ಓಲಾ ಸ್ಕೂಟರ್ಸ್‌ ಮಾತ್ರವಲ್ಲ, ಸರ್ವೀಸ್‌ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!

Published : Dec 20, 2025, 10:31 PM IST
Ola Electric Motorcycles

ಸಾರಾಂಶ

ಓಲಾ ಎಲೆಕ್ಟ್ರಿಕ್ ತನ್ನ ಆಕ್ರಮಣಕಾರಿ ಮಾರಾಟಕ್ಕೆ ಹೆಸರುವಾಸಿಯಾಗಿದೆ, ಆದರೆ ಅದರ ಮಾರಾಟದ ನಂತರದ ಸೇವೆ ತೀರಾ ನಿಧಾನಗತಿಯಲ್ಲಿದೆ. ಈ ಮೊದಲು ಸ್ಕೂಟರ್‌ಗಳಿಗೆ ಸೀಮಿತವಾಗಿದ್ದ ಸರ್ವೀಸ್ ವಿಳಂಬದ ಸಮಸ್ಯೆಯು ಈಗ ಕಂಪನಿಯ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೂ ವ್ಯಾಪಿಸಿದೆ.

ಬೆಂಗಳೂರು (ಡಿ.20): ಓಲಾ ಎಲೆಕ್ಟ್ರಿಕ್ ತನ್ನ ಬ್ರ್ಯಾಂಡ್ ಅನ್ನು ವೇಗ, ಫಾಸ್ಟ್‌ ಲಾಂಚ್‌, ಫಾಸ್ಟರ್‌ ಡೆಲಿವರಿ ಮತ್ತು ಆಕ್ರಮಣಕಾರಿ ವಿಸ್ತರಣೆಯ ಮೇಲೆ ನಿರ್ಮಿಸಿದೆ. ಆದರೆ ಅನೇಕ ಗ್ರಾಹಕರಿಗೆ, ಡೆಲಿವರಿ ನಂತರದ ಅನುಭವವು ತುಂಬಾ ನಿಧಾನವಾಗಿದೆ. ರೆಡ್ಡಿಟ್‌ನಲ್ಲಿ ಓಲಾದ ಸಮಸ್ಯೆಯನ್ನು ಹೇಳಿಕೊಂಡಿರುವ ಗ್ರಾಹಕರೊಬ್ಬರು ಓಲಾ ತನ್ನ ಸ್ಕೂಟರ್‌ಗಳ ವಿಚಾರದಲ್ಲಿ ಮಾತ್ರವಲ್ಲ, ತನ್ನ ಮೋಟಾರ್‌ಸೈಕಲ್‌ಗಳ ಸರ್ವೀಸ್‌ನಲ್ಲೂ ಬಹಳ ಹಿಂದಿದೆ ಎಂದು ಹೇಳಿದ್ದಾರೆ. ಇದು ಸರ್ವೀಸ್‌ ವಿಚಾರದಲ್ಲಿ ಕಂಪನಿಯು ಬಹಳ ದಯನೀಯ ಸ್ಥಿತಿಯಲ್ಲಿದೆ ಅನ್ನೋದನ್ನು ತೋರಿಸಿದೆ. ಸರ್ವೀಸ್‌ ವಿಳಂಬ ಇಲ್ಲಿಯವರೆಗೆ ಸ್ಕೂಟರ್‌ಗಳ ವಿಚಾರದಲ್ಲಿ ಮಾತ್ರವೇ ಇತ್ತು. ಈಗ ಎಲೆಕ್ಟ್ರಿಕ್‌ ಮೋಟಾರ್‌ಸೈಕಲ್‌ಗಳು ಕೂಡ ಅದೇ ಹಾದಿಯಲ್ಲಿವೆ ಎಂದು ಹೇಳಿದ್ದಾರೆ.

ತನ್ನ ಕಂಪನಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತಾರ ಮಾಡುವಲ್ಲಿ ಶ್ರಮ ತೋರುತ್ತಿರುವ ಕಂಪನಿ ಅದೇ ಶ್ರಮವನ್ನು ಸರ್ವೀಸ್‌ ವಿಚಾರದಲ್ಲಿ ತೋರಲಿದೆಯೇ ಅನ್ನೋದು ಪ್ರಮುಖ ಪ್ರಶ್ನೆಯಾಗಿ ಕಾಡಿದೆ.

