ಹೊಸ ಕಾರ್‌ಗಳಲ್ಲೀಗ ಸ್ಟೆಪ್ನಿ ಮಾಯ!

Kannadaprabha News   | Kannada Prabha
Published : Jan 20, 2026, 05:05 AM IST
 car

ಸಾರಾಂಶ

ಕಾರುಗಳಲ್ಲಿ ಟ್ಯೂಬ್‌ಲೆಸ್‌ ಟಯರ್‌ಗಳ ಬಳಕೆ ಮತ್ತು ಕೇಂದ್ರ ಸರ್ಕಾರದ ಹೊಸ ನಿಯಮಗಳ ಪರಿಣಾಮ, ಮಾರುಕಟ್ಟೆಗೆ ಕಾಲಿಡುತ್ತಿರುವ ಹೊಸ ಕಾರುಗಳಲ್ಲಿ ಇದೀಗ ಸ್ಟೆಪ್ನಿ (ಹೆಚ್ಚುವರಿ ಚಕ್ರ)ಯೇ ಮಾಯವಾಗಿದೆ.

ನವದೆಹಲಿ: ಕಾರುಗಳಲ್ಲಿ ಟ್ಯೂಬ್‌ಲೆಸ್‌ ಟಯರ್‌ಗಳ ಬಳಕೆ ಮತ್ತು ಕೇಂದ್ರ ಸರ್ಕಾರದ ಹೊಸ ನಿಯಮಗಳ ಪರಿಣಾಮ, ಮಾರುಕಟ್ಟೆಗೆ ಕಾಲಿಡುತ್ತಿರುವ ಹೊಸ ಕಾರುಗಳಲ್ಲಿ ಇದೀಗ ಸ್ಟೆಪ್ನಿ (ಹೆಚ್ಚುವರಿ ಚಕ್ರ)ಯೇ ಮಾಯವಾಗಿದೆ.

2020ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಅದರನ್ವಯ 9 ಪ್ರಯಾಣಿಕರನ್ನು ಹೊತ್ತು ಸಾಗಬಲ್ಲ 3.5 ಟನ್‌ ತೂಕದ ಎಂ1 ವರ್ಗಕ್ಕೆ ಸೇರಿದ ವಾಹನ, ಮತ್ತು ಹಗುರ ವಾಣಿಜ್ಯ ವಾಹನಗಳಿಗೆ ಸ್ಟೆಪ್ನಿ ಅಗತ್ಯವಿಲ್ಲ. ಆದರೆ ಈ ನಿಯಮ ಟ್ಯೂಬ್‌ಲೆಸ್ ಟಯರ್‌, ಟೈರ್‌ನ ಒತ್ತಡದ ಮೇಲೆ ನಿಗಾ ವಹಿಸುವ ಸಾಧನವಿರುವ ಮತ್ತು ರಿಪೇರಿ ಕಿಟ್‌ ಹೊಂದಿರುವ ವಾಹನಕ್ಕೆ ಅನ್ವಯ. ಹೀಗಾಗಿ ಈ ಸೌಲಭ್ಯ ಹೊಂದಿರುವ ಹೊಸ ಕಾರುಗಳಿಗೆ ಇದೀಗ ಹೆಚ್ಚುವರಿ ಚಕ್ರ ನೀಡುವ ಪದ್ಧತಿಯನ್ನು ವಾಹನ ಉತ್ಪಾದನಾ ಕಂಪನಿಗಳು ಕೈಬಿಟ್ಟಿವೆ.

ಯಾವ್ಯಾವುದರಲ್ಲಿ ಬದಲಾವಣೆ?:

ಈಗಾಗಲೇ ಮಾರುತಿ ಸುಜುಕಿ, ಹ್ಯುಂಡೈ, ಟೊಯೋಟಾ, ಟಾಟಾ ಮೋಟಾರ್ಸ್‌ನ ಕೆಲ ವಾಹನಗಳಲ್ಲಿ ಸ್ಟೆಪ್ನಿ ನಿಲ್ಲಿಸಲಾಗಿದೆ. ಇದರ ಬದಲು ಮಾರುತಿ ಸುಜುಕಿ ತನ್ನ ಇತ್ತೀಚಿನ ಮಾದರಿಗಳಲ್ಲಿ ರಿಪೇರಿ ಕಿಟ್‌ ನೀಡುತ್ತಿದೆ.

