ಮರಕ್ಕೆ ಸ್ಕಾರ್ಪಿಯೋ ಕಾರು ಕಟ್ಟಿ ಹಾಕಿದ ಮಾಲೀಕ; ಇದು ಹೈಟೆಕ್ ಲಾಕ್ ಎಂದು ಆನಂದ್ ಮಹೀಂದ್ರ!

By Suvarna NewsFirst Published Nov 17, 2020, 6:40 PM IST
Highlights

ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಲವು ಬಾರಿ ಕುತೂಹಲಕರ ಹಾಗೂ ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೀಗ ಮರಕ್ಕೆ ಸ್ಕಾರ್ಪಿಯೋ ಕಾರು ಕಟ್ಟಿ ಹಾಕಿದ ಘಟನೆ ಕುರಿತು ಆನಂದ್ ಮಹೀಂದ್ರ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ.

ಮುಂಬೈ(ನ.17): ಸೋಶಿಯಲ್ ಮೀಡಿಯಾದಲ್ಲಿ ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ ಇದೀಗ ಸ್ವಾರಸ್ಯಕರ ಮಾಹಿತಿ ಹಂಚಿಕೊಂಡಿದ್ದಾರೆ. ಮಾಲೀಕನೋರ್ವ ತನ್ನ ಮಹೀಂದ್ರ ಸ್ಕಾರ್ಪಿಯೋ ಕಾರನ್ನು ಮರಕ್ಕೆ ಕಬ್ಬಿಣದ ಚೈನ್ ಮೂಲಕ ಕಟ್ಟಿ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಗಮನಿಸಿದ ಆನಂದ್ ಮಹೀಂದ್ರ ವಿವರಣೆಯೊಂದಿಗೆ ಟ್ವೀಟ್ ಮಾಡಿದ್ದಾರೆ.

105 ಕಿ.ಮೀ ಸೈಕಲ್‌ನಲ್ಲಿ ತೆರಳಿ ಪರೀಕ್ಷೆ ಬರೆದ ವಿದ್ಯಾರ್ಥಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!..

ಇದು ಹೈಟೆಕ್ ಲಾಕಿಂಗ್ ಸಿಸ್ಟಮ್ ಅಲ್ಲ, ಇದರಲ್ಲಿ ಮಾಲೀಕರ ಪೊಸೆಸೀವ್‌ನೆಸ್ ಎದ್ದುಕಾಣುತ್ತಿದೆ. ನನಗೆ ಈ ಚಿತ್ರ ಕೆಲ ನೆನಪನ್ನು ಬಿಚ್ಚಿಡುತ್ತಿದೆ. ಲಾಕ್‌ಡೌನ್ ಸಮಯದಲ್ಲಿ ನಾನು ಹೇಗಿದ್ದೆ ಅನ್ನೋದನ್ನು ಈ ಚಿತ್ರ ಹೇಳುತ್ತಿದೆ. ಈ ವಾರಾಂತ್ಯದಲ್ಲಿ ನಾನು ಈ ಚೈನ್ ಮುರಿಯುತ್ತೇನೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

 

Not exactly a high tech locking solution but at least it shows the owner’s possessiveness! To me, this pic perfectly describes how I feel under lockdown. This weekend I’m going to try breaking that chain..(with my mask on!) pic.twitter.com/CbW4FUml1a

— anand mahindra (@anandmahindra)

ಅಂತರ ಕಾಯ್ದುಕೊಳ್ಳಲು ರಿಕ್ಷಾ ಚಾಲಕನ ಐಡಿಯಾ; ಭರ್ಜರಿ ಆಫರ್ ನೀಡಿದ ಆನಂದ್ ಮಹೀಂದ್ರ!..

ಮಾಲೀಕ ಕಾರು ಕಳ್ಳತನವಾಗಬಾರದು ಎಂದು ಈ ರೀತಿ ಚೈನ್‌ ಮೂಲಕ ಸ್ಕಾರ್ಪಿಯೋ ಕಾರನ್ನು ಮರಕ್ಕೆ ಕಟ್ಟಿ ಹಾಕಿದರೆ ಉತ್ತಮ ನಿರ್ಧಾರವಲ್ಲ. ಕಾರಣ ಈ ಚೈನ್ ಮುರಿಯುವುದು ಕಷ್ಟದ ಕೆಲಸವಲ್ಲ. ಭಾರತದಲ್ಲಿ ಈ ರೀತಿ ವಿನೂತನ ಪ್ರಯೋಗ ಅಲ್ಲಲ್ಲಿ ಕಂಡು ಬರುತ್ತದೆ. ಈ ಕುರಿತು ಆನಂದ್ ಮಹೀಂದ್ರ ಹಲವು ಬಾರಿ ಬೆಳಕು ಚೆಲ್ಲಿದ್ದಾರೆ.
 

click me!