ಮಾರುಕಟ್ಟೆಯಲ್ಲಿ ಹೊಸ ಕಾರು ಬಾರು; ನಿಮ್ಮ ಆಯ್ಕೆ ಯಾವುದು?

By Suvarna News  |  First Published Mar 12, 2020, 8:45 PM IST

ನೀವು ಕಾರು ಪ್ರಿಯರಾಗಿದ್ದರೆ, ಹೊಸ ಕಾರು ಕೊಳ್ಳಬೇಕು ಎಂದುಕೊಂಡಿದ್ದರೆ, ಭವಿಷ್ಯದಲ್ಲಿ ಸ್ವಂತ ಕಾರು ಹೊಂದಬೇಕು ಎನ್ನುವ ಆಸೆ ಇದ್ದರೆ ಇತ್ತ ಕೊಂಚ ಗಮನ ನೀಡಿ. ಭಾರತದ ಮಾರುಕಟ್ಟೆಇದೀಗ ಹೊಸ ಬಗೆಯ ಕಾರುಗಳ ಆಗಮನವಾಗಿದೆ. ಹೊಸ ಕಾರುಗಳ ಕುರಿತ ವಿವರ ಇಲ್ಲಿದೆ. 
 


ಬಿಎಂಡ್ಲ್ಯೂ ಎಕ್ಸ್‌ 1


ಐಶಾರಾಮಿ ಕಾರಿಗೆ ಹೆಸರಾದ ಬಿಎಂಡ್ಲ್ಯೂ ಇದೀಗ ಭಾರತೀಯ ಮಾರುಕಟ್ಟೆಗೆ ಬಿಎಂಡ್ಲ್ಯೂ ಎಕ್ಸ್‌ 1 ಸೀರಿಸ್‌ನ ಕಾರುಗಳನ್ನು ಪರಿಚಯಿಸಿದೆ. ಸ್ಪೋಟ್ಸ್‌ರ್‍ ಎಕ್ಸ್‌, ಎಕ್ಸ್‌ಲೈನ್‌ ಮತ್ತು ಎಂ ಸ್ಪೋಟ್ಸ್‌ರ್‍ ಹೆಸರಿನ ಮೂರು ಆವೃತ್ತಿಗಳನ್ನು ಈ ಸೀರಿಸ್‌ನಲ್ಲಿ ಬಿಎಂಡ್ಲ್ಯೂ ಬಿಟ್ಟಿದೆ. ಪೆಟ್ರೋಲ್‌ ಮತ್ತು ಡಿಸೆಲ್‌ ಎರಡೂ ಆವೃತ್ತಿಯಲ್ಲಿ ಲಭ್ಯವಿರುವ ಈ ಕಾರುಗಳ ಬೆಲೆ ರು. 35,90.000 ದಿಂದ 42,90.000 ವರೆಗೆ ಇರಲಿದೆ. ಪ್ರಾರಂಭದ ಬುಕ್ಕಿಂಗ್‌ಗಳಿಗೆ 5 ವರ್ಷ ಅಥವಾ 60.000 ಕಿಮೀಗಳ ವಿಶೇಷ ವಾರಂಟಿ ಆಫರ್‌ ನೀಡುತ್ತಿದೆ ಬಿಎಂಡ್ಲ್ಯೂ ಕಂಪನಿ.

Tap to resize

Latest Videos

undefined

ಸ್ಪಿರಿಟೆಡ್‌ ನ್ಯೂ ವರ್ನಾ


ಹ್ಯೂಂಡಯ್‌ ಕಂಪನಿಯ ವರ್ನಾ ಕಾರು ಹೆಚ್ಚು ಬೇಡಿಕೆ ಮತ್ತು ಮೆಚ್ಚುಗೆ ಪಡೆದ ಕಾರುಗಳ ಪಟ್ಟಿಗೆ ಸೇರಿದೆ. ಬಜೆಟ್‌ ಫ್ರೆಂಡ್ಲಿ, ಆಕರ್ಷಕ, ಐಶಾರಾಮಿ ಫೀಲ್‌ ನೀಡುವ ಈ ಆವೃತ್ತಿಯಲ್ಲಿ ಇದೀಗ ಸ್ಪಿರಿಟೆಡ್‌ ನ್ಯೂ ವರ್ನಾ ಎನ್ನುವ ಹೊಸ ಕಾರು ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಕಂಪನಿ ಇದರ ಇಮೇಜ್‌ ಲಾಂಚ್‌ ಮಾಡಿದ್ದು, ಸಾಕಷ್ಟುಮಂದಿಯ ಗಮನವನ್ನೂ ಸೆಳೆದಿದೆ. ಅದ್ಭುತ ವಿನ್ಯಾಸ, ಅತ್ಯುತ್ತಮ ಲಕ್ಷಣಗಳು, ಹೆಚ್ಚಿನ ವಿಶ್ವಾಸಾರ್ಹತೆ, ಸುಧಾರಿತ ತಂತ್ರಜ್ಞಾನ ಮತ್ತು ಯೂತ್‌ಫುಲ್‌ ಪರ್ಫಾಮೆನ್ಸ್‌ ಅನ್ನು ಇದು ಒಳಗೊಂಡಿದ್ದು, ಈ ಐದು ಅಂಶಗಳು ಕಾರಿನ ಐದು ಪಿಲ್ಲರ್‌ ಎಂದು ಕಂಪನಿ ಹೇಳಿಕೊಂಡಿದೆ.

