120 KM ಮೈಲೇಜ್, ಕೈಗೆಟುಕುವ ದರದಲ್ಲಿ ಪ್ಯೂರ್ EV ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

By Suvarna NewsFirst Published Nov 24, 2020, 8:10 PM IST
Highlights

ಪ್ರತಿ ದಿನ ಭಾರತದಲ್ಲಿ ಅತ್ಯಾಧುನಿಕ, ಹೊಸ ತಂತ್ರಜ್ಞಾನ, ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಬಹುತೇಕ ಎಲ್ಲಾ ನಗರಗಳಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಒಂದರ ಮೇಲೊಂದರಂತೆ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ಪ್ಯೂರ್ EV ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ.

ಹೈದರಾಬಾದ್(ನ.24): IIT ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪನಿ ಪ್ಯೂರ್ EV ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಜೆ ಮಾಡಲು ಸಜ್ಜಾಗಿದೆ. ಡಿಸೆಂಬರ್ 1 ರಂದು ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳ ಈ ಸ್ಕೂಟರ್  ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಪಟ್ಟಿಗೆ ಶೀಘ್ರದಲ್ಲೇ ಸೇರಿಕೊಳ್ಳುಲಿದೆ.

ಬರುತ್ತಿದೆ ಬೆಂಗಳೂರಿನ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್, 230 KM ಮೈಲೇಜ್!

ಪ್ಯೂರ್ EV ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 76,000 ರೂಪಾಯಿಂದ ಆರಂಭಗೊಳ್ಳುತ್ತಿದೆ(ಎಕ್ಸ್ ಶೋ ರೂಂ) ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ಮೈಲೇಜ್ ನೀಡಲಿದೆ.  1.5 KW ಬ್ಯಾಟರಿ ಹಾಗೂ 2.2 KW ಪೀಕ್ BLDC ಮೋಟಾರ್ ಹೊಂದಿರುವ ಪ್ಯೂರ್ EV ಗರಿಷ್ಠ ಪವರ್ ಹೊಂದಿದೆ.

ಜನವರಿಯಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!..

ಹೈದರಾಬಾದ್ ಉತ್ಪದನಾ ಘಟಕದಲ್ಲಿ ಪ್ರತಿ ತಿಂಗಳು 20,000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲು ಸಜ್ಜಾಗಿದೆ.  ಡಿಸೆಂಬರ್ 1 ರಿಂದ ದೇಶದ 20 ರಾಜ್ಯದ 100 ವಿವಿದ ನಗರ, ಪಟ್ಟಣಗಳಲ್ಲಿ ಪ್ಯೂರ್ EV ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗಲಿದೆ.

2021ರಲ್ಲಿ ಪ್ಯೂರ್ EV ಬರೋಬ್ಬರಿ 1 ಲಕ್ಷ ಸ್ಕೂಟರ್ ವಿತರಣೆ ಮಾಡುವು ಗುರಿ ಇಟ್ಟುಕೊಂಡಿದೆ. ಬಿಡುಗಡೆಗೂ ಮೊದಲೇ ಪ್ಯೂರ್ EV ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ಯೂರ್ EV ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುವ ವಿಶ್ವಾಸದಲ್ಲಿದೆ.

click me!