
ಬೆಂಗಳೂರು(ಅ.11): ಭಾರತದಲ್ಲಿ 80ರ ದಶಕದಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ಭಾರಿ ಪೈಪೋಟಿ ನೀಡಿದ ಏಕೈಕ ಬೈಕ್ ಜಾವಾ. ಇದೀಗ ಜಾವಾ ಮತ್ತೆ ಭಾರತದ ಮಾರುಕಟ್ಟೆ ಪ್ರವೇಶಿಸೋ ಟೈಮ್ ಹತ್ತಿರ ಬರುತ್ತಿದೆ.
2016ರಲ್ಲಿ ಮಹೀಂದ್ರ ಮೋಟಾರು ಸಂಸ್ಥೆ ಜಾವಾ ಮೋಟಾರ್ ಸೈಕಲ್ ನಿರ್ಮಾಣದ ಹಕ್ಕನ್ನ ಪಡೆದಿದೆ. ಇನ್ನು 2018ರಲ್ಲಿ ಮಹೀಂದ್ರ ಮುಖ್ಯಸ್ಥ ಆನಂದ್ ಮಹೀಂದ್ರ, ಶೀಘ್ರದಲ್ಲೇ ಜಾವಾ ಭಾರತದ ರಸ್ತೆಗಿಳಿಯಲಿದೆ ಅನ್ನೋ ಸೂಚನೆ ನೀಡಿದ್ದರು. ಇದೀಗ ನೂತನ ಬೈಕ್ ಎಂಜಿನ್ ಫೋಟೋವನ್ನ ಮಹೀಂದ್ರ ರಿವೀಲ್ ಮಾಡಿದೆ.
293 ಲಿಕ್ವಿಡ್ ಕೂಲ್‌ಡ್ ಎಂಜಿನ್ ಜಾವಾ ಬೈಕ್ ಫೋಟೋ ಭಾರಿ ಸದ್ದು ಮಾಡುತ್ತಿದೆ. ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಜಾವಾ ಬೈಕ್ ಬಿಡುಗಡೆಯಾಗಲಿದೆ. ಹಿಂದಿನ ಜಾವಾ ಬೈಕ್ ವಿನ್ಯಾಸಕ್ಕೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ಬಿಡುಗಡೆ ಮಾಡಲು ಮಹೀಂದ್ರ ಸಜ್ಜಾಗಿದೆ.