ಬೆಂಗಳೂರು, ಮುಂಬೈ ಸೇರದಂತೆ ಮಹಾನರಗಳಲ್ಲಿ ಕಾರುಗಳ ಸರಾಸರಿ ಸಂಖ್ಯೆ ಎಷ್ಟಿದೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಯಾವ ನಗರ ಮೊದಲ ಸ್ಥಾನದಲ್ಲಿದೆ ಬೆಂಗಳೂರಿನಲ್ಲಿ ಪ್ರತಿ ಕಿ.ಮೀನಲ್ಲಿರುವ ವಾಹನಗಳ ಸರಾಸರಿ ಸಂಖ್ಯೆ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು(ಮಾ.29): ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಸಂಚಾರ ಮಾಡೋದೆ ದೊಡ್ಡ ತಲೆನೋವು. ವಾಹನಗಳಿಂದ ರಸ್ತೆಗಳು ತುಂಬಿ ಹೋಗಿರುತ್ತೆ. ಒಂದು ಸಿಗ್ನಲ್ ಬಳಿ ಕನಿಷ್ಟ 5 ಬಾರಿ ನಿಲ್ಲೋ ಸಂಕಟ, ಪಾರ್ಕಿಂಗ್ ಸಮಸ್ಯೆ..ಹೀಗೆ ನಗರ ಪ್ರಯಾಣ ಯಾರಿಗೂ ಬೇಡ. ಇದೀಗ ನಗರಗಳಲ್ಲಿ ಕಾರುಗಳ ಸಾಂದ್ರತೆ ಎಷ್ಟಿದೆ ಅನ್ನೋದು ಸಮೀಕ್ಷೆಯಿಂದ ಬಹಿರಂಗವಾಗಿದೆ.
ಇದನ್ನೂ ಓದಿ: ಖರೀದಿಸಿದ 2 ನಿಮಿಷದಲ್ಲಿ ಕಾಪೌಂಡ್‌ಗೆ ಡಿಕ್ಕಿ- 2.2 ಕೋಟಿ ಲ್ಯಾಂಬೋರ್ಗಿನಿ ಪುಡಿ ಪುಡಿ!
undefined
ಸಮೀಕ್ಷೆ ಪ್ರಕಾರ ಮುಂಬೈ ಗರಿಷ್ಠ ಕಾರು ಸಾಂದ್ರತೆ ಹೊಂದಿದ ನಗರವಾಗಿ ಬೆಳೆದಿದೆ. ಕಳೆದ 2 ವರ್ಷಗಳಲ್ಲಿ ಮುಂಬೈನಲ್ಲಿ ವಾಹನಗಳ ಸಂಖ್ಯೆ ಶೇಕಡಾ 18 ರಷ್ಟು ಏರಿಕೆಯಾಗಿದೆ. ಮುಂಬೈನಲ್ಲಿ ಪ್ರತಿ ಸ್ಕ್ವಾರ್ ಕಿ.ಮೀನಲ್ಲಿಯಲ್ಲಿ ವಾಹನ ಸಾಂದ್ರತೆ 510. ಇನ್ನು ಬೆಂಗಳೂರಿನ ವಾಹನ ಸಂಖ್ಯೆ 149 ಪ್ರತಿ ಕಿ.ಮೀಗೆ.
ಇದನ್ನೂ ಓದಿ: 'ಚೌಕಿದಾರ್' ನಂಬರ್ ಪ್ಲೇಟ್- ಬಿಜೆಪಿ MLA ಕಾರಿಗೆ ದಂಡ!
2016ರಲ್ಲಿ ಮುಂಬೈನಲ್ಲಿ ಪ್ರತಿ ಸ್ಕ್ವಾರ್ ಕಿ.ಮೀನಲ್ಲಿಯಲ್ಲಿ ವಾಹನ ಸಾಂದ್ರತೆ 430. ಆದರೆ ಇದೀಗ 510ಕ್ಕೆ ಏರಿಕೆಯಾಗಿದೆ. ಮುಂಬೈನ ಈಸ್ಟರ್ನ್ ಸಬರ್ಬ್‌ನಲ್ಲೇ 1.7 ಕೋಟಿ ಖಾಸಗಿ ಕಾರುಗಳಿವೆ. ಪೊವಾಯಿಯಲ್ಲಿ ಹೈ ಎಂಡ್ ಹಾಗೂ ದುಬಾರಿ ಕಾರುಗಳು ಹೆಚ್ಚಿದ್ದರೆ, ಚೆಂಬೂರ್ ಪ್ರದೇಶದಲ್ಲಿನ ಪ್ರತಿ ಮನೆಯಲ್ಲಿ ಕಾರುಗಳಿವೆ. ಈ ಎಲ್ಲಾ ಲೆಕ್ಕಾಚಾರಗಳು ಖಾಸಗಿ ಕಾರಿಗೆ ಮಾತ್ರ ಸಂಬಂಧಪಟ್ಟಿವೆ. ಇದರಲ್ಲಿ ಇತರ ವಾಹನಗಳನ್ನು ಸೇರಿಸಿಲ್ಲ.