ಭಾರತದ ಏಳು ಅತ್ಯಂತ ದುಬಾರಿ ನಂಬರ್‌ ಪ್ಲೇಟ್‌ಗಳು, ಕೆಲವು ನಂಬರ್‌ಗೆ ಕೊಟ್ಟ ಹಣದಲ್ಲಿ ಕಾರನ್ನೇ ಖರೀದಿಸಬಹುದು!

By Santosh Naik  |  First Published Jun 19, 2023, 8:17 PM IST

ಜೇಮ್ಸ್ ಬಾಂಡ್ ಫ್ರಾಂಚೈಸ್ ಸ್ವತಃ ಅನೇಕ ದಾಖಲೆಗಳನ್ನು ಸೃಷ್ಟಿಸಿದೆ ಆದರೆ ಭಾರತದಲ್ಲಿ ಈ ಚಿತ್ರದ ದೊಡ್ಡ ಅಭಿಮಾನಿ ಈ ಪಾತ್ರದ ಮೇಲಿನ ಪ್ರೀತಿಯಿಂದಾಗಿ ದುಬಾರಿ ಹಣ ಕೊಟ್ಟು ಅದರ ನಂಬರ್‌ ಪ್ಲೇಟ್‌ ಖರೀದಿಸಿದ್ದಾರೆ. 2019 ರಲ್ಲಿ, ಬಾಲಗೋಪಾಲ್ ತನ್ನ ಹೊಚ್ಚಹೊಸ ಮಿಯಾಮಿ ಬ್ಲೂ ಸ್ಪೋರ್ಟ್ಸ್ ಕಾರಿಗೆ ರೂ 30 ಲಕ್ಷ ಪಾವತಿಸಿ ‘ಕೆಎಲ್-01-ಸಿಕೆ-1’ ನೋಂದಣಿ ಸಂಖ್ಯೆಯನ್ನು ಜಯಿಸಿದ್ದರು.
 


ನವದೆಹಲಿ (ಜೂ.19): ಕೆಲವೊಬ್ಬರಿಗೆ ತಮ್ಮಷ್ಟಿದ ಡ್ರೀಮ್‌ ಕಾರ್‌ಅನ್ನು ಖರೀದಿ  ಮಾಡುವುದರಲ್ಲೇ ಹೆಚ್ಚಿನ ಗಮನವಿರುತ್ತದೆ. ಈ ವೇಳೆ ಯಾವುದೇ ನೋಂದಣಿ ಸಂಖ್ಯೆ ಬಂದರೂ ತೊಂದರೆ ಇಲ್ಲ ಎನ್ನುತ್ತೇವೆ. ಕೆಲವರು ಕಾರ್‌ನ ನೋಂದಣಿ ನಂಬರ್‌ಗಾಗಿ ಹೆಚ್ಚಿನ ತಲೆ ಕೆಡಿಕೊಳ್ಳೋದಿಲ್ಲ. ತಮ್ಮಿಷ್ಟದ ಕಾರ್‌ ಆದ್ರೆ ಸಾಕು ಅಂತಾ ಸುಮ್ಮನಾಗ್ತಾರೆ. ಇಲ್ಲಿಯವರೆಗೂ ವಿದೇಶದಲ್ಲಿ ವ್ಯಾಪಕವಾಗಿದ್ದ ಕಾರ್‌ ನಂಬರ್‌ ಕ್ರೇಜ್‌ ಭಾರತದಲ್ಲೂ ಹೆಚ್ಚುತ್ತಿದೆ. ಭಾರತದಲ್ಲಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಕ್ರೇಜ್ ಹೆಚ್ಚುತ್ತಿದೆ. ಕಾರು ಮಾಲೀಕರು ತಮ್ಮ ನೆಚ್ಚಿನ ಸಂಖ್ಯೆಗಳಿಗೆ ನಂಬಲಾಗದಷ್ಟು ಹೆಚ್ಚಿನ ಮೊತ್ತವನ್ನು ಪಾವತಿಸಲು ಕೂಡ ಸಜ್ಜಾಗುತ್ತಿದೆ. ಈ ಹಿಂದೆ ನಾವು ಪ್ರಪಂಚದಾದ್ಯಂತದ ಅತ್ಯಂತ ದುಬಾರಿ ನಂಬರ್ ಪ್ಲೇಟ್‌ಗಳ ಬಗ್ಗೆ ಮಾತನಾಡಿದ್ದೇವೆ ಮತ್ತು ಇಂದು, ತಮ್ಮ ಐಷಾರಾಮಿ ವಾಹನಗಳಿಗೆ ಫ್ಯಾನ್ಸಿ ಸಂಖ್ಯೆಗಳನ್ನು ಖರೀದಿಸಲು ಲಕ್ಷಗಳನ್ನು ಖರ್ಚು ಮಾಡಿದ ಭಾರತೀಯರ ಪಟ್ಟಿ ಇಲ್ಲಿದೆ.

