1 ಸಾವಿರ ರೂ.ಗೆ ಬುಕ್ ಮಾಡಿ EeVe ಎಲೆಕ್ಟ್ರಿಕ್ ಸ್ಕೂಟರ್!

Published : Aug 27, 2019, 09:34 PM IST
1 ಸಾವಿರ ರೂ.ಗೆ ಬುಕ್ ಮಾಡಿ EeVe ಎಲೆಕ್ಟ್ರಿಕ್ ಸ್ಕೂಟರ್!

ಸಾರಾಂಶ

ಕೇವಲ 1,000 ರೂಪಾಯಿಗೆ ನೂತನ EeVe ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಕಡಿಮೆ ಬೆಲೆಗೆ ಒಡಿಶಾದ ಕಟಕ್ ಮೂಲದ ಎಲೆಕ್ಟ್ರಿಕ್ ಕಂಪನಿ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಈ ಸ್ಕೂಟರ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.  

ಕಟಕ್(ಆ.27): ಭಾರತದಲ್ಲೀಗ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಒಡಿಶಾ ಮೂಲದ EeVe ಎಲೆಕ್ಟ್ರಿಕ್ ಮೋಟಾರ್ ಕಂಪನಿ ಇದೀಗ 4 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭಗೊಂಡಿದೆ. ಕೇವಲ 1,000 ರೂಪಾಯಿಗೆ ನೂತನ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. 

ಇದನ್ನೂ ಓದಿ: ಭರ್ಜರಿ ಆಫರ್ ಘೋಷಿಸಿದ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್‌; ಗ್ರಾಹಕನಿಗೆ ಉಚಿತ ವಿದೇಶ ಪ್ರವಾಸ!

EeVe ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4 ವೇರಿಯೆಂಟ್ ಲಭ್ಯವಿದೆ. ಕ್ಸೇನಿಯಾ, ಯುಆರ್, ವಿಂಡ್, 4ಯು ವೇರಿಯೆಂಟ್ ಬಿಡುಗಡೆಯಾಗುತ್ತಿದೆ.  250 ವ್ಯಾಟ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ನೂನತ ಸ್ಕೂಟರ್‌ನಲ್ಲಿ 60V 20 AH ಲಿಥೀಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. ಸಂಪೂರ್ಣ ಚಾರ್ಜ್‌ಗೆ 4 ರಿಂದ 6 ಗಂಟೆ ಸಮಯ ತೆಗದುಕೊಳ್ಳಲಿದೆ.

ಇದನ್ನೂ ಓದಿ: ಹಾರ್ಲೆ ಡೇವಿಡ್ಸನ್ ಎಲೆಕ್ಟ್ರಿಕ್ ಬೈಕ್ ಅನಾವರಣ; EV ಕಾರಿಗಿಂತ ದುಬಾರಿ!

ಒಂದು ಬಾರಿ ಚಾರ್ಜ್ ಮಾಡಿದರೆ 60 ರಿಂದ 70 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಆ್ಯಂಟಿ ಥೆಫ್ಟ್, ಕಿ ಲೆಸ್ ಎಂಟ್ರಿ ಸೇರಿದಂತೆ ಹಲವು ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ. ಸದ್ಯ ಈ ಸ್ಕೂಟರ್ ಬೆಲೆ ಬಹಿರಂಗವಾಗಿಲ್ಲ. ಕಂಪನಿ ಪ್ರಕಾರ ಕಡಿಮೆ ಬೆಲೆಗೆ ಸ್ಕೂಟರ್ ಬಿಡುಗಡೆ ಮಾಡಲಿದೆ. ನೂತನ EeVe ಎಲೆಕ್ಟ್ರಿಕ್ ಸ್ಕೂಟರ್ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 
 

PREV
click me!

Recommended Stories

ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ
ಭಾರತದಲ್ಲಿ ಈ ವರ್ಷ ಗರಿಷ್ಠ ಮಾರಾಟವಾದ ಕಾರ್‌ಗಳ ಲಿಸ್ಟ್‌, ಮಾರುತಿಗೆ ಸಾಟಿಯೇ ಇಲ್ಲ!