80ರ ದಶಕದಲ್ಲಿ ಭಾರತದ ರಸ್ತೆಗಳನ್ನು ಆಳಿದ್ದ ಲೂನಾ ಮೊಪೆಡ್‌ ಹೊಸ ರೂಪದಲ್ಲಿ ಮತ್ತೆ ಲಾಂಚ್

By Kannadaprabha NewsFirst Published Feb 7, 2024, 7:57 AM IST
Highlights

1970-80ರ ದಶಕದಲ್ಲಿ ಭಾರತದ ರಸ್ತೆಗಳನ್ನು ಆಳಿದ್ದ ಲೂನಾ ಮೊಪೆಡ್‌ ಇದೀಗ ಹೊಸ ರೂಪದಲ್ಲಿ ಮತ್ತೆ ರಸ್ತೆಗಿಳಿಯಲು ಸಜ್ಜಾಗಿದೆ.

ನವದೆಹಲಿ: 1970-80ರ ದಶಕದಲ್ಲಿ ಭಾರತದ ರಸ್ತೆಗಳನ್ನು ಆಳಿದ್ದ ಲೂನಾ ಮೊಪೆಡ್‌ ಇದೀಗ ಹೊಸ ರೂಪದಲ್ಲಿ ಮತ್ತೆ ರಸ್ತೆಗಿಳಿಯಲು ಸಜ್ಜಾಗಿದೆ. ಲೂನಾ ಸ್ಕೂಟರನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ಕಳೆದ 1 ವರ್ಷದಿಂದ ಕೈನೆಟೆಕ್‌ ಗ್ರೀನ್‌ ಕಂಪನಿ ಪ್ರಯತ್ನ ಪಡುತ್ತಿತ್ತು. ಬುಧವಾರ ಅದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಬೆಲೆಯನ್ನು ಸಹ ಬುಧವಾರವೇ ಘೋಷಿಸಲಿದೆ.

ಹೇಗಿದೆ ಹೊಸ ಲೂನಾ:

ಹಳೆಯ ಲೂನಾ ಮಾದರಿಯಲ್ಲಿಯೇ ಹೊಸತನ್ನು ಕೂಡಾ ಬಹುಪಯೋಗಿ ಬಳಕೆಗೆ ಅನುಕೂಲವಾಗುವ ರೀತಿಯಲ್ಲಿ ತಯಾರಿಸಲಾಗಿದೆ. ಜೊತೆಗೆ ಇ-ಸ್ಕೂಟರ್‌ಗಳ ಮಾದರಿಯಲ್ಲಿ ರಚನೆ ಮಾಡಲಾಗಿಲ್ಲ. ಹಳೆಯ ಮಾದರಿಯಂತೆ ಹ್ಯಾಲೋಜೆನ್‌ ಲೈಟ್‌ಗಳನ್ನು ಬಳಕೆ ಮಾಡಲಾಗಿದೆ. ಬ್ಯಾಟರಿ ಹಾಗೂ ಮೋಟರ್‌ ಬಗ್ಗೆ ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲದಿದ್ದರೂ, ಇದು ಒಮ್ಮೆ ಚಾರ್ಜ್‌ ಮಾಡಿದರೆ 100 ಕಿ.ಮೀ. ದೂರ ಓಡಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಹೊಸ ಲೂನಾ ಸ್ಕೂಟರ್‌, ಟೆಲಿಸ್ಕೋಪಿಕ್‌ ಫೋರ್ಕ್ಸ್‌, ಡ್ಯುಯೆಲ್‌ ಶಾಕ್ಸ್‌, ಸ್ಪೋಕ್ಸ್‌ ವೀಲ್ ಮತ್ತು ಡ್ರಮ್‌ ಬ್ರೇಕ್‌ಗಳನ್ನು ಹೊಂದಿದೆ.

ಲೂನಾದಲ್ಲಿ ಓಡಾಡ್ತಾ ಇದ್ದವ್ನ ಲ್ಯಾಂಬೋರ್ಗಿನಿ ಹತ್ತಿಸಿದ್ರಿ; ಮಂಡ್ಯ ಫ್ಯಾನ್ಸ್‌ ರಿಯಾಕ್ಷನ್ ನೋಡಿ!

ಓಲಾ, ಊಬರ್ ಸೇರಿ ಎಲ್ಲ ಟ್ಯಾಕ್ಸಿಗಳಿಗೆ ಏಕರೂಪ ದರ ನಿಗದಿಗೊಳಿಸಿದ ಸರ್ಕಾರ; 4 ಕಿ.ಮೀ.ಗೆ 100 ರೂ. ಚಾರ್ಜ್‌

click me!