವ ಯೋಚನೆಯಲ್ಲಿದ್ದರೆ ಭಾರತೀಯರು ಅತಿ ಹೆಚ್ಚು ಇಷ್ಟಪಟ್ಟು ಖರೀದಿಸಿದ ಟಾಪ್ 5 ಸ್ಕೂಟರ್‌ಗಳ ಲಿಸ್ಟ್ ಇಲ್ಲಿದೆ ನೋಡಿ..

ಹೋಂಡಾ ಆಕ್ಟಿವಾ (Honda Activa)

ಭಾರತೀಯರ ಫೇವರಿಟ್ ಸ್ಕೂಟರ್ ಎಂದೇ ಹೆಸರಾಗಿರುವ ‘ಹೋಂಡಾ ಆಕ್ಟಿವಾ’ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತೀಚಿನ ವರದಿಗಳ ಪ್ರಕಾರ ಬರೋಬ್ಬರಿ 2,06,170 ಯುನಿಟ್‌ಗಳು ಮಾರಾಟವಾಗುವ ಮೂಲಕ ಆಕ್ಟಿವಾ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಇಡೀ ಕುಟುಂಬದ ಯಾವುದೇ ಸದಸ್ಯರಾದರೂ ಸುಲಭವಾಗಿ ಓಡಿಸಬಹುದಾದ, ದೀರ್ಘಕಾಲ ಬಾಳಿಕೆ ಬರುವ ಸ್ಕೂಟರ್ ಇದಾಗಿದೆ.

ಟಿವಿಎಸ್ ಜೂಪಿಟರ್ (TVS Jupiter)

ಹೋಂಡಾ ಆಕ್ಟಿವಾಗೆ ನೇರ ಪೈಪೋಟಿ ನೀಡುತ್ತಿರುವ ಟಿವಿಎಸ್ ಜೂಪಿಟರ್ ಎರಡನೇ ಸ್ಥಾನದಲ್ಲಿದೆ. ಮಾಹಿತಿಗಳ ಪ್ರಕಾರ ಸುಮಾರು 1,48,595 ಯುನಿಟ್‌ಗಳು ಮಾರಾಟವಾಗಿವೆ. ಆರಾಮದಾಯಕ ಆಸನ, ಉತ್ತಮ ಲೆಗ್‌ಸ್ಪೇಸ್, ದೊಡ್ಡ ಸ್ಟೋರೇಜ್ ಮತ್ತು ಅತ್ಯುತ್ತಮ ಮೈಲೇಜ್‌ನಿಂದಾಗಿ ಮಧ್ಯಮ ವರ್ಗದ ಕುಟುಂಬಗಳು ಜೂಪಿಟರ್ ಅನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ.

ಸುಜುಕಿ ಆಕ್ಸೆಸ್ 125 (Suzuki Access 125)

125cc ಎಂಜಿನ್ ಸಾಮರ್ಥ್ಯದ ಸ್ಕೂಟರ್‌ಗಳಲ್ಲಿ ಸುಜುಕಿ ಆಕ್ಸೆಸ್ ತನ್ನ ಪ್ರಾಬಲ್ಯ ಮುಂದುವರಿಸಿದೆ. ಇತ್ತೀಚೆಗೆ 82,505 ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತ ಸುಮಾರು 21% ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. ಕ್ಲಾಸಿಕ್ ಲುಕ್ ಜೊತೆಗೆ ಉತ್ತಮ ಪಿಕಪ್ ಮತ್ತು ಮೈಲೇಜ್ ಬಯಸುವವರಿಗೆ ಆಕ್ಸೆಸ್ 125 ಬೆಸ್ಟ್ ಚಾಯ್ಸ್.

ಟಿವಿಎಸ್ ಐ-ಕ್ಯೂಬ್ (TVS iQube)

ನೀವು ಪೆಟ್ರೋಲ್ ಬದಲಿಗೆ ಇ-ಸ್ಕೂಟರ್ (EV) ಹುಡುಕುತ್ತಿದ್ದರೆ, ಟಿವಿಎಸ್ ಐ-ಕ್ಯೂಬ್ ಮುಂಚೂಣಿಯಲ್ಲಿದೆ. ಒಟ್ಟಾರೆ ಸ್ಕೂಟರ್ ಮಾರಾಟದಲ್ಲಿ 4ನೇ ಸ್ಥಾನ ಪಡೆದಿರುವ ಈ ಸ್ಕೂಟರ್, ಬರೋಬ್ಬರಿ 59,386 ಯುನಿಟ್‌ಗಳು ಮಾರಾಟವಾಗಿವೆ. ವಾರ್ಷಿಕವಾಗಿ ಈ ಸ್ಕೂಟರ್ ಬರೋಬ್ಬರಿ 158% ಬೆಳವಣಿಗೆ ಕಂಡಿದ್ದು, ಇವಿ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ.

ಬಜಾಜ್ ಚೇತಕ್ (Bajaj Chetak

ಒಂದು ಕಾಲದಲ್ಲಿ ಭಾರತೀಯರ ಮನೆ ಮಾತಾಗಿದ್ದ 'ಚೇತಕ್' ಈಗ ಎಲೆಕ್ಟ್ರಿಕ್ ರೂಪದಲ್ಲಿ ಬಂದು ಸಖತ್ ಸದ್ದು ಮಾಡುತ್ತಿದೆ. ಈ ಸ್ಕೂಟರ್ ಬರೋಬ್ಬರಿ 47,184 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ಸಮಯದಲ್ಲಿ ಕೇವಲ 11,584 ಯುನಿಟ್ ಮಾರಾಟವಾಗಿದ್ದ ಚೇತಕ್, ಈ ಬಾರಿ ಭರ್ಜರಿ ಜಂಪ್ ಕಂಡಿದೆ. ಇದರ ಮೆಟಲ್ ಬಾಡಿ ಮತ್ತು ಪ್ರೀಮಿಯಂ ಲುಕ್‌ಗೆ ಗ್ರಾಹಕರು ಫಿದಾ ಆಗಿದ್ದಾರೆ.

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಈಗ ಪೆಟ್ರೋಲ್ ಸ್ಕೂಟರ್‌ಗಳ ಜೊತೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೂ (EV) ಭರ್ಜರಿ ಬೇಡಿಕೆ ಬರುತ್ತಿದೆ. ನಿಮ್ಮ ಬಜೆಟ್ ಮತ್ತು ಬಳಕೆಗೆ ತಕ್ಕಂತೆ ಈ ಮೇಲಿನ ಟಾಪ್ 5 ಸ್ಕೂಟರ್‌ಗಳಲ್ಲಿ ಒಂದನ್ನು ನೀವು ಯಾವುದೇ ಅನುಮಾನವಿಲ್ಲದೆ ಆಯ್ಕೆ ಮಾಡಿಕೊಳ್ಳಬಹುದು.

PREV
Read more Articles on
click me!

Recommended Stories

Kia Car Offers: ಕಿಯಾ ಕಾರ್‌ಗಳ ಮೇಲೆ ಭರ್ಜರಿ ಹಬ್ಬದ ಆಫರ್! ₹1.5 ಲಕ್ಷದವರೆಗೆ ರಿಯಾಯಿತಿ ಘೋಷಣೆ
ಮತ್ತೆ ಬಂತು ಕೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್, ಕೈಗೆಟುಕುವ ಬೆಲೆ ಜೊತೆಗೆ ಹಬ್ಬದ ಆಫರ್ ಘೋಷಣೆ