34 ಲಕ್ಷ ರೂಪಾಯಿ: ಟೊಯೊಟಾ ಫಾರ್ಚುನರ್-007: ಜೇಮ್ಸ್‌ ಬಾಂಡ್‌ ಫ್ರಾಂಚೈಸಿ ದೇಶದಲ್ಲಿ ಸೃಷ್ಟಿಸಿರುವ ಕ್ರೇಜ್‌ ಅಂತಿಂತಿದ್ದಲ್ಲ. ಭಾರತದಲ್ಲಿ ಈ ಚಿತ್ರದ ಫ್ಯಾನ್‌ ಆಗಿರುವ ಅಹಮದಾಬಾದ್ ಮೂಲಕ ಆಶಿಕ್‌ ಪಟೇಲ್‌ 2020ರಲ್ಲಿ ತಮ್ಮ ನೆಚ್ಚಿನ ಎಸ್‌ಯುವಿ ಅನ್ನು ಖರೀದಿ ಮಾಡಿದ್ದರು. ಆದರೆ, ಇದರ 007 ನಂಬರ್‌ ಪ್ಲೇಟ್‌ಗಾಗಿ ಅವರು ಬರೋಬ್ಬರಿ 34 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಅವರ ಟೊಯೋಟಾ ಫಾರ್ಚುನರ್‌ ಕಾರ್‌ನ ನಂಬರ್ ಪ್ಲೇಟ್‌ GJ01WA007 ಅಂತಿದೆ. ಜೇಮ್ಸ್‌ ಬಾಂಡ್‌ ಮೇಲೆ ಇರುವ ಪ್ರೀತಿಗಾಗಿ ಆನ್‌ಲೈನ್‌ನಲ್ಲಿ ಅವರು ದಾಖಲೆಯ ಬಿಡ್ಡಿಂಗ್ ಮಾಡಿದ್ದರು.

