ಮತ್ತೆ ಸದ್ದು ಮಾಡಲಿದೆ ಜಾವಾ ಬೈಕ್-ನ.15ಕ್ಕೆ ಅನಾವರಣ

By Web DeskFirst Published Oct 24, 2018, 1:28 PM IST
Highlights

ಜಾವಾ ಬೈಕ್ ಭಾರತದಲ್ಲಿ ಮೋಡಿ ಮಾಡಿ ವರುಷಗಳೇ ಉರುಳಿದೆ. ಇದೀಗ ಮತ್ತೆ ಭಾರತದ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಜಾವಾ ಬೈಕ್ ಸಜ್ಜಾಗಿದೆ. ಶೀಘ್ರದಲ್ಲೇ ಹಳೇ ಜಾವಾ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಸೂಪರ್ ಬೈಕ್‌ನ ವಿಶೇಷತೆ ಏನು? ಇಲ್ಲಿದೆ

ಬೆಂಗಳೂರು(ಅ.24): ಒಂದು ಕಾಲದಲ್ಲಿ ಭಾರಿ ಹವಾ ಮೇಂಟೇನ್ ಮಾಡಿದ್ದ ಜಾವಾ ಬೈಕುಗಳು ಮತ್ತೆ ಬರಲಿವೆ. ಮಹಿಂದ್ರಾ ಕಂಪನಿ ಒಡೆತನದ ಈ ಜಾವಾ ಬೈಕ್ ನವೆಂಬರ್ 15 ರಂದು ಲೋಕಾರ್ಪಣೆಗೊಳ್ಳಲಿದೆ. ಈ ಬೈಕುಗಳ ಕುರಿತು ಈಗಾಗಲೇ ಕುತೂಹಲ ಹುಟ್ಟಿಕೊಂಡಿವೆ. 

6 ಸ್ಪೀಡ್ ಗೇರ್ ಬಾಕ್ಸ್ ಇರುವ 293 ಸಿಸಿಯ ಬೈಕ್ ಅನ್ನು ಬಿಡುಗಡೆಗೊಳಿಸುವುದಾಗಿ ಕಂಪನಿಯ ಪ್ರಕಟಣೆ ತಿಳಿಸಿದೆ. ಇದರಿಂದ ಬೈಕ್ ಪ್ರೇಮಿಗಳಂತೂ ತುಂಬಾ ಖುಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಜಾವಾ ಬೈಕ್‌ಗಳ ಕುರಿತು ಒಂದಿಷ್ಟು ಮಾಹಿತಿ.

Latest Videos

1)ಇದು ಮಹಿಂದ್ರಾ ಉತ್ಪನ್ನ:  ಜಾವಾ ಅನ್ನುವುದಕ್ಕಿಂತ ಯೆಜ್ಡಿ ಎಂದರೆ ತುಂಬಾ ಬೇಗ ಅರ್ಥವಾಗುತ್ತೆ. ಯೆಜ್ಡಿ ಬೈಕುಗಳು ಒಂದು ಕಾಲದಲ್ಲಿ ತರುಣರ ಕನಸಾಗಿತ್ತು. ಮಹಿಂದ್ರಾ ಕಂಪನಿ ಈ ಬೈಕುಗಳ ಒಡೆತನ ಹೊಂದಿತ್ತು. ಕಾಲ ಕಳೆದಂತೆ ಮಹಿಂದ್ರಾ ಟೂ ವೀಲರ್ ಉತ್ಪಾದನೆ ನಿಲ್ಲಿಸಿದ್ದರಿಂದ ಜಾವಾ ಬೈಕುಗಳು ಪಯಣ ನಿಲ್ಲಿಸಿದ್ದವು. ಇದೀಗ ಮತ್ತೆ ಮಹೀಂದ್ರಾ ಜಾವಾ ಹೊರತರುತ್ತಿದೆ.

2) ಭಾರಿ ಕಾಂಪಿಟಿಷನ್: ಈಗೀಗ ಬೈಕುಗಳ ನಡುವೆ ಭಾರಿ ಕಾಂಪಿಟಿಷನ್. ಅದರಲ್ಲೂ ರಾಯಲ್ ಎನ್‌ಫೀಲ್ಡ್ ಭಾರಿ ಹವಾ ಕ್ರಿಯೇಟ್ ಮಾಡಿದೆ. ಇದೀಗ ಜಾವಾ ಬೈಕುಗಳು ಬರುವುದರಿಂದ ಎನ್‌ಫೀಲ್ಡ್‌ಗಳಿಗೆ ಸ್ಪರ್ಧೆ ಎದುರಾಗಲಿದೆ. ಜಾವಾ 300 ಬೈಕುಗಳು ಹವಾ ಕ್ರಿಯೇಟ್ ಮಾಡುವುದಂತೂ ನಿಶ್ಚಿತ.

3)ರೆಟ್ರೋ ಸ್ಟೈಲ್:  ಹೊಸ ಜನರೇಷನ್ ರೆಟ್ರೋ ಸ್ಟೈಲ್ ಅನ್ನು ಬಹಳ ಇಷ್ಟ ಪಡುವುದರಿಂದ ಜಾವಾ ಬೈಕುಗಳು ಯಂಗ್ ಜನರೇಷನ್ನಿನ ಹೊಸ
ಆಕರ್ಷಣೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಜಾವಾ ರೆಟ್ರೋ ಸ್ಟೈಲ್‌ಗೆ ಭಾರಿ ಫೇಮಸ್ಸು. ಕ್ಲಾಸಿಕ್ ಡಿಸೈನ್ ಹೊಂದಿರಲಿದೆ
ಎನ್ನುವುದೇ ಇದರ ವಿಶೇಷತೆ.

click me!