ಮಾರುತಿ ಸುಜುಕಿ ಸಂಸ್ಥೆಯ ನೂತನ ಎರ್ಟಿಗಾ ಕಾರು ಬಿಡುಗಡೆಯಾಗುತ್ತಿದೆ. ಹಲವು ಬದಲಾವಣೆಯೊಂದಿಗೆ ರಸ್ತೆಗಿಳಿಯುತ್ತಿರುವ ಈ ಕಾರು ಗ್ರಾಹಕರನ್ನ ಮೋಡಿ ಮಾಡಲು ಸಜ್ಜಾಗಿದೆ. ಸೆಕೆಂಡ್ ಜನರೇಶನ್ ಮಾರುತಿ ಎರ್ಟಿಗಾ ಕಾರಿನ ವಿಶೇಷತೆ ಏನು?
ನವದೆಹಲಿ(ಅ.13): ಮಾರುತಿ ಸುಜುಕಿ ಸಂಸ್ಥೆ ನೂತನ ಎರ್ಟಿಗಾ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ನೂತನ ಎರ್ಟಿಗಾ, ಭಾರತದಲ್ಲಿ ನವೆಂಬರ್ 21ರಂದು ಬಿಡುಗಡೆಯಾಗಲಿದೆ.
undefined
2,740MM ವೀಲ್ಹ್‌ಬೇಸ್ ಹೊಂದಿರು ನೂತನ ಎರ್ಟಿಗಾ ಹಳೇ ಕಾರಿಗೆ ಹೊಲೀಸಿದರೆ ಗಾತ್ರದಲ್ಲೂ ಬದಲಾವಣೆ ಮಾಡಲಾಗಿದೆ. LED ಹೆಡ್‌ಲ್ಯಾಂಪ್ಸ್ , ಮುಂಭಾಗದ ಗ್ರಿಲ್ ಸೇರಿದಂತೆ ಕೆಲ ಫೀಚರ್ಸ್‌ನಲ್ಲಿ ಬದಲಾವಣೆ ತರಲಾಗಿದೆ.
1.5 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿರುವ ನೂತನ ಎರ್ಟಿಗಾ 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸಿಮಿಶನ್(AMT)ಹೊಂದಿದೆ. 104 ಬಿಹೆಚ್‌ಪಿ ಪವರ್ ಹೊಂದಿದೆ. ಇನ್ನು 1.3 ಲೀಟರ್ ಡೀಸೆಲ್ ಇಂಜಿನ್ ಕೂಡ ಲಭ್ಯವಿದೆ.
ನೂತನ ಮಾರುತಿ ಎರ್ಟಿಗಾ ಕಾರಿನ ಬೆಲೆ ಕುರಿತು ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಡೀಸೆಲ್ ವೇರಿಯೆಂಟ್ ಕಾರಿಗೆ 75,000 ಡಿಸ್ಕೌಂಟ್ ಘೋಷಿಸಿದೆ.