31 ಲಕ್ಷ ರೂಪಾಯಿ: ಪೋರ್ಷೆ 718 ಬಾಕ್ಸ್‌ಸ್ಟರ್ - '1' : ತಿರುವನಂತಪುರದ ಕೌಡಿಯಾರ್ ನಿವಾಸಿ ಕೆ ಎಸ್ ಬಾಲಗೋಪಾಲ್ ಅವರು ದೇವಿ ಫಾರ್ಮಾದ ಮಾಲೀಕರಾಗಿದ್ದಾರೆ, ಪ್ರಮುಖ ಔಷಧೀಯ ವಿತರಣಾ ಕಂಪನಿಯು 1 ಕೋಟಿ ರೂಪಾಯಿ ಮೌಲ್ಯದ ಅವರ ನೀಲಿ ಪೋರ್ಷೆ 718 ಬಾಕ್ಸ್‌ಸ್ಟರ್‌ಗೆ ಫ್ಯಾನ್ಸಿ ನೋಂದಣಿ ಸಂಖ್ಯೆಯನ್ನು ಪಡೆಯಲು ಭಾರೀ ಮೊತ್ತವನ್ನು ಪಾವತಿ ಮಾಡಿದ್ದರು. 2019 ರಲ್ಲಿ, ತಿರುವನಂತಪುರಂನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ನಡೆದ ಹರಾಜಿನಲ್ಲಿ 30 ಲಕ್ಷ ರೂಪಾಯಿ ಪಾವತಿಸುವ ಮೂಲಕ ಬಾಲಗೋಪಾಲ್ ತಮ್ಮ ಹೊಚ್ಚಹೊಸ ಮಿಯಾಮಿ ಬ್ಲೂ ಸ್ಪೋರ್ಟ್ಸ್ ಕಾರಿಗೆ ‘KL-01-CK-1’ ನೋಂದಣಿ ಸಂಖ್ಯೆಯನ್ನು ಗೆದ್ದರು. ಎನ್‌ಆರ್‌ಐ ಉದ್ಯಮಿ ಶೈನ್‌ ಯುಸೂಫ್‌ ಇದೇ ನಂಬರ್‌ಗಾಗಿ 25 ಲಕ್ಷ ರೂಪಾಯಿ ಬಿಡ್‌ ಮಾಡಿದ್ದರಾದರೂ, ಕೊನೆಗ 30 ಲಕ್ಷ ಬಿಡ್‌ ಮಾಡಿದ ಬಾಲಗೋಪಾಲ್‌ ಗೆಲುವು ಕಂಡರು.

18 ಲಕ್ಷ: ಟೊಯೊಟಾ ಲ್ಯಾಂಡ್ ಕ್ರೂಸರ್ LC200 -001: ಬಾಲ್‌ಗೋಪಾಲ್‌ ಅವರೇ ಮತ್ತೆ ಪಟ್ಟಿಯಲ್ಲಿರುವ ಕಾರಣ, 2017ರಲ್ಲಿ ಅವರು ಟೊಯೊಟಾ ಲ್ಯಾಂಡ್‌ಕ್ರೂಸರ್‌ ಎಲ್‌ಸಿ 200 ಕಾರ್‌ನ 001 ನಂಬರ್‌ಗಾಗಿ ಬರೋಬ್ಬರಿ 19 ಲಕ್ಷ ರೂಪಾಯಿ ನೀಡಿದ್ದರು. ಬಿಡ್‌ನಲ್ಲಿ 18 ಲಕ್ಷ ಕೋಟ್‌ ಮಾಡಿದ್ದ ಇವರು ಬಳಿಕ, ಆರಂಭಿಕ ಬುಕ್ಕಿಂಗ್‌ ಆಗಿ 1 ಲಕ್ಷ ರೂಪಾಯಿ ಪಾವತಿ ಮಾಡಿದ್ದರು. ಈ ನಂಬರ್‌ಗಾಗಿ ಅಬ್ದುಲ್‌ ಕರೀಂ, ರೆಂಜು ಕುಮಾರ್‌ ಹಾಗೂ ಎಸ್‌.ವಾಸುದೇವನ್‌ ಕೂಡ ಫೈಟ್‌ನಲ್ಲಿದ್ದರು. ಆದರೆ, ಇವರೆಲ್ಲರನ್ನೂ ಹಿಮ್ಮಟ್ಟಿಸಿ ಬಾಲ್‌ಗೋಪಾಲ್‌ ಈ ನಂಬರ್‌ ಪಡೆದಿದ್ದರು. ಭಾರತದ 7 ದುಬಾರಿ ನಂಬರ್‌ ಪ್ಲೇಟ್‌ಗಳ ಲಿಸ್ಟ್‌ನ್ಲಿ ಬಾಲಗೋಪಾಲ್‌ ಅವರೇ ಎರಡು ಸ್ಥಾನ ಹೊಂದಿದ್ದಾರೆ.

