ಚೆನ್ನೈನಲ್ಲಿ ನೀರಿಗೆ ಹಾಹಾಕಾರ; ಡ್ರೈ ವಾಶ್ ಮೊರೆ ಹೋದ ರಾಯಲ್ ಎನ್‌ಫೀಲ್ಡ್!

By Web DeskFirst Published Jul 1, 2019, 10:22 PM IST
Highlights

ಚೆನ್ನೈನಲ್ಲಿ ನೀರಿನ ಕೊರತೆ ಎದುರಾಗಿದೆ. ನೀರಿಲ್ಲದೆ ಜನರು ಚೆನ್ನೈ ತೊರೆಯುತ್ತಿದ್ದಾರೆ. ಇದೀಗ  ನೀರು ಉಳಿತಾಯಕ್ಕೆ ರಾಯಲ್ ಎನ್‌ಫೀಲ್ಡ್ ಕಂಪನಿ ಮುಂದಾಗಿದೆ. ರಾಯಲ್ ಎನ್‌ಫೀಲ್ಡ್ ಸರ್ವೀಸ್ ಸೆಂಟರ್‌ಗಳಲ್ಲಿ ನೀರಿನ ವಾಶ್ ನಿಲ್ಲಿಸಲಾಗಿದ್ದು, ಡ್ರೈವಾಶ್ ಮಾತ್ರ ಲಭ್ಯವಿದೆ.

ಚೆನ್ನೈ(ಜು.01): ದಕ್ಷಿಣ ಭಾರತ ಈಗ ನೀರಿನ ಕೊರತೆ ಎದುರಿಸುತ್ತಿದೆ. ಸದ್ಯ ತಮಿಳುನಾಡಿನ ಚೆನ್ನೈನಲ್ಲಿ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಶಾಲಾ ಕಾಲೇಜುಗಳು ಇಡೀ ದಿನದ ಬದಲು ಅರ್ಧ ದಿನಕ್ಕೆ ಇಳಿದಿದೆ. ಕಂಪನಿಗಳು, ಕೈಗಾರಿಕಾ ಕಂಪನಿಗಳು ನೌಕರರಿಗೆ ರಜೆ ನೀಡಿದೆ. ಇನ್ನು ಹಲವು ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ. ಹೀಗಾಗಿ ವಾಹನ ಶೋ ರೂಂ, ಸರ್ವೀಸ್ ಸ್ಟೇಶನ್ ಇದೀಗ  ಮಿತವಾಗಿ ನೀರು ಬಳಕೆ ಮಾಡಲು ಮುಂದಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ 250cc ಬೈಕ್ ಬಿಡುಗಡೆಗೆ ಸಿದ್ಧತೆ!

ಚೆನ್ನೈನ ರಾಯಲ್ ಎನ್‌ಫೀಲ್ಡ್ ಸರ್ವೀಸ್ ಸ್ಟೇಶನ್ ನೀರಿನ ಅಭಾವದಿಂದ ಡ್ರೈವಾಶ್ ಮೊರೆ ಹೋಗಿದೆ. ಚೆನ್ನೈ ನಗರದಲ್ಲಿರುವ 20 ರಾಯಲ್ ಎನ್‌ಫೀಲ್ಡ್ ಬೈಕ್ ಸರ್ವೀಸ್ ಸೆಂಟರ್ ಡ್ರೈವಾಶ್ ಮೂಲಕ ಸರ್ವೀಸ್ ಮಾಡಲು ಕಂಪನಿ ಸೂಚಿಸಿದೆ. ಇದರಿಂದ ಪ್ರತಿ ತಿಂಗಳು 18  ಲಕ್ಷ ಲೀಟರ್ ನೀರು ಉಳಿತಾಯವಾಗಲಿದೆ ಎಂದು ರಾಯಲ್ ಎನ್‌ಫೀಲ್ಡ್ ಹೇಳಿದೆ.

ಇದನ್ನೂ ಓದಿ: KTM RC 125 ಬೈಕ್ ಬಿಡುಗಡೆ- ಯಮಹಾ R15ಗೆ ಶುರುವಾಯ್ತು ನಡುಕ!

ಡ್ರೈವಾಶ್ ಮೂಲಕ ಬೈಕ್ ತೊಳೆಯುವದರಿಂದ ನೀರು ಉಳಿತಾಯವಾಗುತ್ತದೆ. ಆದರೆ ಕ್ವಾಲಿಟಿ ವಾಶಿಂಗ್‌ನಲ್ಲಿ ಗ್ರಾಹಕರಿಗೆ ಆತಂಕ ಬೇಡ ಎಂದು ರಾಯಲ್ ಎನ್‌ಫೀಲ್ಡ್ ಬ್ಯುಸಿನೆಸ್ ಹೆಡ್ ಶಾಜಿ ಕೊಶಿ ಹೇಳಿದ್ದಾರೆ. ಚೆನ್ನೆ ನಗರಕ್ಕೆ ಪ್ರತಿ ದಿನ 800 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಸದ್ಯ 525 ಮಿಲಿಯನ್ ಲೀಟರ್ ಮಾತ್ರ ಲಭ್ಯವಿದೆ. 
 

click me!