ಆಕರ್ಷಕ ಲುಕ್-ಹೀರೋ XPlus200T ಅಡ್ವೆಂಚರ್ ಬೈಕ್ ಅನಾವರಣ !

By Web Desk  |  First Published Nov 6, 2018, 10:08 PM IST

ಹೀರೋ ಮೋಟಾರ್ ಕಾರ್ಪ್ ಇದೀಗ ಹೊಸ ಬೈಕ್ ಅನಾವರಣ ಮಾಡಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಸೆಡ್ಡು ಹೊಡೆಯುವ ಈ ಬೈಕ್‌ಗಳ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ವಿವರ.


ಇಟಲಿ(ನ.06): ಹೀರೋ ಮೋಟರ್ ಕಾರ್ಪ್ ಇದೀಗ ನೂತನ ಅಡ್ವೆಂಚರ್ ಬೈಕ್ ಅನಾವರಣ ಮಾಡಿದೆ. ನೂತನ ಹೀರೋ XPlus200T ಬೈಕನ್ನ ಮಿಲಾನ್ ನಗರದಲ್ಲಿ ನಡೆದ EICMA ಮೋಟರ್‌ಸೈಕಲ್ ಎಕ್ಪ್ಪೋದಲ್ಲಿ ಹೀರೋ ಸಂಸ್ಥೆ ಅನಾವರಣ ಮಾಡಿದೆ. 

Tap to resize

Latest Videos

200 ಸಿಸಿ ಸೆಗ್ಮೆಂಟ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಹೀರೋ ಸಂಸ್ಥೆ ನೂತನ ಬೈಕ್ ಅನಾವರಣ ಮಾಡಿದೆ. ಹೀರೋ XPlus200T ಬೈಕ್ 198 ಸಿಸಿ, ಸಿಂಗಲ್ ಸಿಲಂಡರ್, ಎರಡು ವೇಲ್ವ್ ಎಂಜಿನ್ ಹೊಂದಿದೆ.

18bhp ಪವರ್ ಹಾಗೂ 17.1nm ಟಾರ್ಕ್ ಉತ್ಪಾದಿಸಲಿದೆ. ಸಿಂಗಲ್ ಚಾನೆಲ್ ಎಬಿಎಸ್ ಬ್ರೇಕ್ ಸಿಸ್ಟಮ್, ಫುಲ್ ಡಿಜಿಟಲ್ ಸ್ಪೀಡೋ ಮೀಟರ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದರ ವಿನ್ಯಾಸ ಬೈಕ್‌ಗೆ ಹೊಸ ಲುಕ್ ನೀಡಿದೆ.

ಅಗ್ರೆಸ್ಸಿವ್ ಲುಕ್ ಹಾಗೂ ಸ್ಪೋರ್ಟೀವ್ ಆಗಿರುವ ಹೀರೋ XPlus200T ಯುವಕರನ್ನ ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಹೀರೋ ಬೈಕ್ ಹಾಗೂ ಸ್ಕೂಟರ್‌ಗಳು ಮೈಲೇಜ್‌ಗೆ ಹೆಸರುವಾಸಿ. ಇದೀಗ ಯುವ ಸಮೂಹವನ್ನ ಆಕರ್ಷಿಸಲು ಇತರ ಬ್ರಾಂಡ್ ಬೈಕ್‌ಗಳ ರೀತಿ ಅಡ್ವೆಂಚರ್ ಬೈಕ್‌ಗಳನ್ನ ಬಿಡುಗಡೆ ಮಾಡುತ್ತಿದೆ. ನೂತನ ಬೈಕ್ ಬೆಲೆ, ಮೈಲೇಜ್ ಹಾಗೂ ಇತರ ಮಾಹಿತಿ ಕುರಿತು ಸಂಸ್ಥೆ ಮಾಹಿತಿ ಬಹಿರಂಗ ಪಡಿಸಿಲ್ಲ. 

click me!