17 ಲಕ್ಷ: ಟೊಯೊಟಾ ಲ್ಯಾಂಡ್ ಕ್ರೂಸರ್ LC200 -0001: 2012 ರಲ್ಲಿ, ಚಂಡೀಗಢದ ಚಹಲ್ ಟೈರ್‌ಗಳ ಮಾಲೀಕ ಜಗಜಿತ್ ಸಿಂಗ್ ಚಾಹಲ್ ಅವರು ತಮ್ಮ ಅಂದಾಜು 1 ಕೋಟಿ ಮೌಲ್ಯದ, ಟೊಯೊಟಾ ಲ್ಯಾಂಡ್ ಕ್ರೂಸರ್ LC200 ಕಾರ್‌ಗಾಗಿ  17 ಲಕ್ಷ ರೂ.ಗಳಿಗೆ CH-01AN-0001 ನೋಂದಣಿ ಸಂಖ್ಯೆಯನ್ನು ಗೆದ್ದಿದ್ದರು. ಇದು ಹೊಸ ಸರಣಿ ಸಂಖ್ಯೆಗೆ ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಚಂಡೀಗಢದ ಇತಿಹಾಸದಲ್ಲಿ ಹೊಸ ಸರಣಿಯ ಹರಾಜನ್ನು ನೋಂದಣಿ ಮತ್ತು ಪರವಾನಗಿ ಪ್ರಾಧಿಕಾರ (RLA) ನಡೆಸಿತು. ಮೂಲತಃ ಅಮೃತಸರ ಜಿಲ್ಲೆಯ ರೊಮಾನಾ ಚಾಕ್ ಗ್ರಾಮದವರಾಗಿರುವ ಚಾಹಲ್‌,, ಅವರು ಹ್ಯುಂಡೈ ಟೆರಾಕನ್, ಟೊಯೊಟಾ ಫಾರ್ಚುನರ್ ಮತ್ತು ಹೋಂಡಾ ಸಿಆರ್‌ವಿ ಸೇರಿದಂತೆ 10 ಕಾರುಗಳನ್ನು  ಹೊಂದಿದ್ದಾರೆ, ಇವೆಲ್ಲವೂ ವಿವಿಧ ಸರಣಿಗಳ ನೋಂದಣಿ ಸಂಖ್ಯೆ '0001' ಹೊಂದಿದೆ ಎಂದಿದ್ದಾರೆ.

16 ಲಕ್ಷ: ಜಾಗ್ವಾರ್‌ ಎಕ್ಸ್‌ ಜೆ-001: ರಾಹುಲ್ ತನೇಜಾ ಅವರು ಲೈವ್ ಕ್ರಿಯೇಷನ್ಸ್ ಎಂಬ ವೆಡ್ಡಿಂಗ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಲೀಕರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಢಾಬಾಗಳಲ್ಲಿ ಕೆಲಸ ಮಾಡಿದ್ದ ತನೇಜಾ 2018ರಲ್ಲಿ ತಮ್ಮ ಹೊಚ್ಚ ಹೊಸ ಜಾಗ್ವಾರ್‌ ಎಕ್ಸ್‌ಜೆ ಕಾರ್‌ನ ನಂಬರರ್‌ ಪ್ಲೇಟ್‌ಗಾಗಿ 16 ಲಕ್ಷ ಖರ್ಚು ಮಾಡಿದ್ದರು.  ಅವರ 1.5 ಕೋಟಿಯ ಕಾರು RJ45 CG 001 ನಂಬರ್ fಪ್ಲೇಟ್‌ಅನ್ನು ಹೊಂದಿದೆ. 2011ರಲ್ಲಿ ತಮ್ಮ 10 ಲಕ್ಷ ರೂಪಾಯಿಯ ಬಿಎಂಡಬ್ಲ್ಯು ಕಾರ್‌ಗಾಗಿ VIP 0001 ನಂಬರ್‌ ಅನ್ನು ಖರೀದಿ ಮಾಡಿದ್ದರು.

ವಾಹನ ಮಾಲೀಕರೇ ಇರಲಿ ಎಚ್ಚರ, ಟೋಲ್ ದಾಟಲು 90 ರೂ ಬದಲು 9 ಕೋಟಿ ರೂ ಬಿಲ್ ಹಾಕಿದ FASTag!

