ಸಂಪೂರ್ಣ ಚಾರ್ಜ್‌ಗೆ 700 ಕಿ.ಮೀ ಮೈಲೇಜ್; ಇದು ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು!

By Suvarna NewsFirst Published Jul 20, 2020, 5:41 PM IST
Highlights

ಬೆಂಗಳೂರಿನಿಂದ ಹಂಪಿಗೆ ತೆರಳಿ ಮತ್ತೆ ಹಂಪಿಯಿಂದ ಬೆಂಗಳೂರಿಗೆ ಯಾವುದೇ ಖರ್ಚಿಲ್ಲದೆ ಪ್ರಯಾಣ ಮಾಡಲು ಸಾಧ್ಯವೆ. ಇದು ಸಾಧ್ಯವಾಗಿದೆ. ಕಾರಣ ಮರ್ಸಡೀಸ್ ಬೆಂಜ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬರೋಬ್ಬರಿ 7000 ಕಿ.ಮೀ. ಇದು ದಾಖಲೆ. ಟೆಸ್ಲಾ ಕಾರು ಹೊರತು ಪಡಿಸಿದೆರೆ ಇದುವರೆಗಿನ ಎಲ್ಲಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ 500ರ ಗಡಿ ದಾಟಿಲ್ಲ.

ಜರ್ಮನ್(ಜು.20): ಐಷಾರಾಮಿ ಹಾಗೂ ದುಬಾರಿ ಕಾರಾದ ಮರ್ಸಡೀಸ್ ಬೆಂಜ್ ಈಗಾಗಲೇ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರನ್ನ ಪ್ರದರ್ಶಿಸಿದೆ. ಮರ್ಸಡೀಸ್ ಬೆಂಜ್ EQS ಎಲೆಕ್ಟ್ರಿಕ್ ಕಾರು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಮುಖ್ಯವಾಗಿ ಇದರ ಮೈಲೇಜ್ ದಾಖಲೆ ಬರದಿದೆ. ಕಾರಣ ಒಂದು ಬಾರಿ ಚಾರ್ಜ್ ಮಾಡಿದರೆ 700 ಕಿ.ಮೀ ಪ್ರಯಾಣ ಮಾಡಬಹುದು.

ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

ಮರ್ಸಡೀಸ್ ಬೆಂಜ್ EQS ಕಾರಿನ ಮೈಲೇಜ್ 700 ಕಿ.ಮೀ ಇರಲಿದೆ ಎಂದು ಸ್ಪಷ್ಟಪಡಿಸಿದೆ. ಬಿಡುಗಡೆಯಾಗಲಿರುವ ನೂತನ EQS ಕಾರಿನ ಮೈಲೇಜ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ 500ರ ಗಡಿ ದಾಟಿಲ್ಲ. ಟೆಸ್ಲಾ ಮಾಡೆಲ್ ಎಸ್ ಕಾರು 647 ಕಿ.ಮೀ ಮೈಲೇಜ್ ನೀಡುತ್ತಿದೆ. ಇದು ಗರಿಷ್ಟವಾಗಿದೆ. ಆದರೆ ಇದೇ ಮೊದಲ ಬಾರಿಗೆ ಮರ್ಸಡೀಸ್ ಬೆಂಜ್ 700 ಕಿ.ಮೀ ಮೈಲೇಜ್ ಸಾಮರ್ಥ್ಯ ಕಾರು ಬಿಡುಗಡೆ ಮಾಡುತ್ತಿದೆ.

ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಬೆಂಜ್‌ ಲಕ್ಸ್‌ ಡ್ರೈವ್‌ ಕರಾಮತ್ತು!.

ಸದ್ಯದ ಬಿಡುಗಡೆಯಾಗಿರುವ ಎಲೆಕ್ಟ್ರಿಕ್ ಕಾರುಗಳೆಲ್ಲಾ ನಗರ ಪ್ರದೇಶಕ್ಕೆ ಸೂಕ್ತ ಎಂದು ಕಂಪನಿಗಳೇ ಹೇಳಿವೆ. ಕಾರಣ ಹೈವೇಗಳಲ್ಲಿ, ಲಾಂಗ್ ಟ್ರಿಪ್‌ಗಳಲ್ಲಿ ಬ್ಯಾಟರಿ ಜಾರ್ಜ್ ಮಾಡಬಲ್ಲ ಸ್ಟೇಶನ್‌ಗಳಿಲ್ಲ. ಹೀಗಾಗಿ ಲಾಂಗ್ ಡ್ರೈವ್‌ಗೆ ಎಲೆಕ್ಟ್ರಿಕ್ ಕಾರು ಸದ್ಯದ ಮಟ್ಟಿಗೆ ಸೂಕ್ತವಾಗಿರಲಿಲ್ಲ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಮರ್ಸಡೀಸ್ ಬೆಂಜ್ EQS ಉತ್ತರ ನೀಡಲಿದೆ. ಕಾರಣ ಒಂದು ಬಾರಿ ಚಾರ್ಜ್ ಮಾಡಿದರೆ ಗುರಿ ತಲುಪಿ ಮತ್ತೆ ಹಿಂತಿರುಗಬಲ್ಲ ಮೈಲೇಜ್ ಈ EQS ಕಾರು ನೀಡಲಿದೆ.

ಕೊರೋನಾ ವೈರಸ್ ಕಾರಣ EQS ಕಾರಿನ ಉತ್ಪಾದನೆ ವಿಳಂಬವಾಗಿದೆ. 700 ಮೈಲೇಜ್ ನೀಡಬಲ್ಲ ಮರ್ಸಡೀಸ್ ಬೆಂಜ್ EQS ಕಾರಿನ ಬೆಲೆ ದುಬಾರಿ ಅನ್ನೋದು ಬಿಡಿಸಿಹೇಳಬೇಕಿಲ್ಲ. ಸದ್ಯ ಈ ಕಾರಿನ ಬೆಲೆ ಬಹಿರಂಗೊಂಡಿಲ್ಲ. ಆದರೆ ಕೋಟಿಗಿಂತ ಕಡಿಮೆ ಇರಲ್ಲ.

click me!