ಕಳೆದ ವರ್ಷದಲ್ಲಿ, ನಗರಗಳಾದ್ಯಂತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು ಪದೇ ಪದೇ ಸರ್ವೀಸ್‌ ವಿಚಾರದಲ್ಲಿ ದೂರು ದಾಖಲಿಸಿದ್ದಾರೆ. ಸರ್ವೀಸ್‌ ಅಪಾಯಿಂಟ್‌ಮೆಂಟ್‌ಗೆ ತುಂಬಾ ದೀರ್ಘ ಸಮಯ ಕಾಯಬೇಕು. ವಾರಗಟ್ಟಲೆ ಸರ್ವೀಸ್‌ ಸ್ಟೇಷನ್‌ನಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಬಿಡಿಭಾಗಗಳು ಹಾಗೂ ಅದರ ಅಪ್ರೂವಲ್‌ಗಳಲ್ಲಿ ವಿಳಂಬ. ವಾಹನ ಇರುವ ಪ್ರಮಾಣಕ್ಕೆ ಹೋಲಿಸಿದರೆ, ಸರ್ವೀಸ್‌ ಸೆಂಟರ್‌ಗಳ ಸಂಖ್ಯೆ ಕಡಿಮೆ ಎಂದು ಹೇಳಲಾಗಿದೆ. ಓಲಾ ರಿಮೋಟ್ ಡಯಾಗ್ನೋಸ್ಟಿಕ್ಸ್ ಮತ್ತು ಅಪ್ಲಿಕೇಶನ್-ಆಧಾರಿತ ಬೆಂಬಲವನ್ನು ಪರಿಚಯಿಸಿದರೂ, ಅನೇಕ ಸಮಸ್ಯೆಗಳಿಗೆ ಇನ್ನೂ ಭೌತಿಕ ಹಸ್ತಕ್ಷೇಪದ ಅಗತ್ಯವಿರುತ್ತದೆ. ಇಲ್ಲಿಯೇ ದೊಡ್ಡ ಮಟ್ಟದ ಸಮಸ್ಯೆ ಕಂಡಿದೆ.

ಪ್ರತಿದಿನ ಸ್ಕೂಟರ್‌ಗಳನ್ನು ರೈಡ್‌ ಮಾಡುವವರಿಗೆ ಕಂಪನಿಯಿಂದ ಆಗಿರುವ ವಿಳಂಬದಿಂದ ಕೆಲಸಕ್ಕೆ ಹೋಗಲು ಸಮಸ್ಯೆ ಆಗುತ್ತಿದ್ದು, ಬೇರೆ ಸಾರಿಗೆ ಸಹನಾಯವನ್ನು ನೋಡುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಸ್ಕೂಟರ್‌ ಯಾವಾಗ ಸಿಗುತ್ತದೆ ಅನ್ನೋದರ ಬಗ್ಗೆ ಅವರಿಗೂ ಗ್ಯಾರಂಟಿ ಇಲ್ಲಂದತಾಗಿದೆ.

ಸುಧಾರಿಸಿದ ಓಲಾ ಎಲೆಕ್ಟ್ರಿಕ್‌ ಸರ್ವೀಸ್‌

ಓಲಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗಕ್ಕೆ ಪ್ರವೇಶಿಸಿದಾಗ, ಅದರ ಕಾರ್ಯಕ್ಷಮತೆಯಲ್ಲಿ ಸುಧಾರಣೆ ಮತ್ತು ಸ್ಕೂಟರ್ ಕಾರ್ಯಾಚರಣೆಗಳಿಂದ ಕಲಿತ ಪಾಠಗಳ ನಿರೀಕ್ಷೆಗಳು ಹುಟ್ಟಿಕೊಂಡಿದ್ದವು. ಆದರೆ, ಅದು ಸುಳ್ಳಾಗಿದೆ. ಆದರೆ, ಓಲಾ ಸರ್ವೀಸ್‌ ಯಾರ್ಡ್‌ಗಳಲ್ಲಿ ಸ್ಕೂಟರ್‌ಗಳ ಪಕ್ಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ನಿಲ್ಲುತ್ತಿದ್ದು, ಸರ್ವೀಸ್‌ ವಿಚಾರದಲ್ಲಿ ಓಲಾ ತುಂಬಾ ಹಿಂದುಳಿದಿದೆ ಅನ್ನೋದನ್ನು ತೋರಿಸಿದೆ.