ಟಾಟಾ ಟಿಯಾಗೋ, ಪಂಚ್‌, ಎಂಜಿ ಕಾಮೆಟ್‌ ಸೇರಿದಂತೆ ಹಲವು ಕಂಪನಿಗಳ ಇಲೆಕ್ಟ್ರಿಕ್‌ ವಾಹನಗಳಲ್ಲಿ ಬ್ಯಾಟರಿಗಾಗಿ ಅಧಿಕ ಜಾಗ ಒದಗಿಸುವ ಸಲುವಾಗಿ ಬಿಡಿ ಟೈರ್‌ಗೆ ವಿದಾಯ ಹೇಳಲಾಗಿದೆ. ಜತೆಗೆ ಇದರಿಂದ ಗಾಡಿಯ ಬೆಲೆಯಲ್ಲೂ ಇಳಿಕೆಯಾಗಲಿದೆ.

ಕಾರಿನ ಏಸಿ ಆನ್‌ ಬಳಿಕದ ಮೈಲೇಜ್‌ ಮಾಹಿತಿಗೆ ಆದೇಶ

ನವದೆಹಲಿ: ವಾಹನದ ಬಗ್ಗೆ ಗ್ರಾಹಕರಿಗೆ ನಿಖರ ಮಾಹಿತಿ ಒದಗಿಸುವ ಸಲುವಾಗಿ, ಕಾರುಗಳ ಎ.ಸಿ. ಆನ್‌ ಮಾಡಿಯೂ ಅವುಗಳ ಮೈಲೇಜ್‌ ಪರೀಕ್ಷೆ ನಡೆಸಬೇಕು ಎಂದು ರಸ್ತೆ ಸಾರಿಗೆ ಸಚಿವಾಲಯ ಆದೇಶಿಸಿದೆ. ಇದುಶಿದೇ ವರ್ಷದ ಅ.1ರಿಂದ ಭಾರತದಲ್ಲಿ ಉತ್ಪಾದನೆಯಾಗುವ ಮತ್ತು ಆಮದಾಗುವ ಎಲ್ಲಾ ಮಾದರಿಯ (ಇಂಧನ ಚಾಲಿತ, ವಿದ್ಯುತ್‌ ಚಾಲಿತ) ಕಾರ್‌ಗಳಿಗೆ ಅನ್ವಯಿಸಲಿದೆ. ಈವರೆಗೆ ದೇಶದಲ್ಲಿ ಎ.ಸಿ. ಆಫ್‌ ಮಾಡಿ ಮಾತ್ರ ಮೈಲೇಜ್‌ ಪರೀಕ್ಷಿಸಲಾಗುತ್ತಿತ್ತು. ಆದರೆ ಎ.ಸಿ. ಬಳಕೆಯಲ್ಲಿದ್ದಾಗ ಇಂಧನ ಎರಡಕ್ಕೂ(ಎ.ಸಿ. ಮತ್ತು ವಾಹನ ಚಲಿಸಲು) ಹಂಚಲ್ಪಡುವ ಕಾರಣ, ಮೈಲೇಜ್‌ ಕೊಂಚ ಕಡಿಮೆಯಾಗುತ್ತದೆ. ಆದಕಾರಣ, ಎರಡೂ ಪರಿಸ್ಥಿತಿಯಲ್ಲಿ ಅದನ್ನು ಪರೀಕ್ಷಿಸಿ, ಕೈಪಿಡಿ ಮತ್ತು ವೆಬ್‌ಸೈಟ್‌ಗಳಲ್ಲಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

PREV
Read more Articles on
click me!

Recommended Stories

ಬಜಾಜ್‌ ಚೇತಕ್‌ನಿಂದ ಮತ್ತೊಂದು ಎಲೆಕ್ಟ್ರಿಕ್‌ ಸ್ಕೂಟರ್‌
ಸುಜುಕಿ ಇ ಆ್ಯಕ್ಸೆಸ್ vs ಎಥರ್ 450, ಯಾವ ಎಲೆಕ್ಟ್ರಿಕ್ ಸ್ಕೂಟರ್ ಬೆಸ್ಟ್?