ಬೆಂಗಳೂರು ಪೊಲೀಸರು ಸೇರಿದಂತೆ ವಿವಿದ ರಾಜ್ಯಗಳ ಪೊಲೀಸರು ಗಸ್ತು ತಿರುಗಲು ನೂತನ ವಾಹನಗಳನ್ನ ಖರೀದಿಸಿದೆ. ಇದೀಗ ಗುರುಗಾಂವ್ ಪೊಲೀಸರಿಗೆ ನೂತನ ಸ್ಕಾರ್ಪಿಯೋ ಕಾರು ನೀಡಲಾಗಿದೆ.
ಗುರುಗಾಂವ್(ಫೆ.25): ಬೆಂಗಳೂರು ಪೊಲೀಸ್ ಸೇರಿದಂತೆ ದೇಶದ ವಿವಿಧ ನಗರಗಳ ಪೊಲೀಸರು ಗಸ್ತು ತಿರುಗಲು ಹಾಗೂ ಶಾಂತಿ ಸುವ್ಯಸ್ಥೆ ಕಾಪಾಡಲು ಹೊಸ ಹೊಸ ವಾಹನಗಳನ್ನು ಖರೀದಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರು ಪೊಲೀಸರಿಗೆ ಮಾರುಟಿ ಎರ್ಟಿಗಾ ನೀಡಿದ್ದರೆ, ಇದೀಗ ಹರಿಯಾಣದ ಗುರುಗಾಂವ್ ಪೊಲೀಸರಿಗೆ ಮಹೀಂದ್ರ ಸ್ಕಾರ್ಪಿಯೋ ವಾಹನ ನೀಡಲಾಗಿದೆ.
ಇದನ್ನೂ ಓದಿ: ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಜೈಲು - ಹೊಸ ನಿಯಮ ಜಾರಿ!
undefined
ಸೊಸೈಟಿ ಫಾರ್ ಸೇಫ್ ಗುರುಗಾಂವ್ ಸರ್ಕಾರೇತರ ಸಂಸ್ಥೆ ಗುರುಗಾಂವ್ ಪೊಲೀಸರು 6 ನೂತನ ಸ್ಕಾರ್ಪಿಯೋ ನೀಡಿದೆ. 4x2 ವೇರಿಯೆಂಟ್ ಕಾರನ್ನ ಗುರುಗಾಂವ್ ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ಹೆಚ್ಚು ಸ್ಕಾರ್ಪಿಯೋ ಕಾರುಗಳನ್ನೇ ಬಳಸುತ್ತಾರೆ. ಗುರುಗಾಂವ್ ಮಾತ್ರವಲ್ಲ ದೇಶದ ಇತರ ರಾಜ್ಯದಲ್ಲೂ ಸ್ಕಾರ್ಪಿಯೋ ಕಾರನ್ನು ಹೆಚ್ಚಾಗಿ ಬಳಸುತ್ತಾರೆ.
ಇದನ್ನೂ ಓದಿ: ದುಬೈ ಅಲ್ಲ ಇದು ಭಾರತ - ಪೊಲೀಸರಿಗೆ ಪವರ್‌ಲ್ಯಾಂಡ್ 4X4 ATV ಬೈಕ್!
ಗರುಗಾಂವ್ ಪೊಲೀಸರಿಗೆ ನೀಡಿರುವ ಸ್ಕಾರ್ಪಿಯೋ ಕಾರು 2.5 ಲೀಟರ್, ಟರ್ಬೋ ಚಾರ್ಜಡ್ ಡೀಸೆಲ್ ಎಂಜಿನ್, 175bhp ಪವರ್ ಹಾಗೂ 220nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬೆಂಗಳೂರು ಪೊಲೀಸರ ಬಳಿಕ ಇತ್ತೀಗಷ್ಟೇ ಹರಿಯಾಣ ಪೊಲೀಸರು ನೂತನ 25 ಮಾರುತಿ ಎರ್ಟಿಗಾ ಕಾರು ಖರೀದಿಸಿದ್ದರು.