ಅಲ್ಲದೆ, ಮೋಟಾರ್‌ಸೈಕಲ್‌ಗಳನ್ನು ದೀರ್ಘ ಸಂಚಾರಕ್ಕಾಗಿ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಪರ್ಫಾಮೆನ್ಸ್‌ ಬಹಳ ಮುಖ್ಯವಾಗುತ್ತದೆ.ಹೆಚ್ಚಿನವರಿಗೆ ಮೋಟಾರ್‌ಸೈಕಲ್‌ ತಮ್ಮ ಪ್ರೈಮರಿ ವೆಹಿಕಲ್‌ ಆಗಿರುತ್ತದೆ. ಹಾಗಾಗಿ ಮೋಟಾರ್‌ಸೈಕಲ್‌ ಸರ್ವೀಸ್‌ಅಲ್ಲೂ ಈ ಗತಿ ಆದರೆ, ಗ್ರಾಹಕರ ನಂಬಿಕೆ ಸಂಪೂರ್ಣವವಾಗಿ ಕುಸಿದು ಹೋಗಲಿದೆ.

ಎಲೆಕ್ಟಿಕ್‌ ವೆಹಿಕಲ್‌ಗಳದ್ದು ಇದೇ ಕಥೆ. ಇವುಗಳು ಹೆಚ್ಚಾಗಿ ಬ್ಯಾಟರಿಗಳ ಆರೋಗ್ಯ, ಸಾಫ್ಟ್‌ವೇರ್‌ ಅಪ್‌ಡೇಟ್‌, ಕಂಟ್ರೋಲರ್‌ ಹಾಗೂ ಮೋಟಾರ್‌ ಡಯಾಗ್ನೋಸ್ಟಿಕ್‌, ಕೌಶಲದ ಟೆಕ್ನಿಶಿಯನ್‌ ಹಾಗೂ ವಿಶೇಷಜ್ಞ ಟೂಲ್‌ಗಳ ಅಗತ್ಯ ಇರುತ್ತದೆ.

ICE ವಾಹನಗಳಿಗಿಂತ ಭಿನ್ನವಾಗಿ, ಹೆಚ್ಚಿನ EV ಸಮಸ್ಯೆಗಳನ್ನು ಸ್ಥಳೀಯ ಗ್ಯಾರೇಜ್‌ಗಳಿಂದ ಸರಿಪಡಿಸಲು ಸಾಧ್ಯವಿಲ್ಲ. ಇದು OEM ನೇತೃತ್ವದ ಸೇವಾ ಸಿದ್ಧತೆಯನ್ನು ಮಾತುಕತೆಗೆ ಒಳಪಡದಂತೆ ಮಾಡುತ್ತದೆ. ಸೇವಾ ಸಾಮರ್ಥ್ಯವು ಮಾರಾಟಕ್ಕಿಂತ ಹಿಂದುಳಿದಾಗ, ಬಾಕಿಗಳು ತ್ವರಿತವಾಗಿ ರೂಪುಗೊಳ್ಳುತ್ತವೆ.

 

PREV
Read more Articles on
click me!

Recommended Stories

ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!
ಹೊಸ ವರ್ಷಕ್ಕೆ ಹೊಸ ಫಾಸ್ಟಾಗ್ ನೀತಿ, ಟೋಲ್ ಪ್ಲಾಜಾದಲ್ಲಿ ಗೇಟ್ ಇರಲ್ಲ,ಸ್ಲೋ ಮಾಡಬೇಕಿಲ್ಲ