ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೂ ಬೀಳುತ್ತೆ ಫೈನ್!

By Suvarna News  |  First Published Jan 16, 2020, 6:54 PM IST

ವಾಹನ ಡ್ರೈವ್ ಅಥವಾ ರೈಡ್ ಮಾಡುವಾಗ ಮೊಬೈಲ್ ಫೋನ್ ಬಳಸುವಂತಿಲ್ಲ. ಪ್ರತಿ ದಿನ ಟ್ರಾಫಿಕ್ ಪೊಲೀಸರು ಮೊಬೈಲ್ ಫೋನ್ ಬಳಕೆ ಮಾಡಿ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುತ್ತಲೇ ಇದ್ದಾರೆ. ವಾಹನ ಚಲಾಯಿಸುತ್ತಿರವಾಗ ಫೋನ್ ಕರೆ ಬಂತು ಎಂದು ರಸ್ತೆ ಬದಿಯಲ್ಲಿ ನಿಲ್ಲಿಸಿ ವಾಹನ ನಿಲ್ಲಿಸಿ ಮಾತನಾಡಿದರೂ ಬೀಳುತ್ತೆ ದಂಡ. ನೂತನ ನಿಯಮ ಜಾರಿಯಾಗುತ್ತಿರುವುದು ಎಲ್ಲಿ? ಇಲ್ಲಿದೆ ವಿವರ.
 


ಚಂಡಿಗಢ(ಜ.16): ಮೋಟಾರು ವಾಹನ ಕಾಯ್ದೆ ತಿದ್ದು ಪಡಿ ಬಳಿಕ ವಾಹನ ಚಾಲಕರು, ಸವಾರರು ಮೊಬೈಲ್ ಫೋನ್ ಬಳಕೆ ಕಡಿಮೆ ಮಾಡಿದ್ದಾರೆ. ಇಷ್ಟಾದರೂ ಪೊಲೀಸರು ಪ್ರತಿ ದಿನ ಸಾವಿರಕ್ಕೂ ಹೆಚ್ಚೂ ಪ್ರಕರಣಗಳು ದಾಖಲಾಗುತ್ತಿದೆ. ಇಷ್ಟು ದಿನ ವಾಹನ ಚಾಲನೆ ಅಥವಾ ದ್ವಿಚಕ್ರ ವಾಹನ ರೈಡ್ ವೇಳೆ ಮೊಬೈಲ್ ಫೋನ್ ಬಳಿಸಿದರೆ ದಂಡ ಹಾಕಲಾಗುತ್ತಿತ್ತು. ಇದೀಗ ಚಾಲನೆ ವೇಳೆ ಕರೆ ಬಂದಾಗ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೂ ಬೀಳಲಿದೆ ಭಾರಿ ದಂಡ.

ಇದನ್ನೂ ಓದಿ: ಹೆಲ್ಮೆಟ್ ಧರಿಸಿದ್ದರೆ 26 ಸಾವಿರ ರೂ ಉಳಿಯುತ್ತಿತ್ತು, ಅಪ್ಪ-ಮಗನಿಗೆ ಎದುರಾಯ್ತು ಸಂಕಷ್ಠ!

Tap to resize

Latest Videos

undefined

ನೂತನ ನಿಯಮ ಚಂಡಿಗಢದಲ್ಲಿ ಜಾರಿಯಾಗುತ್ತಿದೆ. ಫೋನ್ ಸಂಭಾಷಣೆ ಸಂಪೂರ್ಣ ನಿಷೇಧ ಮಾಡಲು ಚಂಡೀಗಢ ಪೊಲೀಸರು ನಿರ್ಧರಿಸಿದ್ದಾರೆ. ಫೋನ್ ಕರೆ ಬಂದಾಗ ವಾಹನ ಚಾಲಕರು, ಸವಾರರು ತಕ್ಷಣವೇ ರಸ್ತೆ ಬದಿಗೆ ಸರಿಯುತ್ತಾರೆ, ಇದರಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಟ್ರಾಫಿಕ್ ರಸ್ತೆಯಲ್ಲಿ ವಾಹನ ನಿಲ್ಲಿಸಿದಾಗ ಸಮಸ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣದಿಂದ ಟ್ರಾಫಿಕ್ ಜಾಮ್, ಅಪಘಾತ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಚಂಡಿಗಢ ಪೊಲೀಸರು ಈ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ:ಟ್ರಾಫಿಕ್ ನಿಯಮ ಉಲ್ಲಂಘಿಸಿದ 2 ಕೋಟಿ ಮೌಲ್ಯದ ಪೊರ್ಶೆ ಕಾರಿಗೆ 2.8 ಲಕ್ಷ ರೂ ದಂಡ!

ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೆ ಮೊದಲ ಬಾರಿಗೆ 500 ರೂಪಾಯಿ ದಂಡ 2ನೇ ಬಾರಿಗೆ 1000 ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಇನ್ನು ಎರಡಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮಾಡಿದರೆ ಲೈಸೆನ್ಸ್ ರದ್ದಾಗಲಿದೆ. ಈ ನಿಯಮ ಪರಿಣಾಮಕಾರಿಯಾದರೆ ಇತರ ರಾಜ್ಯಗಳ ನಗರಗಳಲ್ಲೂ ಈ ನಿಯಮ ಜಾರಿಯಾಗುವು ಸಾಧ್ಯತೆ ಇದೆ.
 

click me!