12 ಲಕ್ಷ: ರೋಲ್ಸ್ ರಾಯ್ಸ್ ಕುಲ್ಲಿನನ್ -0001:ನಾವು ಐಷಾರಾಮಿ ಬಗ್ಗೆ ಮಾತನಾಡುವಾಗ, ಇತ್ತೀಚೆಗಷ್ಟೇ 13.14 ಕೋಟಿ ರೂಪಾಯಿ ವೆಚ್ಚದ ಅಲ್ಟ್ರಾ ಐಷಾರಾಮಿ ರೋಲ್ಸ್ ರಾಯ್ಸ್ ಹ್ಯಾಚ್‌ಬ್ಯಾಕ್ ಖರೀದಿಸಿದ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿಯನ್ನು ಹೇಗೆ ಮರೆಯಲು ಸಾಧ್ಯ. ಇದು ದೇಶದಲ್ಲಿ ಇದುವರೆಗಿನ ಅತ್ಯಂತ ದುಬಾರಿ ಕಾರು ಖರೀದಿಗಳಲ್ಲಿ ಒಂದು.. ಆದರೆ ಕುತೂಹಲಕಾರಿ ಅಂಶವೆಂದರೆ ಅವರು "0001" ಎಂದು ಕೊನೆಗೊಳ್ಳುವ ವಿಐಪಿ ಸಂಖ್ಯೆಗೆ 12 ಲಕ್ಷ ರೂಪಾಯಿ ನೀಡಿದ್ದಾರೆ. ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಬೆಲೆಬಾಳುವ ಮತ್ತು ಅಲ್ಟ್ರಾ ಪ್ರೀಮಿಯಂ ಕಾರಾದ ರೋಲ್ಸ್ ರಾಯ್ಸ್ ಕಲಿನನ್ ಅನ್ನು ಖರೀದಿಸಿದ್ದಾರೆ ಮತ್ತು ಇದು ಅಂಬಾನಿ ಗ್ಯಾರೇಜ್‌ನಲ್ಲಿ ಮೂರನೇ ಕಲಿನನ್ ಮಾದರಿಯಾಗಿದೆ. ಪರ್ಸನಲ್ ಕಸ್ಟಮೈಸೇಶನ್ ನಿಂದಾಗಿ ಇದರ ಬೆಲೆ ಭಾರೀ ಹೆಚ್ಚಾಗಿದೆ ಎನ್ನಲಾಗಿದೆ. 

Latest Videos

ನೂತನ ಹೀರೋ Xtreme 160R 4V ಬೈಕ್ ಬಿಡುಗಡೆ, ಬೆಲೆ ಕಡಿಮೆ, ಹೆಚ್ಚು ಮೈಲೇಜ್!

10.31 ಲಕ್ಷ: ಬಿಎಂಡಬ್ಲ್ಯು-5 ಸಿರೀಸ್‌-1:ರಾಹುಲ್ ತನೇಜಾ ಅವರು ಸಂಖ್ಯಾಶಾಸ್ತ್ರದಲ್ಲಿ ಅವರ ಬಲವಾದ ನಂಬಿಕೆ ಹೊಂದಿದ್ದಾರೆ. ಆದ್ದರಿಂದ ಅವರು 1ನೇ ನಂಬರ್‌ ಒಳ್ಳೆಯದು ಎಂದು ಪರಿಗಣಿಸುತ್ತಾರೆ. ಅದಕ್ಕಾಗಿಯೇ ಅವರು ತಮ್ಮ BMW 5-ಸರಣಿಯ ನೋಂದಣಿಗಾಗಿ 10.31 ಲಕ್ಷ ರೂಪಾಯಿಗಳನ್ನು ಪಾವತಿಸಿದರು ಆದರೆ ನಂತರ ಅವರು ಕಾರನ್ನು ಮಾರಾಟ ಮಾಡಿದರು ಆದರೆ ಈಗ ಅವರ 7-ಸರಣಿಗೆ ಬಳಸುತ್ತಿರುವ ನಂಬರ್ ಪ್ಲೇಟ್ ಅನ್ನು ಉಳಿಸಿಕೊಂಡರು.

click me!