30 ಸಾವಿರ ಪಾವತಿಸಿ ಟಾಟಾ ಹರಿಯರ್ ಕಾರು ಬುಕ್ ಮಾಡಿ!

Published : Oct 13, 2018, 12:30 PM ISTUpdated : Oct 13, 2018, 01:15 PM IST
30 ಸಾವಿರ ಪಾವತಿಸಿ ಟಾಟಾ ಹರಿಯರ್ ಕಾರು ಬುಕ್ ಮಾಡಿ!

ಸಾರಾಂಶ

ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಹರಿಯರ್ ಕಾರು ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ನೂತನ ಟಾಟಾ ಹರಿಯರ್ ಕಾರು ಬುಕ್ಕಿಂಗ್ ಆರಂಭಗೊಳ್ಳಲಿದೆ. ಈ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಮುಂಬೈ(ಅ.13): ಟಾಟಾ ಮೋಟಾರ್ಸ್ ಕಂಪೆನಿಯ ಬಹುನಿರೀಕ್ಷಿತ ಟಾಟಾ ಹರಿಯರ್ SUV ಕಾರು ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 15 ರಿಂದ ಟಾಟಾ ಹರಿಯರ್ ಕಾರು ಬುಕ್ಕಿಂಗ್ ಆರಂಭಗೊಳ್ಳಲಿದೆ. 

30,000 ರೂಪಾಯಿ ಪಾವತಿಸಿ ನೂತನ ಟಾಟಾ ಹರಿಯರ್ ಕಾರನ್ನ ಬುಕ್ ಮಾಡಿಕೊಳ್ಳಬಹುದು. 2019ರ ಜನವರಿಯಲ್ಲಿ ಕಾರು ಬಿಡುಗಡೆಯಾಗಲಿದೆ. ಇಷ್ಟೇ ಅಲ್ಲ ಪ್ರೀ ಬುಕ್ ಮಾಡಿದ ಗ್ರಾಹಕರಿಗೆ ಅದೇ ತಿಂಗಳಲ್ಲಿ ಕಾರು ಡೆಲಿವರಿಯಾಗಲಿದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನ ಉಪಾಧ್ಯಕ್ಷ ಎಸ್.ಎನ್ ಬರ್ಮನ್ ಹೇಳಿದ್ದಾರೆ.

ನೂತನ ಟಾಟಾ ಹರಿಯರ್ ಕಾರು 2.0 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ವಿಶೇಷ ಅಂದರೆ ಇದು ಕ್ರಿಯೊಟೆಕ್ 2.0 ಎಂಜಿನ್. ಕ್ರಿಯೊಟೆಕ್ ರಾಕೆಟ್ ಎಂಜಿನ್‌ನಿಂದ ಸ್ಪೂರ್ತಿ ಪಡೆದು ಈ ಟಾಟಾ ಹರಿಯರ್ ಎಂಜಿನ್ ತಯಾರಿಸಲಾಗಿದೆ. 5 ಸೀಟರ್ ಹರಿಯರ್ ಕಾರು 140 ಬಿಹೆಚ್‌ಪಿ ಪವರ್ ಹೊಂದಿದ್ದರೆ, 7 ಸೀಟರ್ ಹರಿಯರ್ ಕಾರು 170 ಬಿಹೆಚ್‌ಪಿ ಪವರ್ ಹೊಂದಿದೆ. ಟಾಟಾ ಹೆಕ್ಸಾ ರೀತಿಯಲ್ಲೇ ಮಲ್ಟಿ ಡ್ರೈವ್ ಮೂಡ್ ತಂತ್ರಜ್ಞಾನ ಹೊಂದಿದೆ. 

ನೂತನ ಟಾಟಾ ಹರಿಯರ್ ಕಾರು, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್, ಜೀಪ್ ಕಂಪಾಸ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ. ಇದರ ಬೆಲೆ 12 ಲಕ್ಷದಿಂದ 18 ಲಕ್ಷ(ಎಕ್ಸ್ ಶೋ ರೂಂ) ವರೆಗೆ ಇರಲಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