1140 ಸಿಸಿ ಎಂಜಿನ್- ರಾಯಲ್ ಎನ್‌ಫೀಲ್ಡ್ KX ಬೈಕ್ ಅನಾವರಣ

By Web DeskFirst Published Nov 7, 2018, 4:12 PM IST
Highlights

ರಾಯಲ್ ಎನ್‌ಫೀಲ್ಡ್ ನೂತನ ಕಾನ್ಸೆಪ್ಟ್  KX ಅನಾವರಣ ಮಾಡಿದೆ. ನೂತನ ಬೈಕ್ 1140 ಸಿಸಿ ಎಂಜಿನ್ ಹೊಂದಿದೆ. ಅಂದರೆ ಸರಿಸುಮಾರು ಮಾರುತಿ ಸ್ವಿಫ್ಟ್  ಸೇರಿದಂತೆ ಇತರ ಕಾರಿಗೆ ಸಮಾನವಾದ ಎಂಜಿನ್. ಎಲ್ಲಕ್ಕಿಂತ ಮಿಗಿಲಾಗಿ ಇದರ ಲುಕ್ ಮೋಡಿ ಮಾಡುವುದು ಖಚಿತ.

ಇಟಲಿ(ನ.07): ರಾಯಲ್ ಎನ್‌ಫೀಲ್ಡ್ ಕಾನ್ಸೆಪ್ಟ್ KX ಅನಾವರಣ ಗೊಂಡಿದೆ. ಮಿಲಾನ್ ನಗರದಲ್ಲಿ ಆಯೋಜಿಸಲಾದ 2018 EICMA ಆಟೋ ಎಕ್ಸ್ಪೋದಲ್ಲಿಈ ಬೈಕ್ ಪ್ರದರ್ಶಿಸಲಾಗಿದೆ. ಒಂದೇ ನೋಟದಲ್ಲಿ ಈ ಬೈಕ್ ನಿಮ್ಮನ್ನ ಮೋಡಿ ಮಾಡುವುದು ಖಚಿತ.

 

A homage to the 1140 V-Twin KX from the 1930s. The KX Concept just debuted at . Let us know what you think about this concept in your comments below. pic.twitter.com/hmuycKcVE5

— Royal Enfield (@royalenfield)

 

1140 ಸಿಸಿ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಕಾನ್ಸೆಪ್ಟ್ KX, ಭಾರತದ ಮಾರುತಿ ಸ್ಪಿಫ್ಟ್ ಸೇರಿದಂತೆ ಹಲವು ಕಾರುಗಳ ಎಂಜಿನ್‌ಗೆ ಸರಿಸಮಾನಾಗಿದೆ. 1938ರ ರಾಯಲ್‌ ಎನ್‌ಫೀಲ್ಡ್ ಬೈಕ್‌ನಿಂದ ಸ್ಪೂರ್ತಿ ಪಡೆದು ಇದೀಗ ನೂತನ ರಾಯಲ್ ಎನ್‌ಫೀಲ್ಡ್ ಕಾನ್ಸೆಪ್ಟ್ KX ಬೈಕ್ ತಯಾರಿಸಲಾಗಿದೆ.

ಈ ನೂತನ ಬೈಕ್‌ನ್ನ ಭಾರತ ಹಾಗೂ ಲಂಡನ್ ಘಟಕದಲ್ಲಿ ಡಿಸೈನ್ ಮಾಡಲಾಗಿದೆ. ಇದರ ಮುಂಭಾಗದ ಫೋರ್ಕ್ ಡಿಸೈನ್ ಈ ಬೈಕ್‌ನ ವಿಶೇಷತೆ. ಜೊತೆಗೆ ಗ್ರೀನ್ ಹಾಗೂ ಕಾಪರ್ ಪೈಂಟ್ ಕಲರ್ ಹೊಸ ಲುಕ್ ನೀಡಿದೆ.

ಹಳೆ ರೆಟ್ರೋ ಶೈಲಿಯ ಇಂಧನ ಟ್ಯಾಂಕ್, 19 ಇಂಚಿನ್ ವೀಲ್ಹ್, ಸೀಟ್ ಎತ್ತರ 740mm, ಎಲ್ಇಡಿ ಹೆಡ್ ಲೈಟ್ ಸೇರಿದಂತೆ ಈ ಬೈಕ್‌ನಲ್ಲಿ ಎಲ್ಲವೂ ವಿಶೇಷ. 2019ರ ಎಪ್ರಿಲ್‌ನಿಂದ ಈ ಬೈಕ್ ನಿರ್ಮಾಣ ಆರಂಭವಾಗಲಿದೆ. ಇದು ಕೇವಲ ಕಾನ್ಸೆಪ್ಟ್. ಇದು ರಸ್ತೆಗಿಳಿಯುವಾಗ ಇದರ ಲುಕ್ ಬಹುತೇಕ ಬದಲಾಗಲಿದೆ. 

click me!