ಭಾರತದ ರಸ್ತೆಗಳ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ!

By Suvarna News  |  First Published Sep 25, 2020, 3:06 PM IST

ಭಾರತದಲ್ಲಿ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳ ಸ್ವರೂಪ ಬದಲಾಗುತ್ತಿದೆ. ವಿಶ್ವ ದರ್ಜೆ ಮಟ್ಟದ ರಸ್ತೆಗಳು ನಿರ್ಮಾಣವಾಗುತ್ತಿದೆ. ಪ್ರಯಾಣ ಸುಲಭವಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಈ ಬದಲಾವಣೆಗಳಾಗಿದೆ. ಇದರ ನಡುವೆ ಭಾರತದ ರಸ್ತೆ ಕುರಿತು ಕೆಲ ಕುತೂಹಲ ಮಾಹಿತಿ ಬಹಿರಂಗವಾಗಿದೆ. 


ನವದೆಹಲಿ(ಸೆ.25):  ಭಾರತದಲ್ಲಿ ಹಲವು ದಶಕಗಳಿಂದ ರಸ್ತೆಗಳ ಕುರಿತು ದೂರು, ದುಮ್ಮಾನ ಇದ್ದೇ ಇದೆ. ಈಗಲೂ ಭಾರತದ ಸಂಪೂರ್ಣ ರಸ್ತೆಗಳು ಉತ್ತಮವಾಗಿಲ್ಲ. ಆದರೆ ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಅತೀ ಹೆಚ್ಚು ರಸ್ತೆ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. ಹಳೇ ರಸ್ತೆಗಳನ್ನು ನವೀಕರಿಸಿ, ಆಧುನಿಕ ಟಚ್ ನೀಡಲಾಗುತ್ತಿದೆ. 

ಭಾರತದ ಶೇ.71 ರಷ್ಟು ರಸ್ತೆ ಅಪಘಾತಕ್ಕೆ ಒಂದೇ ಕಾರಣ; 2019ರ ವರದಿ ಬಹಿರಂಗ!

Tap to resize

Latest Videos

undefined

 ರಾಷ್ಟ್ರೀಯ ಹೆದ್ದಾರಿ, ಗ್ರಾಮಗಳ ರಸ್ತೆ ಸೇರಿದಂತೆ ಹಲವು ರಸ್ತೆಗಳು ಉತ್ತಮಗೊಳ್ಳುತ್ತಿದೆ. ಇದರ ನಡುವೆ ಕೆಲ ಕುತೂಹಲ ಮಾಹಿತಿಯೂ ಬಹಿರಂಗವಾಗಿದೆ. ಅತೀ ಹೆಚ್ಚು ರಸ್ತೆ ಹೊಂದಿರುವ ವಿಶ್ವದ 2ನೇ ರಾಷ್ಟ್ರ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಭಾರತದಲ್ಲಿ ಒಟ್ಟು 58 ಲಕ್ಷ ಕಿಲೋಮೀಟರ್ ರಸ್ತೆ ಇವೆ. ಇದರಲ್ಲಿ 1.32 ಲಕ್ಷ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯಾಗಿದೆ 

ಭಾರತದ ರಸ್ತೆಗಳು:
ರಾಷ್ಟ್ರೀಯ ಹೆದ್ದಾರಿ = 1,32,500 ಕಿ.ಮೀ
ರಾಜ್ಯ ಹೆದ್ದಾರಿ = 1,56,649
ಇತರ ರಸ್ತೆ = 56,08,477
ಒಟ್ಟು = 58,97,671

ಭಾರತದ ರಾಷ್ಟ್ರೀಯ ಹೆದ್ದಾರಿ ಪೈಕಿ ಶ್ರೀನಗರದಿಂದ- ಕನ್ಯಾಕುಮಾರಿ ರಾಷ್ಟ್ರೀಯ ಹೆದ್ದಾರಿ(NH44) ಅತೀ  ಉದ್ದವಾದ ಹೆದ್ದಾರಿ ಅನ್ನೋ ಖ್ಯಾತಿ ಪಡೆದಿದೆ. ಶ್ರೀನಗರದಿಂದ ಕನ್ಯಾಕುಮಾರಿ ಹೆದ್ದಾರಿ 3,745 ಕಿಲೋಮೀಟರ್ ಉದ್ದವಿದೆ.  ಭಾರತದಲ್ಲಿ ಒಟ್ಟು 608 ಹೈವೇಗಳಿವೆ. 

ಲಾಕ್‌‌ಡೌನ್ ಸಮಯದಲ್ಲೂ ಕೇಂದ್ರ ರಸ್ತೆ ಮತ್ತು ಸಾರಿಗೆ ಇಲಾಖೆ ಹೆದ್ದಾರಿ ನಿರ್ಮಾಣ ಕಾರ್ಯ ಸ್ಥಗಿತ ಮಾಡಿಲ್ಲ. ಲಾಕ್‌ಡೌನ್ ಸಮಯದಲ್ಲಿ ಭಾರತ 2,771 ಕಿಲೋಮೀಟರ್ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಯಾವುದೇ ಅಡಚಣೆ ಇಲ್ಲದ ಕಾರಣ 3,181 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. 

click me!