10 ವರ್ಷಕ್ಕಿಂತ ಹಳೆ ಕಾರುಗಳಿಗೆ ನಿಷೇಧ-ರಸ್ತೆಗಿಳಿದರೆ ದಂಡ!

By Web Desk  |  First Published Oct 12, 2018, 4:01 PM IST

ಹೊಸ ಕಾರು ಖರೀದಿಸಿದರೂ ಕಷ್ಟ, ಹಳೇ ಕಾರು ಇದ್ದರೂ ಕಷ್ಟ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆ ಕಾರು ಬಳಸುವಂತಿಲ್ಲ. ಹೊಸ ನೀತಿ ಹೇಳೋದೇನು?


ನವದಹೆಲಿ(ಅ.12): ದೆಹಲಿ ಪರಿಸರ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಾಹನ ದಟ್ಟಣೆ ಹೇಳುವುದೇ ಬೇಡ. ಜನರೂ ಓಡಾಡೋದಕ್ಕೂ ಜಾಗವಿಲ್ಲ ಅನ್ನುವಷ್ಟರ ಮಟ್ಟಿಗೆ ದೆಹಲಿ ವಾಹನಗಳಿಂದ ತುಂಬಿ ಹೋಗಿದೆ. ಸರ್ಕಾರದ ಸಮ ಹಾಗೂ ಬೆಸ ಸಂಖ್ಯೆ ನಂಬರ್ ವಾಹನಗಳ ಓಡಾಟ ನಿಯಮ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ದೆಹಲಿ ಇದೀಗ ಹೊಸ ನಿಯಮ ಜಾರಿಗೆ ತಂದಿದೆ.

15 ವರ್ಷಗಳಿಗಿಂತ ಹಳೆ ಡೀಸೆಲ್ ಹಾಗೂ 10 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್  ಕಾರು, ಜೀಪು, ಬಸ್ಸು , ಲಾರಿ(ನಾಲ್ಕು ಚಕ್ರದ ಯಾವುದೇ ವಾಹನ)ಗಳು ರಸ್ತೆಯಲ್ಲಿ ಓಡಾಡುವಂತಿಲ್ಲ ಎಂದು ದೆಹಲಿ ಸಾರಿಗೆ ವಿಭಾಗ ಹೇಳಿದೆ.

Latest Videos

undefined

ನಿಗಧಿತ ಅವಧಿಗಿಂತ ಹಳೇ ಕಾರುಗಳನ್ನ ಗುಜುರಿ(ಕ್ರಾಶ್) ಹಾಕಲು ಸೂಚಿಸಿದೆ. ಈ ವೇಳೆ ವಾಹನ ಮಾಲೀಕರು ಮೊದಲು ತಮ್ಮ ವಾಹನ ರಿಜಿಸ್ಟ್ರೇಶನ್ ರದ್ದು ಮಾಡುವಂತೆ ಅರ್ಜಿ ಸಲ್ಲಿಸಬೇಕು. ಇದೇ ವೇಳೆ ತಮ್ಮ ಹಳೇ ವಾಹನ ನಂಬರ್‌ನ್ನೇ ಹೊಸ ವಾಹನ್ನಕ್ಕೆ ಇಡಲು ಇಚ್ಚಿಸಿದರೆ ಅದಕ್ಕೆ ಮತ್ತೊಂದು ಅರ್ಜಿ ಸಲ್ಲಿಸಲು RTO ಹೇಳಿದೆ.

ಸದ್ಯದಲ್ಲೇ ವಾಹನ ಮಾಲೀಕರು ಸ್ವಯಂ ಪ್ರೇರಿತರಾಗಿ ತಮ್ಮ ಕಾರನ್ನ ಕ್ರಾಶ್‌ಗೆ ಹಾಕಬಹುದು. ಶೀಘ್ರದಲ್ಲೇ  ಈ ಕುರಿತು ರೂಪ ರೇಶೆ ಪ್ರಕಟಿಸಲಾಗುವುದು ಎಂದು ದೆಹಲಿ RTO ಹೇಳಿದೆ.
 

click me!