ಮಿನಿ ಕ್ಲಬ್‌ಮ್ಯಾನ್‌


ಈ ಹಿಂದೆಯೇ ಮಿನಿ ಕ್ಲಬ್‌ಮ್ಯಾನ್‌ ಇಂಡಿಯನ್‌ ಸಮ್ಮರ್‌ ರೆಡ್‌ ಎಡಿಷನ್‌ ಭಾರತದಲ್ಲಿ ಬಿಡುಗಡೆಯಾಗಿದೆ. ಬುಕ್ಕಿಂಗ್‌ ಕೂಡ ಆರಂಭವಾಗಿದೆ. ವಿಶೇಷ ವಿನ್ಯಾಸ, ಅಧಿಕ ದಕ್ಷತೆ, ಹೊಸತನದಿಂದ ಕೂಡಿರುವ ಮಿನಿ ಕ್ಲಬ್‌ಮ್ಯಾನ್‌ಗೆ ಈಗಾಗಲೇ ಹೆಚ್ಚು ಹೆಚ್ಚು ಬೇಡಿಕೆ ಬರುತ್ತಿದೆ. ಕೇವಲ 7.2 ಸೆಕೆಂಡುಗಳಲ್ಲಿ 100 ಕಿಮೀ ವೇಗ ಪಡೆದುಕೊಳ್ಳುವ ಸಾಮರ್ಥ್ಯವಿರುವ ಈ ಕಾರು ಯುವಕರ ಹಾಟ್‌ ಫೇವರೇಟ್‌. ರು. 44,90,000 ಎಕ್ಸ್‌ ಶೋ ರೂಂ ಬೆಲೆಯುಳ್ಳ ಮಿನಿ ಕ್ಲಬ್‌ಮ್ಯಾನ್‌ ಅತ್ಯುತ್ತಮ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.

ಕಿಯಾ ಮೋಟಾ​ರ್ಸ್


2017ರಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಉತ್ಪಾದನಾ ಕೇಂದ್ರವನ್ನು ಆರಂಭಿಸಿ ಹೊಸ ಬಗೆಯ ಕಾರುಗಳ ಉತ್ಪಾದನೆಯಲ್ಲಿ ತೊಡಗಿದ ಸಂಸ್ಥೆ ಕಿಯಾ ಮೋಟಾರ್ಸ್. 2019ರಿಂದ ಅಧಿಕೃತವಾಗಿ ಉತ್ಪನ್ನಗಳ ಮಾರಾಟಕ್ಕಿಳಿದ ಕಿಯಾ ಇಂಡಿಯಾ ಇಂದು ದೇಶದ ಮುನ್ನೆಲೆಯ ಕಾರು ತಯಾರಿಕಾ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸದ್ಯ 15,644 ಯೂನಿಟ್‌ಗಳ ತಯಾರಿಕೆಯನ್ನು ಪೂರ್ಣ ಮಾಡಿಕೊಂಡಿದೆ. ಇಷ್ಟುಕಡಿಮೆ ಸಮಯದಲ್ಲಿ ಗ್ರಾಹಕರ ಮೆಚ್ಚುಗೆ ಗಳಿಸಿದ್ದಲ್ಲದೇ ವೇಗವಾಗಿ ಬೆಳೆಯುತ್ತಿರುವುದು ಕಿಯಾದ ಗುಣಮಟ್ಟಮತ್ತು ಒಳ್ಳೆಯ ಸೇವೆಗೆ ಸಾಕ್ಷಿಯಾಗಿದೆ.

click me!