ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಬಿತ್ತು ಭಾರಿ ದಂಡ!

By Suvarna News  |  First Published May 26, 2020, 2:17 PM IST

ಒರಿಜಿನಲ್ ವಸ್ತುಗಳನ್ನು ಒಂದು ಇಂಚು ವ್ಯತ್ಯಾಸವಿಲ್ಲದೆ ಡೂಪ್ಲಿಕೇಟ್ ಮಾಡುವುದರಲ್ಲಿ ಚೀನಾ ಮೀರಿಸುವರು ಯಾರು ಇಲ್ಲ. ಬಹುತೇಕ ಎಲ್ಲಾ ಬ್ರಾಂಡೆಡ್ ವಸ್ತುಗಳು ಡೂಪ್ಲಿಕೇಟ್ ಚೀನಾದಲ್ಲಿ ಲಭ್ಯವಿದೆ. ಇಷ್ಟೇ ಅಲ್ಲ ಇತರ ದೇಶಗಳಿಗೂ ರಫ್ತು ಮಾಡುತ್ತದೆ. ಈ ಕಾರಣಕ್ಕೆ ಹಲವು ಬ್ರಾಂಡೆಡ್ ಕಂಪನಿಗಳು ಚೀನಾ ವಿರುದ್ಧ ಕನೂನು ಹೋರಾಟ ಮಾಡಿ ಗೆಲುವು ಸಾಧಿಸಿದೆ. ಇದೀಗ ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿಗೆ ಸಂಕಷ್ಟ ಎದುರಾಗಿದೆ.


ಇಟಲಿ(ಮೇ.26): ವೆಸ್ಪಾ ಸ್ಕೂಟರ್‌ಗಳು ಭಾರತದಲ್ಲೂ ಹೆಚ್ಚು ಜನಪ್ರಿಯವಾಗಿದೆ. ಕಾರಣ ಇದರ ರೆಟ್ರೋ ಸ್ಟೈಲ್, ಆಕರ್ಷಕ ವಿನ್ಯಾಸ ಹಾಗೂ ಪರ್ಫಾಮೆನ್ಸ್. ಇಟಲಿಯ ಪಿಯಾಗ್ಗಿಯೋ ಕಂಪನಿಯ ವೆಸ್ಪಾ ಸ್ಕೂಟರ್ ವಿಶ್ವದಲ್ಲೇ ಹೆಚ್ಚು ಪ್ರಸಿದ್ದಿಯಾಗಿದೆ. ಮಾರಾಟದಲ್ಲೂ ಇತರ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಇದೇ ವೆಸ್ಪಾ ಸ್ಕೂಟರ್ ಡಿಸೈನ್ ಕದ್ದ ಚೀನಾ ಕಂಪನಿ, ಹೊಸ ಸ್ಕೂಟರ್ ಎಂದು ಬಿಡುಗಡೆ ಮಾಡಿತು. 

ಛೀಮಾರಿ ಹಾಕಿಸಿಕೊಂಡ್ರೂ ಬುದ್ದಿ ಕಲಿತಿಲ್ಲ ಚೀನಾ, ಟಾಟಾ ನೆಕ್ಸಾನ್ ಡಿಸೈನ್ ಕಾಪಿ!...

Latest Videos

undefined

2019ರ EICMA ಆಟೋ ಎಕ್ಸ್‌ಪೋ ಮೋಟಾರು ಶೋನಲ್ಲಿ ಚೀನಾ ಕಂಪನಿ ವೆಸ್ಪಾ ಡಿಸೈನ್ ಕಾಪಿ ಮಾಡಿದ ಸ್ಕೂಟರ್ ಅನಾವರಣ ಮಾಡಿತ್ತು. ಇದರ ಬೆನ್ನಲ್ಲೇ ಪಿಯಾಗ್ಗಿಯೋ ಕಂಪನಿ ಕಾಪಿ ರೈಟ್ ಕೇಸ್ ದಾಖಲಿಸಿತ್ತು. ಯುರೋಪಿನ EUIPO ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ ಪಿಯಾಗ್ಗಿಯೋ ಕಾನೂನು ಹೋರಾಟ ಆರಂಭಿಸಿತ್ತು. ಸುದೀರ್ಘ ದಿನಗಳ ಬಳಿಕ ಇದೀಗ ತೀರ್ಪು ಹೊರಬಿದ್ದಿದೆ. ಚೀನಾ ಡಿಸೈನ್ ಕಾನೂನು ಬಾಹಿರ ಎಂದಿದೆ.

ವೆಸ್ಪಾ ಡಿಸೈನ್ ಕಾಪಿ ಮಾಡಿರುವುದು ದೃಢವಾಗಿದೆ. ಈ ಡಿಸೈನ್‌ನಲ್ಲಿ ಸ್ಕೂಟರ್ ಉತ್ಪಾನೆ ಮಾಡಬಾರದು ಹಾಗೂ ಪಿಯಾಗ್ಗಿಯೋ ಕಂಪನಿಗೆ ನಷ್ಟ ಪರಿಹಾರ ನೀಡಲು EUIPO ಕೋರ್ಟ್ ಸೂಚಿಸಿದೆ. ಇತ್ತ ವೆಸ್ಪಾ ಸ್ಕೂಟರ್ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ ವಿರುದ್ಧ ಕಠಿಣ ಕ್ರಮಕ್ಕೆ ಪಿಯಾಗ್ಗಿಯೋ ಆಗ್ರಹಿಸಿದೆ.

ಚೀನಾ ಕಂಪನಿಗಳು ಡಿಸೈನ್ ಕಾಪಿ ಮಾಡುತ್ತಿರುವುದು ಹಾಗೂ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿ ಮುಖಭಂಕಕ್ಕೆ ಒಳಗಾಗಿದೆ. ಇತ್ತೀಚೆಗೆ ಭಾರತದ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ಕಾರಿನ ಡಿಸೈನ್ ಕಾಪಿ ಮಾಡಿತ್ತು. ನೆಕ್ಸಾನ್ ಡಿಸೈನ್‌ನಲ್ಲಿ ಕೊಂಚ ಬದಲಾವಣೆ ಮಾಡಿ ಕಾರು ಬಿಡುಗಡೆ ಮಾಡಿ ಮುಖಭಂಗಕ್ಕೆ ಒಳಾಗಾಗಿತ್ತು.

click me!